ಮುಂಬೈ: 50 ದಿನಗಳ ಐಪಿಎಲ್ ಕ್ರಿಕೆಟ್ ಹಬ್ಬ ಮುಕ್ತಾಯದ ಹಂತ ತಲುಪಿದ್ದು ಟೂರ್ನಿಯಲ್ಲಿ ಕಪ್ ಗೆಲ್ಲುವ ತಂಡ ಕಳೆದ ಬಾರಿಗಿಂತ ಅಧಿಕ ಮೊತ್ತದ ಹಣ ಪಡೆಯಲಿದೆ.
ಟೂರ್ನಿಯಲ್ಲಿ ಹ್ಯಾಟ್ರಿಕ್ ಕಪ್ ಕನಸು ಕಾಣುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಗೆಲ್ಲುವ ವಿಶ್ವಾಸದಲ್ಲಿದೆ. ಟೂರ್ನಿಯ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಿರುವ ಹೈದರಾಬಾದ್ ತಂಡ ಎರಡನೇ ಬಾರಿಗೆ ಕಪ್ ಗೆಲ್ಲುವ ಆತ್ಮ ವಿಶ್ವಾಸಹೊಂದಿದೆ.
Advertisement
ಈ ಬಾರಿ ಟೂರ್ನಿಯಲ್ಲಿ ಗೆದ್ದ ತಂಡ ಕಳೆದ ಬಾರಿಗಿಂತ 5 ಕೋಟಿ ರೂ. ಅಧಿಕ ಹಣ ಪಡೆಯಲಿದ್ದು, ಒಟ್ಟಾರೆ 20 ಕೋಟಿ ರೂ. ಪಡೆಯಲಿದೆ. ಟೂರ್ನಿಯ ರನ್ನರ್ ಅಪ್ 12.5 ಕೋಟಿ ರೂ. ಪಡೆಯಲಿದೆ. ಇದರೊಂದಿಗೆ ವಿಶ್ವದ ಅತ್ಯಂತ ಶ್ರೀಮಂತ ಲೀಗ್ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.
Advertisement
The occasion #VIVOIPL #Final #CSKvSRH pic.twitter.com/KjVhYRC9v3
— IndianPremierLeague (@IPL) May 27, 2018
Advertisement
ಇದರೊಂದಿಗೆ ವೈಯಕ್ತಿಕವಾಗಿ ನೀಡುವ ಅತ್ಯುತ್ತಮ ಆಟಗಾರ (ಎಂವಿಪಿ) ಪ್ರಶಸ್ತಿ ಸೇರಿದಂತೆ ಟೂರ್ನಿಯಲ್ಲಿ ಹೆಚ್ಚು ವಿಕೆಟ್ ಹಾಗೂ ರನ್ ಗಳಿಸಿದ ಆಟಗಾರರಿಗೆ ತಲಾ 10 ಲಕ್ಷ ರೂ. ಬಹುಮಾನ ನೀಡಲಾಗುತ್ತದೆ. ಟೂರ್ನಿಯ ವಿಶೇಷ ಬಹುಮಾನ ಎಂದೇ ಕರೆಯಲಾಗುವ ಯುವ ಉದಯೋನ್ಮುಖ ಆಟಗಾರರ ಸಹ 10 ಲಕ್ಷ ರೂ. ಬಹುಮಾನ ಪಡೆಯಲಿದ್ದಾರೆ.
Advertisement
ಉಳಿದಂತೆ ಟೂರ್ನಿಯಲ್ಲಿ ನೀಡಲಾಗುವ ಉತ್ತಮ ಕ್ಯಾಚ್ ಪಡೆದ ಆಟಗಾರನಿಗೆ 10 ಲಕ್ಷ ರೂ. ಎಫ್‍ಬಿಬಿ ಸ್ಟೈಲಿಷ್ ಆಟಗಾರನಿಗೆ 10 ಲಕ್ಷ ರೂ., ಸ್ಟಾರ್ ಪ್ಲಸ್ ನಯಿ ಸೋಚ್ ಸೀಸನ್ ಆವಾರ್ಡ್ ಸಹ 10 ಲಕ್ಷ ರೂ. ಹೊಂದಿದೆ.
The two Captains – @msdhoni and Kane Williamson pose with the silverware on the eve of #VIVOIPL Final.#CSKvSRH pic.twitter.com/juYi8DOWxx
— IndianPremierLeague (@IPL) May 26, 2018