ಕರಾವಳಿಯಿಂದ 640 ಕಿ.ಮೀ ದೂರದಲ್ಲಿರೋ ಬಿಪರ್ಜೋಯ್ ಚಂಡಮಾರುತ – ಕರ್ನಾಟಕ ಸೇರಿ 3 ರಾಜ್ಯಗಳಿಗೆ ಅಲರ್ಟ್

Public TV
1 Min Read
Cyclone Biparjoy

ನವದೆಹಲಿ: ಅರಬ್ಬೀ ಸಮುದ್ರದ (Arabian Sea) ಕರಾವಳಿ (Coastal) ಭಾಗದಲ್ಲಿ ಭಾರೀ ಆತಂಕ ಮೂಡಿಸಿರುವ ಬಿಪರ್ಜೋಯ್ ಚಂಡಮಾರುತ (Cyclone Biparjoy) ಮುಂದಿನ 24 ಗಂಟೆಗಳಲ್ಲಿ ಇನ್ನಷ್ಟು ತೀವ್ರಗೊಳ್ಳಲಿದ್ದು ಉತ್ತರ ಈಶಾನ್ಯದೆಡೆಗೆ ಚಲಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಶನಿವಾರ ತಿಳಿಸಿದೆ.

ಪ್ರಸ್ತುತ ಚಂಡಮಾರುತ ಗೋವಾದಿಂದ (Goa) ಪಶ್ಚಿಮಕ್ಕೆ 690 ಕಿ.ಮೀ, ಮುಂಬೈನ ಪಶ್ಚಿಮ-ನೈಋತ್ಯಕ್ಕೆ 640 ಕಿ.ಮೀ ಹಾಗೂ ಪೋರಬಂದರ್‌ನಿಂದ ನೈಋತ್ಯಕ್ಕೆ 640 ಕಿ.ಮೀ ದೂರದಲ್ಲಿ ಇದ್ದು, ಗಂಟೆಗೆ 145 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಚಂಡಮಾರುತ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆ ಹಾಗೂ ಬಲವಾದ ಗಾಳಿಯನ್ನು ಉಂಟುಮಾಡುತ್ತದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ.

biporjoy cyclone

ಶನಿವಾರ ಹಾಗೂ ಭಾನುವಾರ ಬಿಪರ್ಜೋಯ್ ಚಂಡಮಾರುತದ ಅಬ್ಬರ ಜೋರಾಗಲಿದೆ. ಗುಜರಾತ್, ಮಹಾರಾಷ್ಟ್ರದ ಕರಾವಳಿಯಲ್ಲಿ ಉಬ್ಬರದ ಭೀತಿಯಿದೆ. ರಾಜ್ಯ ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಮಹಾರಾಷ್ಟ್ರ ಹಾಗೂ ಗುಜರಾತ್ ಕರಾವಳಿ ಭಾಗಗಳಲ್ಲಿ ಹೆಚ್ಚಿನ ಪ್ರಭಾವ ಸಾಧ್ಯತೆಯಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಇದನ್ನೂ ಓದಿ: ಶಕ್ತಿ ಯೋಜನೆಗೆ ಭಾನುವಾರ ಚಾಲನೆ- ಬಸ್ ಕಂಡಕ್ಟರ್ ಆಗಲಿದ್ದಾರೆ ಸಿದ್ದರಾಮಯ್ಯ

ಚಂಡಮಾರುತದಿಂದಾಗಿ ಜೂನ್ 10, 11 ಹಾಗೂ 12ರಂದು ಗಾಳಿಯ ವೇಗ ಗಂಟೆಗೆ 45-55 ಕಿ.ಮೀಗೆ ಏರುವ ಸಾಧ್ಯತೆಯಿದೆ. ಇದರಿಂದ ದಕ್ಷಿಣ ಸೇರಿದಂತೆ ಕರಾವಳಿ ಪ್ರದೇಶಗಳಲ್ಲಿ ಲಘು ಮಳೆ ಹಾಗೂ ಗುಡುಗು ಸಹಿತ ಮಳೆ ಸುರಿಯಬಹುದು. ಇದನ್ನೂ ಓದಿ:  ಉಡುಪಿಯಲ್ಲಿ ಗುಡುಗು ಸಹಿತ ಧಾರಾಕಾರ ಮಳೆ

Share This Article