ಕಾರವಾರ: ಭಟ್ಕಳ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಜಾರ್ ಬ್ರಾಂಚ್‌ನ ವ್ಯವಸ್ಥಾಪಕ ಬ್ಯಾಂಕಿನ ಹಣವನ್ನು ದುರುಪಯೋಗ ಪಡಿಸಿಕೊಂಡು ಸುಮಾರು 1.50 ಕೋಟಿ ರೂ. ವಂಚಿಸಿರುವ ಘಟನೆ ನಡೆದಿದೆ.
ಭಟ್ಕಳ ಪಟ್ಟಣದ ಬಜಾರ್ ಶಾಖೆಯಲ್ಲಿ 2019 ರಿಂದ ಶಾಖಾ ವ್ಯವಸ್ಥಾಪಕನಾಗಿ ಕರ್ತವ್ಯ ನಿರ್ವಹಿಸಿದ್ದ ಅನೂಪ್ ದಿನಕರ್ ಪೈ ಬ್ಯಾಂಕಿನ ಹಣ ದುರುಪಯೋಗ ಮಾಡಿಕೊಂಡಿದ್ದಾನೆ. ಅನೂಪ್ ಬ್ಯಾಂಕಿನ ಗ್ರಾಹಕರೊಂದಿಗೆ ಸೇರಿಕೊಂಡು, ಸಿಸ್ಟಮ್ ಸಸ್ಪೆನ್ಸ್ ಖಾತೆಗೆ ಖರ್ಚು ಹಾಕಿ ಬ್ಯಾಂಕಿನ ಗ್ರಾಹಕರ ಖಾತೆಗೆ ಹಣ ಜಮಾ ಮಾಡಿ ತಾನೇ ವಿತ್ ಡ್ರಾ ಮಾಡಿಕೊಂಡು, ಅದರ ದುರುಪಯೋಗ ಮಾಡುತ್ತಿದ್ದ.
Advertisement
Advertisement
2019 ರಿಂದಲೂ ಅನೂಪ್ ಇದೇ ರೀತಿಯಾಗಿ ವಂಚನೆಯಲ್ಲಿ ತೊಡಗಿಕೊಂಡಿದ್ದು, 2022ರ ಆಡಿಟ್ ವೇಳೆ ಇದು ಬೆಳಕಿಗೆ ಬಂದಿದೆ. ಸುಮಾರು 1.50 ಕೋಟಿ ರೂ. ವಂಚನೆ ನಡೆದಿರುವುದು ತಿಳಿದುಬಂದ ತಕ್ಷಣ ಅನೂಪ್‌ನನ್ನು ಶಾಖಾ ವ್ಯವಸ್ಥಾಪಕ ಹುದ್ದೆಯಿಂದ ಸಸ್ಪೆಂಡ್ ಮಾಡಲಾಗಿತ್ತು. ಇದನ್ನೂ ಓದಿ: ನೀನು ದನ ಕಾಯೋನು, EO ಕೆಲಸದಲ್ಲಿ ಇದ್ದೀಯ – ಅಧಿಕಾರಿ ವಿರುದ್ಧ ಎಚ್.ಡಿ.ರೇವಣ್ಣ ಗರಂ
Advertisement
Advertisement
ವಂಚನೆ ನಡೆಸಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆ, ಇದೀಗ ಅನೂಪ್ ನಾಪತ್ತೆಯಾಗಿದ್ದಾನೆ. ಆತ ವಾಸವಿದ್ದ ಬಾಡಿಗೆ ಮನೆಯನ್ನು ಪೊಲೀಸರು ಶೋಧಿಸಿದ್ದಾರೆ.
ಶೋಧದ ವೇಳೆ ಪತ್ರ:
ಪೊಲೀಸರು ಅನೂಪ್ ವಾಸವಿದ್ದ ಬಾಡಿಗೆ ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಆತನ ಮೊಬೈಲ್ ಹಾಗೂ ಪತ್ರ ದೊರಕಿದೆ. ಪತ್ರದಲ್ಲಿ ಅನೂಪ್ ತನಗೆ ಆರೋಗ್ಯದ ಸಮಸ್ಯೆ ಇದ್ದು, ಚಿಕಿತ್ಸೆಗಾಗಿ ಮಂಗಳೂರು ತೆರಳುತ್ತಿದ್ದೇನೆ ಎಂದು ಬರೆದಿದ್ದಾನೆ. ಸೋಮವಾರ ಭಟ್ಕಳ ಸಿಪಿಐ ದಿವಾಕರ್ ಪಿ ನೇತೃತ್ವದಲ್ಲಿ ಮಂಗಳೂರಿಗೆ ಪೊಲೀಸರ ತಂಡವನ್ನು ಕಳುಹಿಸಲಾಗಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿಯಲ್ಲಿ ಮತ್ತೆ ಆಪರೇಷನ್ ಪಾಲಿಟಿಕ್ಸ್ – ಹಳೆ ಮೈಸೂರು ಭಾಗ ಟಾರ್ಗೆಟ್
ಬ್ಯಾಂಕ್ ಶಾಖೆಯಲ್ಲಿ ಅವ್ಯವಹಾರ ನಡೆದಿರುವುದು ಮೇಲಾಧಿಕಾರಿಗಳ ತಪಾಸಣೆಯಿಂದ ಗೊತ್ತಾಗಿದೆ. ಇದರಲ್ಲಿ ಗ್ರಾಹಕರಿಗೆ ಯಾವುದೇ ಮೋಸವಾಗಿಲ್ಲ. ಬ್ಯಾಂಕಿನ ಹಣವನ್ನು ದುರುಪಯೋಗ ಮಾಡಲಾಗಿದೆ. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ ಎಂದು ಶಾಖೆಯ ಹೊಸ ಮ್ಯಾನೇಜರ್ ರಾಘವೇಂದ್ರ ಮಾಹಿತಿ ನೀಡಿದ್ದಾರೆ.