ಕೋಳಿ ಕೇಳಿ ಮಸಾಲೆ ಅರೆಯಲ್ಲ – ಜನಸಂಖ್ಯಾ ನೀತಿ ವಿರೋಧಿಸಿದ ಅಸಾವುದ್ದೀನ್ ಓವೈಸಿಗೆ ಸಿ.ಟಿ.ರವಿ ತಿರುಗೇಟು

Public TV
2 Min Read
CT Ravi 2

ಬೆಂಗಳೂರು: ಕೋಳಿ ಕೇಳಿ ಮಸಾಲೆ ಅರೆಯಲ್ಲ ಅಂತಾ ಜನಸಂಖ್ಯಾ ನೀತಿ ವಿರೋಧಿಸಿರುವ ಅಸಾವುದ್ದೀನ್ ಓವೈಸಿಗೆ (Asaduddin Owaisi) ಸಿ.ಟಿ.ರವಿ (C.T.Ravi) ತಿರುಗೇಟು ನೀಡಿದ್ದಾರೆ.

asaduddin owaisi

ಹಿಂದೆ ಇದ್ದ ರಜಾಕರ ಮುಂದುವರೆದ ಭಾಗವೇ ಈ ಎಂಐಎಂ. ಹೊಸದಾಗಿ ನಿರೀಕ್ಷೆ ಮಾಡಿದರೆ ಹೇಳಬಹುದು. ನಾನು ಹಳ್ಳಿಯಿಂದ ಬಂದವನು, ಕೋಳಿ ಕೇಳಿ ಖಾರ ಮಸಾಲ ಅರೆಯಲ್ಲ ಅಂತ ಹೇಳಿದ್ದಾರೆ. ಜೊತೆಗೆ ಜನಸಂಖ್ಯಾ ನೀತಿ ಜಾರಿ ಬಗ್ಗೆ ಆರ್‌ಎಸ್‍ಎಸ್ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರ ಹೇಳಿಕೆಯನ್ನ ಬಿಜೆಪಿ ಸ್ವಾಗತಿಸಿದೆ. ಜನಸಂಖ್ಯಾ ನೀತಿ ಅಗತ್ಯತೆಯ ಬಗ್ಗೆ ಚರ್ಚೆ ಅಗತ್ಯ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: PFI Ban – ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಧಿಕರಣ ರಚಿಸಿದ ಕೇಂದ್ರ

Mohan Bhagwat

ಜನಸಂಖ್ಯೆ ನಿಯಂತ್ರಣ ಸಂಬಂಧ ಓವೈಸಿ ವಿರೋಧ ಮಾಡಿದ್ದಾರೆ, ಮೊದಲಿನಿಂದಲು ಎಂಐಎಂ ಅದನ್ನೇ ಹೇಳುತ್ತಿದೆ. ಅದರ ಪೂರ್ವಾಶ್ರಮ ಗೊತ್ತಿರುವವರು ಯಾರೂ ಅವರನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಇನ್ನು ಮೋಹನ್ ಭಾಗವತ್ ಅವರು ದೇಶದ ಹಿತದೃಷ್ಟಿಯಿಂದ ಒಂದು ಸಲಹೆ ನೀಡಿದ್ದಾರೆ. ಸಂಸತ್‍ನಲ್ಲಿ, ವಿಧಾನಸಭೆಯಲ್ಲಿ, ಎಲ್ಲಾ ಕಡೆ ಚರ್ಚೆಯಾಗಲಿ, ಆ ನಂತರ ಜಾರಿಗೆ ಬರಲಿ. ನಮ್ಮಲ್ಲಿ ಬಲವಂತವಾಗಿ ಹಿಂದೆ ಕರೆದುಕೊಂಡು ಹೋಗಿ ಕಟ್ ಮಾಡಿದ ರೀತಿ ಮಾಡಲ್ಲ ಎಂದು ಸಂಜಯ್ ಗಾಂಧಿ ಉದಾಹರಣೆ ನೀಡಿ ಅಂತಾ ಟಕ್ಕರ್ ಕೊಟ್ಟರು. ಇದನ್ನೂ ಓದಿ: ಅಮೆರಿಕದಲ್ಲಿ ರೂಮ್‍ಮೇಟ್‍ನಿಂದ ಭಾರತೀಯ ವಿದ್ಯಾರ್ಥಿ ಮರ್ಡರ್

ಇದೇ ವೇಳೆ ದತ್ತಾತ್ರೇಯ ಹೊಸಬಾಳೆ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿ.ಟಿ ರವಿ, ಅಸಮಾನತೆ, ನಿರುದ್ಯೋಗ ಎಲ್ಲವನ್ನೂ ಸ್ಪೀಕರಿಸುತ್ತೇವೆ. ಸದುದ್ದೇಶದಿಂದ ಏನೇ ಹೇಳಿದರೂ ಸ್ವೀಕರಿಸುತ್ತೇವೆ. ಅಸಮಾನತೆ, ಬಡತನ ಇವೆಲ್ಲಾ ವಿಶ್ವಗುರು ಆಗಲು ಇರುವ ಅಡೆತಡೆಗಳು. ಇವೆಲ್ಲಾ ತೊಡೆದು ಹೋದರೆ ವಿಶ್ವಗುರು ಆಗಬಹುದು. ಜಾತೀಯತೆ ಮೂಲಕ ಓಟ್ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ನೋಡುತ್ತಿದ್ದಾರೆ. ಹೀಗಿದ್ದಾಗಲೇ ಅಸ್ಪೃಶ್ಯತೆ ಹೆಚ್ಚಾಗಲು ಕಾರಣವಾಗುತ್ತದೆ. ಅದನ್ನು ಹೋಗಲಾಡಿಸಲು ಸರ್ಕಾರದ ಮಟ್ಟದಲ್ಲಿ ಹಾಗೂ ಬಿಜೆಪಿ ಪಕ್ಷದಿಂದ ನಿರ್ಣಯ ತೆಗೆದುಕೊಳ್ಳುತ್ತೇವೆ. ಆದರೆ 55 ವರ್ಷ ಆಳ್ವಿಕೆ ನಡೆಸಿದ ಪಕ್ಷಕ್ಕೆ ಅಸಮಾನತೆ ಬಗ್ಗೆ ಹೇಳುವ ನೈತಿಕತೆ ಇಲ್ಲ, ನೆಹರೂ, ಇಂದಿರಾ ಗಾಂಧಿ ಹೇಳಿದ್ದೇ ಬಡತನ ನಿರ್ಮೂಲನೆ, ಆದರೆ ಆಗಿದೆಯಾ? ಪ್ರಜಾಪ್ರಭುತ್ವ ವ್ಯವಸ್ಥೆ ಕಾಂಗ್ರೆಸ್‍ನಲ್ಲಿ ಇಲ್ಲ ಎಂದು ಕಿಡಿಕಾರಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *