ವಾಷಿಂಗ್ಟನ್: ಫುಟ್ಬಾಲ್ ಆಟಗಾರ ಕ್ರಿಸ್ಟಿಯನೋ ರೊನಾಲ್ಡೋ ಎಲ್ಲರಿಗೂ ಗೊತ್ತು. ಇವರು ಮದುವೆ ಆಗುವ ಮುನ್ನವೇ 4 ಮಕ್ಕಳ ತಂದೆ ಎಂಬುದು ಕೂಡ ಹಳೇ ಸುದ್ದಿಯಾಗಿದೆ. ಆದರೆ ಈಗ ರೆನಾಲ್ಡೋ ಗರ್ಲಫ್ರೆಂಡ್ ಮತ್ತೆ ಪ್ರೆಗ್ನೆಂಟ್ ಆಗಿದ್ದಾರೆ. ಇವರು ಅವಳಿ ಮಕ್ಕಳ ನೀರಿಕ್ಷೆಯಲ್ಲಿದ್ದಾರೆ.
ಗರ್ಲ್‍ಫ್ರೆಂಡ್ ಜಾರ್ಜಿನಾ ರೋಡ್ರಿಗಸ್ ಜೊತೆಗಿನ ಫೋಟೋವೊಂದನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡು ಅವಳಿ ಮಗು ಪಡೆಯುವ ನೀರಿಕ್ಷೆಯಲ್ಲಿ ಇದ್ದೇವೆ ಎನ್ನುವ ವಿಚಾರವನ್ನು ಹಂಚಿಕೊಂಡಿದ್ದಾರೆ. ವಿಶೇಷ ಎಂದರೆ ರೊನಾಲ್ಡೋ ಇದಕ್ಕೂ ಮೊದಲೇ ತಮ್ಮ ಇತರೆ ಗೆಳತಿಯರೊಂದಿಗೆ ನಾಲ್ಕು ಮಕ್ಕಳನ್ನು ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು
ನಾವು 6ನೇ ಮಗುವಿನ ನಿರೀಕ್ಷೆಯಲ್ಲಿದ್ದೇವೆ. ನಮಗೆ ಬಹಳ ಸಂತೋಷ ಆಗುತ್ತಿದೆ ಎಂದು ಬರೆದುಕೊಂಡಿದ್ದ ರೊನಾಲ್ಡೋ, ತನ್ನ 4 ಮಕ್ಕಳೊಂದಿಗೆ ಸ್ವಿಮ್ಮಿಂಗ್ ಪೂಲ್‍ನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋ ಕೂಡ ಶೇರ್ ಮಾಡಿದ್ದಾರೆ. ಈ ಫೋಟೋ ವೈರಲ್ ಆಗುತ್ತಿದೆ. ಇದನ್ನೂ ಓದಿ: ಅಪ್ಪು ಸಮಾಧಿ ಬಳಿ ನೃತ್ಯ ನಮನ ಸಲ್ಲಿಸಿದ ಪುಟಾಣಿಗಳು
View this post on Instagram
ರೊನಾಲ್ಡೋ ಇರುವರೆಗೂ ಯಾರನ್ನೂ ಮದುವೆಯಾಗಿಲ್ಲ. ಹೀಗಿರುವಾಗ ಬೇರೆ ಬೇರೆ ಗೆಳತಿಯರೊಂದಿಗೆ 4 ಮಕ್ಕಳ ತಂದೆಯಾಗಿದ್ದಾರೆ. ಈಗ ಹಲವು ವರ್ಷಗಳಿಂದ ಡೇಟ್ ಮಾಡುತ್ತಿರುವ ಜಾರ್ಜಿನಾ ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದಾರೆ.
ಜಾರ್ಜಿನಾ ಮಾಡೆಲ್. ರೋನಾಲ್ಡೋ ಮತ್ತು ಜಾರ್ನಿನಾ ಮೊದಲ ಬಾರಿಗೆ ಸ್ಪೇನ್‍ನಲ್ಲಿ ಭೇಟಿಯಾಗಿದ್ದರು. ಅವರು 2016ರಲ್ಲಿ ಭೇಟಿ ಪರಿಚಯಕ್ಕೆ ತಿರುಗಿ ಡೇಟಿಂಗ್ ಶುರು ಮಾಡಿದ್ದರು. ಇದೀಗ ಜಾರ್ಜಿನಾ ರೋನಾಲ್ಡೋ ಅವರ ಅವಳಿ ಮಕ್ಕಳಿಗೆ ತಾಯಿ ಆಗುವ ನೀರಿಕ್ಷೆಯಲ್ಲಿದ್ದಾರೆ. ಇದನ್ನೂ ಓದಿ: ತಂದೆಯ ಮೂಢನಂಬಿಕೆ, ನಿರ್ಲಕ್ಷ್ಯಕ್ಕೆ ಪ್ರಾಣ ಬಿಟ್ಟ ಬಾಲಕಿ
ಮೊದಲು ರೊನಾಲ್ಡೋ ಕಿಮ್ ಕರ್ದಿಶಿಯಾ, ಜಯೀನಾ ಜಯಿನಾ, ಮಿರಾಲ್ ಗ್ರೀಸ್‍ಲೆಸ್, ರೊಮ್ಯಾರಿಯಾ, ಎಲಿಸಾ ಗುಡಾವಿನಾ ಸೇರಿದಂತೆ ಹಲವರ ಜೊತೆ ಲವ್‍ನಲ್ಲಿದ್ದರು. ಸದ್ಯ ರೊನಾಲ್ಡೋ ಎಲ್ಲಾ ಮಕ್ಕಳನ್ನ ಜಾರ್ಜಿನಾ ನೋಡಿಕೊಳ್ಳುತ್ತಿದ್ದಾರೆ.