ರುಚಿಯಾದ ಸೌತೆಕಾಯಿ ಕಡುಬು ಮಾಡುವ ಸರಳ ವಿಧಾನ ನಿಮಗಾಗಿ

Public TV
1 Min Read
cucumber idli 3

ಡುಬು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ನಾವು ಇಂದು ಹೇಳುತ್ತಿರುವ   ಕಡುಬು ಸಖತ್ ಸ್ಪೆಷಲ್ ಆಗಿದೆ. ಸೌತೆಕಾಯಿಂದ ಈ ಕಡುಬನ್ನು ತಯಾರಿಸಬಹುದಾಗಿದೆ. ಈ ಕಡುಬನ್ನು ಮಾಡಲು ಟ್ರೈ ಮಾಡಿ, ನಿಮ್ಮ ಮನೆ ಮಂದಿಗೆ ಇಷ್ಟವಾಗದೇ ಇರುವುದರಲ್ಲಿ ಯಾವುದೇ ಅನುಮಾನವಿಲ್ಲ.

cucumber idli 1

ಬೇಕಾಗುವ ಸಾಮಗ್ರಿಗಳು:
* ಸೌತೆಕಾಯಿ- 2 ಕಪ್
* ರುಚಿಗೆ ತಕ್ಕಷ್ಟು ಉಪ್ಪು
* ಅಕ್ಕಿ- 1 ಕಪ್
* ಬೆಲ್ಲ – ಸ್ವಲ್ಪ
* ತೆಂಗಿನಕಾಯಿ – ಅರ್ಧ ಕಪ್
* ತುಪ್ಪ – ಸ್ವಲ್ಪ

ಮಾಡುವ ವಿಧಾನ
* ಸೌತೆಕಾಯಿಯನ್ನು ತೆಗೆದುಕೊಂಡು ಪೂರ್ಣವಾಗಿ ತುರಿಯಿರಿ. ರಸವನ್ನು ಹಿಂಡಿ. ಸೌತೆಕಾಯಿ ಮತ್ತು ರಸವನ್ನು ಬೇರೆ ಮಾಡಿಟ್ಟುಕೊಳ್ಳಬೇಕು. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ
* ಅಕ್ಕಿಯನ್ನು ರಾತ್ರಿಯಿಡೀ ನೆನೆಸಿಟ್ಟಿರಬೇಕು.

cucumber

* ಮಿಕ್ಸಿಗೆ ಬೆಲ್ಲ, ತೆಂಗಿನಕಾಯಿ ಸೇರಿಸಿ ಸೌತೆಕಾಯಿ ರಸವನ್ನು ಸೇರಿಸಿ ರುಬ್ಬಿಕೊಳ್ಳಬೇಕು.

*ನಂತರ ರುಬ್ಬಿದ ಮಿಶ್ರಣ, ಸೌತೆಕಾಯಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನೂ ಓದಿ: ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ

cucumber

* ಬಾಳೆ ಎಲೆಗೆ ತುಪ್ಪ ಸವರಿ ತಯಾರಿಸಿದ ಮಿಶ್ರಣವನ್ನು ತುಂಬಿ ಬಾಳೆ ಎಲೆಯನ್ನು ಚೆನ್ನಾಗಿ ಮಡಚಬೇಕು. ಇದನ್ನೂ ಓದಿ: ರವಾ ಚಪಾತಿ ಮಾಡುವ ಸುಲಭ ವಿಧಾನ ನಿಮಗಾಗಿ

cucumber idli
* ಈಗ ಇಡ್ಲಿ ಪಾತ್ರೆಯಲ್ಲಿ ಹಾಕಿ ಬೇಯಿಸಿದರೆ ರುಚಿಯಾದ ಸೌತೆಕಾಯಿ ಕಡುಬು ಸವಿಯಲು ಸಿದ್ಧವಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *