ಚಿತ್ರದುರ್ಗ: ಮುರುಘಾ ಶರಣರಿಗೆ 60 ವರ್ಷ ವಯಸ್ಸಾಗಿದ್ದು, ಹೃದಯ ತುಂಬಾ ಸೂಕ್ಷ್ಮವಾಗಿದೆ. ಹೀಗಾಗಿ ಈ ರೀತಿಯ ಪ್ರಾಬ್ಲಂ ಬರೋದು ಸಹಜ ಎಂದು ಚಿತ್ರದುರ್ಗ ಡಿಹೆಚ್ ಓ ಡಾ,ರಂಗನಾಥ್ ತಿಳಿಸಿದ್ದಾರೆ.
ಶ್ರೀಗಳ ಆರೋಗ್ಯದ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಜಿಲ್ಲಾಧಿಕಾರಿ ಆದೇಶದ ಮೇರೆಗೆ ದಾವಣಗೆರೆಯ ಕಾರ್ಡಿಯಾಲಾಜಿಸ್ಟ್ ಡಾ.ಮಲ್ಲೇಶ್, ಡಾ.ಶ್ರೀನಿವಾಸ ತಂಡ ಜಿಲ್ಲಾಸ್ಪತ್ರೆಗೆ ಆಗಮಿಸಲಿದೆ. ಅವರು ಧಾವಿಸಿ ಮುರುಘಾ ಶ್ರೀಗಳನ್ನು ಗಮನಿಸಿ, ಸೆಕೆಂಡ್ ಒಪೀನಿಯನ್ ನೀಡಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಇದನ್ನೂ ಓದಿ: ಮುರುಘಾ ಶ್ರೀಗಳ ಆರೋಗ್ಯದಲ್ಲಿ ಏರುಪೇರು- ಐಸಿಯುಗೆ ಶಿಫ್ಟ್
ಜಿಲ್ಲಾಧಿಕಾರಿಗಳ ಆದೇಶದ ಮೇಲೆ ಇಬ್ಬರು ಹೃದಯ ತಜ್ಞರನ್ನ ಕರೆಸಲಾಗಿದೆ. ಹೃದಯ ಸಂಬಂಧಿ ಸಮಸ್ಯೆಗೆ ಒಳಗಾಗಿದ್ದಾರೆ. 60 ವರ್ಷ ವಯಸ್ಸಾಗಿದ್ದು, ಹೃದಯ ತುಂಬಾ ಸೂಕ್ಷ್ಮವಾಗಿದ್ರಿಂದ ಇಂತಹ ಸಮಸ್ಯೆಗಳು ಬರುತ್ತವೆ. ಕಾರ್ಡಿಯಾಲಜಿಸ್ಟ್ ಗಳು ಏನು ಸಜೆಸ್ಟ್ ಮಾಡ್ತಾರೆ ನೋಡಬೇಕು ಎಂದು ಅವರು ತಿಳಿಸಿದರು.
ಇತ್ತ ಜಿಲ್ಲಾಸ್ಪತ್ರೆಯಿಂದ ಶ್ರೀಗಳನ್ನ ನೇರವಾಗಿ ಮಠಕ್ಕೆ ಪೊಲೀಸರು ಕರೆದುಕೊಂಡು ಹೋಗಲಿದ್ದಾರೆ. ನಂತರ ಮಠದ ಬಳಿಯಿರುವ ಹೆಲಿಪ್ಯಾಡ್ ನಿಂದ ವಿಮಾನದಲ್ಲಿ ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತಿದೆ. ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಶಿಫ್ಟ್ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಶ್ರೀಗಳಿಗೆ ಹೃದಯ ಸಮಸ್ಯೆ ಬಗ್ಗೆ ಎಸ್ ಎಸ್ ಆಸ್ಪತ್ರೆ ವೈದ್ಯರು ದೃಢೀಕರಿಸಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.