ಹೆಬ್ಬೆಟ್ಟಿನ ಜನ ಕೂಡ ಮತ್ತೊಬ್ಬರ ಬಳಿ ಕೇಳಿ ಹೆಬ್ಬೆಟ್ಟು ಒತ್ತುತ್ತಾರೆ – ಸಿದ್ದು ವಿರುದ್ಧ ಸಿ.ಟಿ.ರವಿ ವ್ಯಂಗ್ಯ

Public TV
1 Min Read
CT RAVI 1 2

ಚಿಕ್ಕಮಗಳೂರು: ಓದು, ಬರಹ ಬರದ ಹೆಬ್ಬೆಟ್ಟಿನ ಜನ ಕೂಡ ಮತ್ತೊಬ್ಬರ ಬಳಿ ಕೇಳಿ ಹೆಬ್ಬೆಟ್ಟು ಒತ್ತುತ್ತಾರೆ. ಅವರಿಗಾದರೂ ಸ್ವಲ್ಪ ತಿಳುವಳಿಕೆ ಇರುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ್ದಾರೆ.

Siddaramaiah 2

ಚಿಕ್ಕಮಗಳೂರಿನ ಬಸವನಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಇವರದ್ದು ಬರೀ ನಾಟಕ. 2016ರಲ್ಲಿ ಮತಾಂತರ ಡ್ರಾಮಾಗೆ ಸಹಿ ಹಾಕಿ, ನಾನು ಸಹಿ ಹಾಕಿಲ್ಲ ಅಂತಾರೆ. ಆಮೇಲೆ ತೋರಿಸಿ ಎನ್ನುತ್ತಾರೆ. ತೋರಿಸಿದ ಮೇಲೆ ಗೊತ್ತಿಲ್ಲದೆ ಸಹಿ ಹಾಕಿದ್ದೇನೆ ಅಂತಾರೆ. ಇದು ಇವರ ರಾಜಕೀಯ ನಾಟಕ. ಕಾಂಗ್ರೆಸ್ ಚುಲಾವಣೆಯಲ್ಲಿ ಇಲ್ಲದ ಸವಕಲು ನಾಣ್ಯ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ: ನಳಿನ್ ಕುಮಾರ್ ಕಟೀಲ್

CT RAVI 2 1

ಇದೇ ವೇಳೆ ಮುಂದಿನ ಚುನಾವಣೆ ಯಾರ ನೇತೃತ್ವದಲ್ಲಿ ನಡೆದರೂ ಸಹ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಸೋನಿಯಾಗಾಂಧಿ, ಪರಮೇಶ್ವರ್ ಯಾರ ನಾಯಕತ್ವದಲ್ಲಿ ಬೇಕಾದರೂ ಎಲೆಕ್ಷನ್ ಮಾಡಲಿ. ಅವರೇನು ಅಧಿಕಾರಕ್ಕೆ ಬರಲ್ಲ ಎಂದು ಕಾಂಗ್ರೆಸ್ ಕುರಿತು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಮಹಿಳೆಯಿಂದ ವಂಚನೆ – ಪೊಲೀಸ್ ಠಾಣೆ ಮೆಟ್ಟಿಲೇರಿದ ನಿರ್ದೇಶಕ ನಾಗಶೇಖರ್

DKSHIVAKUMAR SIDDARAMAIAH 3

ಕಾಂಗ್ರೆಸ್ ನಿಲುವು ಏನೆಂದು ನಾವು ವಿಧಾನಸಭೆ ಅಧಿವೇಶನದಲ್ಲಿಯೇ ನೋಡಿದ್ದೇವೆ. ಅವರ ನಿಲುವುಗಳೇ ಕಾಂಗ್ರೆಸ್ ಪಕ್ಷಕ್ಕೆ ಮಾರಕವಾಗಿವೆ. ಅವರ ತತ್ವ-ನಿಲುವುಗಳು ಜನಹಿತಕ್ಕೆ ಮಾರಕವಾಗಿದೆ. ಅದಕ್ಕೆ ಕಾಂಗ್ರೆಸ್ ಸೋಲುತ್ತಿದೆ. ಅವರದ್ದು ಓಲೈಕೆ ರಾಜನೀತಿ ಅದಕ್ಕೆ ಅವರು ವಿಫಲರಾಗುತ್ತಾರೆ. ಅದನ್ನು ಬಿಟ್ಟಿರೇ ಮತ್ತೇನೂ ಇಲ್ಲ ಎಂದು ತತ್ವ-ನಿಲುವುಗಳನ್ನ ಬದಲಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

Share This Article