Lufthansa ಪೈಲೆಟ್‌ ಸ್ಟ್ರೈಕ್‌, 800 ವಿಮಾನಗಳ ಹಾರಾಟ ರದ್ದು- ದೆಹಲಿ ವಿಮಾನ ನಿಲ್ದಾಣದಲ್ಲಿ ಜನಜಂಗುಳಿ

Public TV
2 Min Read
delhi

ನವದೆಹಲಿ: ಪೈಲಟ್‍ಗಳು ಮುಷ್ಕರ ನಡೆಸುತ್ತಿರುವ ಹಿನ್ನೆಲೆ ಜರ್ಮನಿಯ ವಿಮಾನಯಾನ ಸಂಸ್ಥೆ ಲುಫ್ತಾನ್ಸಾ ವಿಮಾನಯಾನಗಳನ್ನು ರದ್ದುಗೊಳಿಸಿದ್ದು ದೆಹಲಿ ವಿಮಾನ ನಿಲ್ದಾಣ ಇದೀಗ ಜನಜಂಗುಳಿಯಿಂದ ತುಂಬಿದೆ.

ಪೈಲೆಟ್‍ಗಳ ವೇತನ ಹೆಚ್ಚಳ ಕುರಿತಂತೆ ಒಂದು ದಿನದಿಂದ ಮುಷ್ಕರ ನಡೆಸಲಾಗುತ್ತಿದ್ದು, ಲುಫ್ತಾನ್ಸಾ ವಿಮಾನಗಳನ್ನು ರದ್ದುಗೊಳಿಸಿದ್ದರಿಂದ ದೆಹಲಿ ವಿಮಾನ ನಿಲ್ದಾಣದಲ್ಲಿ ನೂರಾರು ಜನರು ಪ್ರತಿಭಟನೆ ನಡೆಸುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

flight

ವಿಮಾನಯಾನವನ್ನು ರದ್ದುಗೊಳಿಸಿರುವುದರಿಂದ ಪ್ರಯಾಣಿಕರು ತಮ್ಮ ವಿಮಾನ ದರವನ್ನು ಮರುಪಾವತಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸದ್ಯ ವಿಮಾನ ನಿಲ್ದಾಣದಲ್ಲಿರುವ ಪ್ರಯಣಿಕರನ್ನು ದೆಹಲಿ ಪೊಲೀಸರು ಮತ್ತು ಸಿಐಎಸ್‍ಎಫ್ ಅಧಿಕಾರಿಗಳು ಸಮಾಧಾನಪಡಿಸಿ, ಏರ್‌ಲೈನ್ ಕಂಪನಿಯಿಂದ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಚುನಾವಣಾ ವಂಚನೆ ಪ್ರಕರಣದಲ್ಲಿ ಆಂಗ್ ಸಾನ್ ಸೂಕಿ ತಪ್ಪಿತಸ್ಥೆ- 3 ವರ್ಷ ಜೈಲು

ಫ್ರಾಂಕ್‍ಫರ್ಟ್ ಮತ್ತು ಮ್ಯೂನಿಚ್‍ಗೆ ತೆರಳುತ್ತಿದ್ದ ಪ್ರಯಾಣಿಕರು ನಿರ್ಗಮನ ಗೇಟ್ಸ್ ಸಂಖ್ಯೆ 6 ಮತ್ತು 7 ರಲ್ಲಿ ಚೆಕ್-ಇನ್ ಪ್ರದೇಶದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದು, ಅವರಲ್ಲಿ ಕೆಲವರು ಟರ್ಮಿನಲ್‍ನಿಂದ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದರು. ತಕ್ಷಣವೇ ಸಿಐಎಫ್ ಸಿಬ್ಬಂದಿ ಮತ್ತು ದೆಹಲಿ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು.

ಸೆಪ್ಟೆಂಬರ್ 2 ರಂದು ಲುಫ್ತಾನ್ಸಾ 800 ವಿಮಾನಯಾನಗಳನ್ನು ರದ್ದುಗೊಳಿಸಿದ್ದು, ಇದರಿಂದ ಸುಮಾರು 1 ಲಕ್ಷ 30 ಸಾವಿರ ಪ್ರಯಾಣಿಕರಿಗೆ ತೊಂದರೆಯಾಗಲಿದೆ ಎಂದು ಕಂಪನಿಯ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: 60 ವರ್ಷ ವಯಸ್ಸಾಗಿದ್ದು, ಹೃದಯ ತುಂಬಾ ಸೂಕ್ಷ್ಮವಾಗಿದ್ರಿಂದ ಪ್ರಾಬ್ಲಂ ಬರೋದು ಸಹಜ: ಡಾ. ರಂಗನಾಥ್

ಪೈಲಟ್‍ಗಳ ವೇತನವನ್ನು ಪ್ರತಿ ತಿಂಗಳಿಗೆ 900 ಯೂರೋ ಹೆಚ್ಚಿಸುವ ಅತ್ಯುತ್ತಮ ಪ್ರಸ್ತಾವನೆಯನ್ನು ಕಂಪನಿ ಮುಂದಿಟ್ಟಿತ್ತು. ಆದರೂ ಈ ಆಫರ್ ಒಪ್ಪಿಕೊಳ್ಳದ ಪೈಲಟ್‍ಗಳ ಕ್ರಮದ ಬಗ್ಗೆ ಕಂಪನಿ ವಿಷಾದ ವ್ಯಕ್ತಪಡಿಸಿದೆ. ಈ ವರ್ಷಾಂತ್ಯಕ್ಕೆ ಶೇ 5.5 ರಷ್ಟು ವೇತನ ಹೆಚ್ಚಳ, ಹಣದುಬ್ಬರಕ್ಕೆ ಪರಿಹಾರ, ಸ್ಯಾಲರಿ ಗ್ರಿಡ್ ಹೊಂದಾಣಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಪೈಲಟ್‍ಗಳು ಮುಷ್ಕರ ನಡೆಸುತ್ತಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *