ನವದೆಹಲಿ: ಹಿಂದುಗಳ ಗುರುತಿನಲ್ಲಿ ಸ್ಫೋಟ ನಡೆಸಲು ಪ್ಲ್ಯಾನ್ ಮಾಡಿದ್ದಾರೆ. ಇದನ್ನೇ ಆಧರಿಸಿ ಕೆಲವು ರಾಜಕಾರಣಿಗಳು ಹಿಂದೂಗಳ ತಲೆಗೆ ಕಟ್ಟುವ ಪ್ರಯತ್ನ ನಡೆದು ಬಿಟ್ಟಿತ್ತು. ಹಿಂದೂ ಸಂಘಟನೆಗಳನ್ನು ಟಾರ್ಗೆಟ್ ಮಾಡಲಾಗುತ್ತಿತ್ತು. ದೇವರ ದಯೆಯಿಂದ ಇದು ಸಾಧ್ಯವಾಗಲಿಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಹೇಳಿದರು.
Advertisement
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ (Cooker Bomb Blast) ವಿಚಾರಕ್ಕೆ ಪ್ರತಿಕ್ರಿಯಿಸಿ, ದೇವರು ನಮ್ಮ ಕಡೆಗೆ ಇದ್ದಾನೆ. ಹಿಂದೆಯೂ ಹಿಂದೂಗಳ ವಿರುದ್ಧ ಕ್ರಿಶ್ಚಿಯನ್‍ರನ್ನ ಎತ್ತಿಕಟ್ಟುವ ಪ್ರಯತ್ನ ನಡೆದಿತ್ತು. ಈಗ ಕೊಯಮತ್ತೂರು ಬಳಿಕ ಕರ್ನಾಟಕದಲ್ಲಿ ಸ್ಫೋಟ ವಿಫಲವಾಗಿದೆ ಎಂದರು.
Advertisement
Advertisement
ಹಿಂದುಗಳು ಗುರುತಿನಲ್ಲಿ ಸ್ಫೋಟ ನಡೆಸಲು ಪ್ಲಾನ್ ಮಾಡಿದ್ದಾರೆ. ಇದನ್ನೇ ಆಧರಿಸಿ ಕೆಲವು ರಾಜಕಾರಣಿಗಳು ಹಿಂದೂಗಳ ತಲೆಗೆ ಕಟ್ಟುವ ಪ್ರಯತ್ನ ನಡೆದು ಬಿಟ್ಟಿತ್ತು. ಹಿಂದೂ ಸಂಘಟನೆಗಳನ್ನು ಟಾರ್ಗೆಟ್ ಮಾಡಲಾಗುತ್ತಿತ್ತು. ದೇವರ ದಯೆಯಿಂದ ಇದು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
Advertisement
ನಾನು ಸಿಎಂ ಜೊತೆಗೆ ವೈಯಕ್ತಿಕವಾಗಿ ಮಾತನಾಡಿ ಎನ್‍ಐಎಗೆ ನೀಡಲು ಆಗ್ರಹಿಸಿದ್ದೇನೆ. ಇದನ್ನು ಲಘುವಾಗಿ ಪರಿಗಣಿಸಬಾರದು. ಇದರ ಹಿಂದೆ ಜಿಹಾದಿ ಮಾನಸಿಕತೆ ಇದೆ. ದೊಡ್ಡ ಷಡ್ಯಂತ್ರ ನಡೆದಿರುವ ಸಾಧ್ಯತೆ ಇದೆ. ಸ್ಫೋಟಕ್ಕೆ ಖಚ್ಚಾ ವಸ್ತುಗಳನ್ನು ಯಾರು ನೀಡುತ್ತಿದ್ದಾರೆ ಎನ್ನುವುದು ಪತ್ತೆಯಾಗಬೇಕಿದೆ ಎಂದರು. ಇದನ್ನೂ ಓದಿ: ಕುಕ್ಕರ್ ಬಾಂಬ್ ಸ್ಫೋಟಕ್ಕೂ ಮುನ್ನ ದಿನ ಕರಾವಳಿಯಲ್ಲಿ ರಿಂಗಣಿಸಿದ್ದ ಸ್ಯಾಟಲೈಟ್ ಫೋನ್
ಚುನಾವಣೆಯ ಬಗ್ಗೆ ಮಾತನಾಡಿ, ಕಳೆದ ಒಂದು ತಿಂಗಳಿನಿಂದ ಗುಜರಾತ್ (Gujrat) ನಲ್ಲಿ ಓಡಾಡುತ್ತಿದ್ದೇನೆ. ಗುಜರಾತ್ ನಲ್ಲಿ ಬಿಜೆಪಿ (BJP) ಮತ್ತೆ ಅಧಿಕಾರಕ್ಕೆ ಬರಲಿದೆ. ಪ್ರಧಾನಿ ಮೋದಿ ನಾಯಕತ್ವ ಗುಜರಾತ್ ಮೇಲೆ ಅಗಾಧ ಪ್ರಭಾವ ಬೀರಿದೆ. ಈ ಬಾರಿ ಹೊಸ ದಾಖಲೆ ಸೃಷ್ಟಿಯಾಗಲಿದೆ. ನರೇಂದ್ರ ದಾಖಲೆಯನ್ನು ಭೂಪೇಂದ್ರ ಮುರಿಯಲಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಆಪ್ ಸೌಂಡ್ ಜಾಸ್ತಿ ಗ್ರೌಂಡ್ ನಲ್ಲಿ ಬಿಗ್ ಜಿರೋ. ಗಂಟು ಮೂಟೆ ಕಟ್ಟು ಕೊಂಡು ಹೋಗಲಿದೆ. ಅದರ ಮುಖವಾಡ ಕಳಚಿ ಬಿದ್ದಿದೆ. ಕಾಂಗ್ರೆಸ್ (Congress) ಯಾರ ನಾಯಕತ್ವದಲ್ಲಿ ಚುನಾವಣೆ ನಡೆಸುತ್ತಿದೆ ಗೊತ್ತಿಲ್ಲ. ಅದೊಂದು ಅಳಿದುಳಿದ ಪಳಿಯುಳಿಕೆಯಾಗಿದೆ ಎಂದು ಹೇಳಿದರು.
ಇದೇ ವೇಳೆ ಮತದಾರರ ಮಾಹಿತಿಗೆ ಕನ್ನ ವಿಚಾರದ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್ ಆರೋಪ ಮಾಡಲು ಇದೆ. ಕಾಂಗ್ರೆಸ್‍ಗಿಂತ ಮುಂಚೆ ಬಿಜೆಪಿ ದೂರು ನೀಡಿದೆ. ಚಿಲುಮೆಗೆ ಅವಕಾಶ ನೀಡಿದ್ದೆ ಸಿದ್ದರಾಮಯ್ಯ ಸರ್ಕಾರ ಎನ್ನುವ ಆರೋಪ ಇದೆ. ಈ ಬಗ್ಗೆ ತನಿಖೆಯಾಗಲಿ ಬಿಡಿ. ಆಯೋಗ ಜನರಿಗೂ ಮತದಾರರ ಪಟ್ಟಿ ಅಪ್ಡೇಟ್ ಮಾಡಲು ಅನುಮತಿ ನೀಡಿದೆ. ಸಂಘ ಸಂಸ್ಥೆಗಳಿಗೂ ಈ ಅನುಮತಿ ನೀಡಿದೆ. ಕರಡು ಪಟ್ಟಿಯಲ್ಲಿ ನಿರ್ದಿಷ್ಟವಾಗಿ ಹೆಸರು ತಪ್ಪಿದ್ರೆ ದೂರು ನೀಡಬಹುದು. ಬಿಎಲ್‍ಓ ಇದಕ್ಕೆ ಉತ್ತರದಾಯಿ. ಬಿಎಲ್‍ಓಗೆ ಅಂತಿಮ ಪಟ್ಟಿ ಪರಿಷ್ಕರಣೆ ಮಾಡುವ ಅಧಿಕಾರ ಇದೆ ಎಂದರು.
ಮೂಡಿಗೇರೆ ಶಾಸಕ ಕುಮಾರಸ್ವಾಮಿ (MP Kumaraswamy) ಮೇಲೆ ಹಲ್ಲೆ ನಡೆದಿರುವುದು ದುರದೃಷ್ಟಕರ. ನಾನು ಅವರ ಜೊತೆಗೆ ಮಾತುಕತೆ ಮಾತನಾಡಿದ್ದೇನೆ. ಕಾರಣ ಏನು ಎನ್ನುವುದು ತನಿಖೆ ಬಳಿಕ ಗೊತ್ತಾಗಬೇಕು. ನನ್ನ ಹಾಗೇ ಅವರು ಜನ ಪ್ರತಿನಿಧಿ, ನಾನು ಹಲ್ಲೆಯನ್ನು ಸಮರ್ಥಿಸುವುದಿಲ್ಲ ಎಂದು ತಿಳಿಸಿದರು.