ಕಾರವಾರ: ಮನೆಯಲ್ಲಿಯೇ ಕುಳಿತು ಕೆಲಸ ಮಾಡುವ ಆಸೆ ತೋರಿಸಿ, ಸೀಬರ್ಡ್ ನೌಕಾನೆಲೆಯ ಅಧಿಕಾರಿಯ ಪತ್ನಿಗೇ 1.17 ಲಕ್ಷ ರೂ. ವಂಚಿಸಿರುವ ಘಟನೆ ಕಾರವಾರದಲ್ಲಿ ನಡೆದಿದೆ.
ಮಹಿಳೆ ಆನ್‌ಲೈನ್‌ನಲ್ಲಿ ಉದ್ಯೋಗ ಮಾಹಿತಿ ಹುಡುಕುತ್ತಿದ್ದ ವೇಳೆ ಸಿಕ್ಕ ಶಾಪ್ಪೀ ಎಂಬ ಮೊಬೈಲ್ ಆ್ಯಪ್ ಅನ್ನು ಮೊದಲಿಗೆ ಡೌನ್‌ಲೋಡ್ ಮಾಡಿಕೊಂಡಿದ್ದರು. ಅದರಲ್ಲಿ ಮನೆಯಿಂದಲೇ ಕೆಲಸ ಮಾಡಿ ಹಣ ಸಂಪಾದಿಸಿ ಎಂಬ ಜಾಹೀರಾತನ್ನು ಕಂಡು, ತನ್ನ ವಾಟ್ಸಪ್‌ನಲ್ಲಿ ಸಂಪರ್ಕಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ತನ್ನ ಬ್ಯಾಂಕ್‌ನಿಂದಲೇ 1.50 ಕೋಟಿ ವಂಚಿಸಿದ ಮ್ಯಾನೇಜರ್
Advertisement
Advertisement
ವಂಚಕರು ಮೊದಲು ಕಮಿಷನ್ ರೂಪದಲ್ಲಿ ಅಲ್ಪ ಮೊತ್ತದ ಹಣವನ್ನು ಮಹಿಳೆಗೆ ಪಾವತಿಸಿದ್ದಾರೆ. ಹಣ ಸಿಕ್ಕ ಖುಷಿಯಲ್ಲಿದ್ದ ಮಹಿಳೆ ಬಳಿಕ ಆ್ಯಪ್ ಸೂಚಿಸಿದ ಕೆಲವು ಟಾಸ್ಕ್ಗಳನ್ನು ಪೂರ್ಣಗೊಳಿಸಲು ಮುಂದಾಗಿದ್ದಾರೆ. ಟಾಸ್ಕ್ಗಳು ಪೂರ್ಣಗೊಳ್ಳುತ್ತಿದ್ದಂತೆ ವಂಚಕರು ಮಹಿಳೆಯ ಬ್ಯಾಂಕ್ ಖಾತೆಗೇ ಕನ್ನ ಹಾಕಿದ್ದಾರೆ.
Advertisement
ಮಹಿಳೆ ತನಗೆ ಹಣ ಬರುತ್ತದೆ ಎಂದು ನಂಬಿ, ವಂಚಕರು ತಿಳಿಸಿದಂತೆ ತಾಂತ್ರಿಕ ಸಮಸ್ಯೆಯಾಗುತ್ತಿದೆ ಎಂಬ ಕಾರಣಕ್ಕೆ ಅವರು ಕಳುಹಿಸಿದ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದ್ದಾರೆ. ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುತ್ತಿದ್ದಂತೆ ಆಕೆಯ ಖಾತೆಯಿಂದ 1,17,600 ರೂ. ಬೇರೊಂದು ಖಾತೆಗೆ ವರ್ಗಾವಣೆ ಆಗಿದೆ. ಇದನ್ನೂ ಓದಿ: ಭಾರತದ 10, ಪಾಕಿಸ್ತಾನದ 6 ಯೂಟ್ಯೂಬ್ ಚ್ಯಾನೆಲ್‌ಗಳು ಬ್ಯಾನ್
Advertisement
ವಂಚಕರಿಂದ ಮೋಸ ಹೋಗಿರುವುದನ್ನು ಮಹಿಳೆ ತಿಳಿದ ತಕ್ಷಣ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಕಾರವಾರ ಸೈಬರ್ ಅಪರಾಧ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.