ಚೆನ್ನೈ: ಪಾರ್ಸೆಲ್(Parcel) ತೆಗೆದುಕೊಂಡಿದ್ದ ಆಹಾರದಲ್ಲಿ ಇಲಿಯ(Rat) ತಲೆಬುರುಡೆ ಪತ್ತೆಯಾದ ಹಿನ್ನೆಲೆಯಲ್ಲಿ ಸಸ್ಯಾಹಾರಿ ರೆಸ್ಟೋರೆಂಟ್ ಅನ್ನು ಸೀಲ್ ಮಾಡಿರುವ ಘಟನೆ ತಮಿಳುನಾಡಿನಲ್ಲಿ(Tamil Nadu) ನಡೆದಿದೆ.
ತಮಿಳುನಾಡಿನ ತಿರುವಣ್ಣಾ ಮಲೈನ ಅರಣಿ ಪ್ರದೇಶದಲ್ಲಿರುವ ಸಸ್ಯಾಹಾರಿ ರೆಸ್ಟೋರೆಂಟ್‍ನಲ್ಲಿ(Vegetarian Restaurant) ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ಆಹಾರ ಸುರಕ್ಷತಾ ಇಲಾಖೆಯವರು ರೆಸ್ಟೋರೆಂಟ್‍ನ ಪರವಾನಗಿಯನ್ನು(License) ರದ್ದುಗೊಳಿಸಲಾಗಿದೆ.
Advertisement
Advertisement
ಆರ್. ಮುರುಳಿ ಎಂಬುವರು ಸಸ್ಯಾಹಾರಿ ರೆಸ್ಟೋರೆಂಟ್‍ನಿಂದ 100ಕ್ಕೂ ಹೆಚ್ಚು ಜನರಿಗೆ ಆಹಾರವನ್ನು(Food) ಆರ್ಡರ್ ಮಾಡಿದ್ದರು. ಇದನ್ನು ಆ ರೆಸ್ಟೋರೆಂಟ್ ಅವರ ಮನೆಗೆ ತಲುಪಿಸಿತ್ತು. ಇದಾದ ನಂತರ ಅಲ್ಲಿದ್ದ ಅತಿಥಿಗಳಲ್ಲಿ ಒಬ್ಬಾತನಿಗೆ, ಬೀಟ್‍ರೂಟ್‍ನಿಂದ ಮಾಡಿದ್ದ ತಿಂಡಿಯಲ್ಲಿ ಇಲಿಯ ತಲೆ ಬುರುಡೆ ಸಿಕ್ಕಿದೆ.
Advertisement
ಇದರಿಂದಾಗಿ ಆ ಅಡುಗೆಯನ್ನು ಹೋಟೆಲ್‍ಗೆ ತೆಗೆದುಕೊಂಡು ಬಂದು ದೂರು ನೀಡಿದ್ದಾರೆ. ಆದರೆ ಆಡಳಿತ ಮಂಡಳಿ ಈ ದೂರನ್ನು ಸ್ವೀಕರಿಸಲು ನಿರಾಕರಿಸಿದೆ. ಅಷ್ಟೇ ಅಲ್ಲದೇ ಕೆಲಕಾಲ ವಾಗ್ವಾದ ನಡೆದಿದೆ. ಈ ಹಿನ್ನೆಲೆಯಲ್ಲಿ ಮುರುಳಿ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ನಾವು ಕತ್ತೆ ಕಾಯೋಕೆ ಇಲ್ಲಿ ಬಂದಿಲ್ಲ- ಸದನದಲ್ಲಿ ಮಾಧುಸ್ವಾಮಿ ಗರಂ
Advertisement
ಘಟನೆಗೆ ಸಂಬಂಧಿಸಿ ಆಹಾರ ಸುರಕ್ಷತಾ ಅಧಿಕಾರಿಯು ದೂರಿನ ಮೇರೆಗೆ ಪರಿಶೀಲನೆ ನಡೆಸಲು ಹೋಟೆಲ್‍ಗೆ ತೆರಳಿದ್ದಾರೆ. ಆದರೆ ಅಲ್ಲಿ ಇಲಿಗಳು ಓಡಾಡುತ್ತಿರುವುದು ಕಂಡುಬಂದಿದೆ. ಹೋಟೆಲ್‍ನವರು ಅಡುಗೆ ಮಾಡುವ ಮುನ್ನ ಯಾವುದೇ ಸುರಕ್ಷತಾ ಕ್ರಮವನ್ನು ಮುಂಜಾಗ್ರತೆಯಾಗಿ ತೆಗೆದುಕೊಂಡಿಲ್ಲ ಎಂಬ ವಿಷಯ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಪರವಾನಗಿಯನ್ನು ರದ್ದು ಮಾಡಲಾಗಿದೆ. ಇದನ್ನೂ ಓದಿ: ಭೀಕರ ರಸ್ತೆ ಅಪಘಾತದಲ್ಲಿ ಮಂಗಳೂರು ಮೂಲದ ವೈದ್ಯೆ ದುರ್ಮರಣ