ಮಕ್ಕಳಿಗೆ ತಿಂಡಿಗಳೆಂದರೆ ಅಚ್ಚುಮೆಚ್ಚು. ಅದರಲ್ಲೂ ಕುರುಕುಲು ತಿಂಡಿ ಎಂದರೆ ಇನ್ನೂ ಖುಷಿಪಡುತ್ತಾರೆ. ಸಂಜೆ ಶಾಲೆಯಿಂದ ಬಂದ ಮಕ್ಕಳಿಗೆ ಏನಾದರೂ ತಿಂಡಿ ರೆಡಿ ಮಾಡಬೇಕು ಎಂದರೆ ಈ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ ನೋಡಿ. ಇವತ್ತಿನ ನಮ್ಮ ರೆಸಿಪಿ ಕ್ರಿಸ್ಪಿ ಪೋಹಾ ಕಟ್ಲೆಟ್. ಇದನ್ನು ಮಕ್ಕಳು ಮಾತ್ರವಲ್ಲದೇ ದೊಡ್ಡವರೂ ಸಹ ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಹಾಗಾದ್ರೆ ಇದನ್ನು ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ. ಇದನ್ನೂ ಓದಿ: ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಬಿ ಬೈಟ್ಸ್
Advertisement
ಬೇಕಾಗುವ ಸಾಮಾಗ್ರಿಗಳು:
ನೆನೆಸಿದ ದಪ್ಪ ಅವಲಕ್ಕಿ – 2 ಕಪ್
ಬೇಯಿಸಿದ ಆಲುಗೆಡ್ಡೆ- 4
ತುರಿದ ಕ್ಯಾರೆಟ್ – 1 ಕಪ್
ಹೆಚ್ಚಿದ ದೊಣ್ಣೆ ಮೆಣಸು – ಅರ್ಧ ಕಪ್
ಸಣ್ಣಗೆ ಹೆಚ್ಚಿದ ಈರುಳ್ಳಿ- ಒಂದು
ಹೆಚ್ಚಿದ ಶುಂಠಿ – ಸ್ವಲ್ಪ
ಹೆಚ್ಚಿದ ಹಸಿಮೆಣಸಿನ ಕಾಯಿ – ಸ್ವಲ್ಪ
ಹೆಚ್ಚಿದ ಕೊತ್ತಂಬರಿ ಸೊಪ್ಪು – ಸ್ವಲ್ಪ
ಅರಶಿಣ – ಒಂದು ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ಚಾಟ್ ಮಸಾಲ – ಅರ್ಧ ಚಮಚ
ಅಚ್ಚ ಖಾರದ ಪುಡಿ – ಅರ್ಧ ಚಮಚ
ದನಿಯಾ ಪುಡಿ – ಅರ್ಧ ಚಮಚ
ಗರಂ ಮಸಾಲ – ಅರ್ಧ ಚಮಚ
ಜೋಳದ ಹುಡಿ – ಅರ್ಧ ಕಪ್
ನಿಂಬೆ ಹಣ್ಣು – ಅರ್ಧ
ಎಣ್ಣೆ- ಕಾಯಿಸಲು ಬೇಕಾಗುವಷ್ಟು
ಬ್ರೆಡ್- 2
Advertisement
Advertisement
ಮಾಡುವ ವಿಧಾನ:
Advertisement
- ಮೊದಲಿಗೆ ಬ್ರೆಡ್ ಕ್ರಂಪ್ಸ್ ಮಾಡಿಕೊಳ್ಳಿ. ಬ್ರೆಡ್ ಅನ್ನು ಓವನ್ ಅಲ್ಲಿ ರೋಸ್ಟ್ ಮಾಡಿಕೊಂಡು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಟ್ಟುಕೊಳ್ಳಿ. ಅದನ್ನು ಒಂದು ಬೌಲಿಗೆ ಹಾಕಿಟ್ಟುಕೊಳ್ಳಬೇಕು.
- ಬಳಿಕ ನೆನೆಸಿದ ದಪ್ಪ ಅವಲಕ್ಕಿ ಹಾಗೂ ಬೇಯಿಸಿದ ಆಲೂಗಡ್ಡೆಯನ್ನು ಒಂದು ಬೌಲಿಗೆ ಹಾಕಿ ಚನ್ನಾಗಿ ಕಿವುಚಿಕೊಳ್ಳಿ. ಬಳಿಕ ಅದಕ್ಕೆ ಒಂದು ಕಪ್ ತುರಿದ ಕ್ಯಾರೆಟ್, ಅರ್ಧ ಕಪ್ ಹೆಚ್ಚಿದ ದೊಣ್ಣೆ ಮೆಣಸು, ಸಣ್ಣಗೆ ಹೆಚ್ಚಿದ ಈರುಳ್ಳಿ, ಸಣ್ಣದಾಗಿ ಹೆಚ್ಚಿದ ಶುಂಠಿ ಮತ್ತು ಹಸಿ ಮೆಣಸಿನಕಾಯಿ, ಹೆಚ್ಚಿದ ಕೊತ್ತಂಬರಿ, ಉಪ್ಪು, ಅರಶಿಣ, ಚಾಟ್ ಮಸಾಲ, ಗರಂ ಮಸಾಲ, ಅಚ್ಚ ಖಾರದ ಪುಡಿ, ದನಿಯಾ ಪುಡಿಯನ್ನು ಸೇರಿಸಿಕೊಳ್ಳಿ. ಬಳಿಕ ಇದಕ್ಕೆ ಒಂದು ಚಮಚ ಜೋಳದ ಹುಡಿಯನ್ನು ಹಾಕಿ, ಅರ್ಧ ನಿಂಬೆ ರಸವನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
- ಬಳಿಕ ಒಂದು ಚಿಕ್ಕ ಬೌಲ್‌ನಲ್ಲಿ ಎರಡು ಚಮಚ ಜೋಳದ ಹುಡಿಗೆ ಸ್ವಲ್ಪ ನೀರು ಹಾಕಿ ತೆಳ್ಳಗೆ ಕಲಸಿಕೊಳ್ಳಿ. ಅಂಗೈಗೆ ಸ್ವಲ್ಪ ಎಣ್ಣೆ ಹಚ್ಚಿಕೊಂಡು ಕಟ್ಲೆಟ್ ಮಿಶ್ರಣವನ್ನು ಸ್ವಲ್ಪ ತೆಗೆದುಕೊಂಡು ಅಂಗೈಯಲ್ಲಿ ತಟ್ಟಿಕೊಳ್ಳಬೇಕು. ಬಳಿಕ ಇದನ್ನು ಜೋಳದ ನೀರಿನಲ್ಲಿ ಅದ್ದಿಕೊಂಡು ಬಳಿಕ ಬ್ರೆಡ್ ಕ್ರಂಪ್ಸ್‌ಗೆ ಅದ್ದಿಕೊಳ್ಳಬೇಕು. ಇದೇ ರೀತಿ ಎಲ್ಲವನ್ನು ಮಾಡಿಟ್ಟುಕೊಳ್ಳಿ.
- ನಂತರ ಒಂದು ಬಾಣಾಲೆಯಲ್ಲಿ ಎಣ್ಣೆ ಬಿಸಿಗಿಟ್ಟುಕೊಂಡು ಕಾದ ಬಳಿಕ ಅದಕ್ಕೆ ಎರಡರಿಂದ ಮೂರು ಕಟ್ಲೆಟ್ ಹಾಕಿಕೊಂಡು ಚನ್ನಾಗಿ ಕಾಯಿಸಿಕೊಳ್ಳಬೇಕು. ಗ್ಯಾಸ್ ಚಿಕ್ಕ ಉರಿಯಲ್ಲಿ ಇಟ್ಟರೆ ಕಟ್ಲೆಟ್ ಕ್ರಿಸ್ಪಿಯಾಗಿ ಬರುತ್ತದೆ. ಕಟ್ಲೆಟ್ ಚೆನ್ನಾಗಿ ಬೆಂದು ಕಂದು ಬಣ್ಣ ಬಂದಮೇಲೆ ಎಣ್ಣೆಯಿಂದ ತೆಗೆದು ಒಂದು ಪ್ಲೇಟ್‌ಗೆ ಹಾಕಿ ಬಿಸಿಬಿಸಿಯಾಗಿ ಸರ್ವ್ ಮಾಡಿ. ಇದನ್ನೂ ಓದಿ: ಡಿಫರೆಂಟ್ ಆಗಿ ಮಾಡಿ ರುಚಿಕರ ಈರುಳ್ಳಿ ಪರೋಟ