ಬೆಂಗಳೂರು: ಕೇರಳಕ್ಕೆ ಮುಂಗಾರು ಎಂಟ್ರಿಯಾದ ಒಂದೆರಡು ದಿನದ ಬಳಿಕವಾದ್ರೂ ರಾಜ್ಯಕ್ಕೆ ಮುಂಗಾರು ಆಗಮನವಾಗಬೇಕಾಗಿತ್ತು. ಆದರೆ ಅರೇಬಿಯನ್ ಸಮುದ್ರದಲ್ಲಿ ಚಂಡಮಾರುತ ಸೃಷ್ಟಿಯಿಂದಾಗಿ ಮುಂಗಾರು ವಿಳಂಬವಾಗುತ್ತಿದೆ.
ರಾಜ್ಯಕ್ಕೆ ಮುಂಗಾರು ಕಾಲಿಡಲು ಸತಾಯಿಸುತ್ತಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು 12ರಂದು ಅಂದರೆ ಬುಧವಾರ ಮುಂಗಾರು ಎಂಟ್ರಿಯಾಗಬಹುದು ಎನ್ನುವ ನಿರೀಕ್ಷೆಯಿದೆ. ಇಂದು ಮುಂಗಾರು ರಾಜ್ಯಕ್ಕೆ ಪ್ರವೇಶ ಯಾವಾಗ ಆಗಬಹುದು ಅನ್ನುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮಾಹಿತಿ ಕೊಡುವ ಸಾಧ್ಯತೆ ಇದೆ. ರೈತರು ಕಣ್ಣುಬಾಯಿ ಬಿಟ್ಟು ಮುಂಗಾರಿಗೆ ಕಾಯುತ್ತಿದ್ದು ಬಾಯರಿದ ಡ್ಯಾಂಗಳು ಕೂಡ ವರುಣಾನಗಮನಕ್ಕೆ ಕಾದು ಕೂತಿದೆ.
Advertisement
Advertisement
ಇತ್ತ ಮುಂಬೈನಲ್ಲಿ ಮಳೆ ಆರ್ಭಟ ಮುಂದುವರಿದಿದ್ದು ರೈಲು ಸಂಚಾರ, ವಿಮಾನಯಾನ, ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ ಭಾರೀ ಮಳೆಯಿಂದಾಗಿ ಮುಂಬೈನಲ್ಲಿ ಇಳಿಯಬೇಕಾಗಿದ್ದ 11 ವಿಮಾನಗಳನ್ನು ಬೇರೆ ವಿಮಾನ ನಿಲ್ದಾಣಗಳಲ್ಲಿ ಇಳಿಸಲಾಗಿದೆ. ಅಲ್ಲದೇ ಕೆಲವು ವಿಮಾನಯಾನ ಸಂಚಾರವನ್ನು ರದ್ದು ಮಾಡಲಾಗಿದೆ. ಇದರ ಮಧ್ಯೆ ಉತ್ತರ ಭಾರತ ಸೇರಿ ದೆಹಲಿಯಲ್ಲಿ ಬಿಸಿಲಿನ ತಾಪ ಹೆಚ್ಚಿದೆ. ದೆಹಲಿಯಲ್ಲಿ ಬಿಸಿಲಿನ ತಾಪ 48 ಡಿಗ್ರಿ ಸೆಲ್ಸಿಯಸ್ ತಲುಪಿದೆ.