ಲಿಸ್ಬನ್: ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೊ (Cristiano Ronaldo) ತಮ್ಮ ಬಹುಕಾಲದ ಗೆಳತಿ ಜಾರ್ಜಿನಾ ರೊಡ್ರಿಗಸ್ (Georgina Rodriguez) ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮಂಗಳವಾರ (ಆ.11) ಖಾಸಗಿ ಸಮಾರಂಭದಲ್ಲಿ ಜಾರ್ಜಿನಾ ಅವರನ್ನು ವರಿಸಿದ ರೊನಾಲ್ಡೋ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜೋಡಿಯು ಅಧಿಕೃತವಾಗಿ ಫೋಟೋ ಹಂಚಿಕೊಂಡಿದ್ದು, ಕೈಯಲ್ಲಿ ಮದುವೆ ಉಂಗುರ ಧರಿಸಿ ಪರಸ್ಪರ ಕೈಹಿಡಿದಿರುವ ಸುಂದರವಾದ ಚಿತ್ರವನ್ನು ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಅತ್ಯಾಚಾರ, ಬೆದರಿಕೆ ಆರೋಪದಡಿ ಕ್ರಿಕೆಟಿಗ ಅಭಿಷೇಕ್ ಪೊರೆಲ್ ಅರೆಸ್ಟ್
View this post on Instagram
ಪೋರ್ಚುಗಲ್ ರಾಜಧಾನಿ ಲಿಸ್ಬನ್ ಸಮೀಪವಿರುವ ಕಡಲತೀರದ ಸುಂದರ ಪಟ್ಟಣವಾದ ಕಾಸ್ಕೆಸ್‌ನಲ್ಲಿ ಈ ವಿವಾಹ ಸಮಾರಂಭವು ನೆರವೇರಿದೆ. ಈ ವಿವಾಹವು ಅತ್ಯಂತ ಖಾಸಗಿಯಾಗಿ ನಡೆದಿದ್ದು, ಅವರ ಐವರು ಮಕ್ಕಳು ಮಾತ್ರ ಈ ವಿಶೇಷ ಕ್ಷಣದಲ್ಲಿ ಉಪಸ್ಥಿತರಿದ್ದರು ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ, ಪತ್ನಿಗೆ ಕೊಲೆ ಬೆದರಿಕೆ – ತನಿಖೆ ಆರಂಭ

2016ರಲ್ಲಿ ಮ್ಯಾಡ್ರಿಡ್‌ನಲ್ಲಿ ಮೊದಲ ಬಾರಿಗೆ ಭೇಟಿಯಾದ ಈ ಜೋಡಿ ಕಳೆದ ಒಂದು ದಶಕದಿಂದ ಒಟ್ಟಿಗೆ ಜೀವನ ನಡೆಸುತ್ತಿದ್ದಾರೆ. ಇವರಿಗೆ ಕ್ರಿಸ್ಟಿಯಾನೋ ಜೂನಿಯರ್, ಅವಳಿ ಮಕ್ಕಳಾದ ಇವಾ ಮತ್ತು ಮ್ಯಾಟೋ, ಅಲಾನಾ ಮಾರ್ಟಿನಾ ಹಾಗೂ ಬೆಲ್ಲಾ ಎಸ್‌ಮೆರಾಲ್ಡಾ ಎಂಬ ಐದು ಮಕ್ಕಳಿವೆ.
ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಪೋರ್ಚುಗಲ್ ಪರ 146 ಗೋಲುಗಳನ್ನು ಗಳಿಸಿರುವ ದಾಖಲೆ ಬರೆದಿರುವ ರೊನಾಲ್ಡೊ, ತಮ್ಮ ವೃತ್ತಿಜೀವನದಲ್ಲಿ 5 ಬಾರಿ ಸಾಂಪ್ರದಾಯಿಕ ಬ್ಯಾಲನ್ ಡಿಓರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇತ್ತೀಚೆಗೆ ತಮ್ಮ ವೃತ್ತಿಜೀವನದ ದಾಖಲೆಯ ಆರನೇ ವಿಶ್ವಕಪ್‌ನಲ್ಲಿ ಪೋರ್ಚುಗಲ್ ತಂಡದ ಪರ ಕಣಕ್ಕಿಳಿದಿದ್ದರು. ಸದ್ಯ ಕ್ಲಬ್ ಮಟ್ಟದಲ್ಲಿ ಸೌದಿ ಪ್ರೊ ಲೀಗ್‌ನ ಅಲ್ ನಾಸರ್ ತಂಡದ ಪರ ಆಡುತ್ತಿರುವ ರೊನಾಲ್ಡೊ, ಶನಿವಾರದಿಂದ ಆರಂಭವಾಗಲಿರುವ ದೇಶೀಯ ಟೂರ್ನಿಯ ಸೀಸನ್‌ನಲ್ಲಿ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ.ಇದನ್ನೂ ಓದಿ: ಪ್ರಕಾಶ್ ರಾಜ್ 4 ವರ್ಷದಿಂದ ವಿಳಾಸದಲ್ಲಿ ನೆಲೆಸಿಲ್ಲ, ಎಸ್‌ಐಆರ್ ಆರೋಪ ಸತ್ಯಕ್ಕೆ ದೂರ: ಕೇಂದ್ರ ನಗರ ಪಾಲಿಕೆ ಸ್ಪಷ್ಟನೆ

