ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಅಪರಾಧಿಗಳ ಮೇಲುಗೈ ಆಗುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಕಳವಳ ವ್ಯಕ್ತಪಡಿಸಿದರು.
ಮಲ್ಲೇಶ್ವರದ ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ದೇಶದ್ರೋಹಿಗಳು ಮೇಲುಗೈ ಸಾಧಿಸುತ್ತಿದ್ದಾರೆ. ರಾಜ್ಯ ಪೊಲೀಸರು ಸತ್ವ ಕಳೆದುಕೊಂಡಿದ್ದಾರೆ. ಅವರ ಕೈಯನ್ನು ರಾಜ್ಯ ಸರ್ಕಾರ ಕಟ್ಟಿ ಹಾಕಿದೆ. ಸರ್ಕಾರ ಹೇಳುವ ಕೆಲಸವಷ್ಟೇ ರಾಜ್ಯ ಪೊಲೀಸ್ ಮಾಡುತ್ತಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರಿಗೆ ಶಿಕ್ಷೆ ವಿಧಿಸಿಲ್ಲ. ದೇಶದ್ರೋಹಕ್ಕೆ ಕುಮ್ಮಕ್ಕು ಕೊಡುವ ಸರ್ಕಾರ ಅಧಿಕಾರದಲ್ಲಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಯಾದಗಿರಿ| ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ ನಿಧನ
ಬೆಂಗಳೂರು, ಮೈಸೂರು, ಕೊಡಗು, ಹಾಸನ, ಕೋಲಾರ, ನಾಗಮಂಗಲ ಸೇರಿ ಬೇರೆ ಬೇರೆ ಜಾಗಗಳಲ್ಲಿ ಇವತ್ತು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೇಳಿಬರುತ್ತಿದೆ. ಪ್ಯಾಲೆಸ್ತೀನ್ ಧ್ವಜ ಹಾರುತ್ತಿದೆ. ಆದರೆ, ರಾಜ್ಯ ಸರ್ಕಾರ ಓಲೈಕೆ ರಾಜಕೀಯದಲ್ಲಿ ನಿರತವಾಗಿದೆ. ದೇಶದ್ರೋಹ ಮಾಡಿದರೂ ಅಡ್ಡಿ ಇಲ್ಲ. ನಮಗೆ ವೋಟ್ ಬ್ಯಾಂಕ್ ಬೇಕು ಎಂಬ ಮಾನಸಿಕತೆ ಇರುವ ಸಿದ್ದರಾಮಯ್ಯನವರಿಂದ ನಾವು ದೇಶಪ್ರೇಮ, ಕಾನೂನಿನ ಅನುಷ್ಠಾನ ನಿರೀಕ್ಷೆ ಮಾಡುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ನಾಗಮಂಗಲದಲ್ಲಿ (Nagamangala) ಗಣಪತಿಗೆ ಅವಮಾನ ಮಾಡಿದವರ ವಿರುದ್ಧ ಕ್ರಮ ಆಗಲಿ. ಗಲಭೆಗೆ ಕೇರಳದ ನಂಟು ಇದೆ. ಮಾಸ್ಕ್ ಹಾಕಿಬಂದವರು ಯಾರು? ಪೆಟ್ರೋಲ್ ಬಾಂಬ್, ಕಲ್ಲು ತೂರಿದವರು ಯಾರು? ಎಂದು ತನಿಖೆಯಾಗಲು ಎನ್‌ಐಎಗೆ ವಹಿಸಬೇಕು. ಇದು ಸಣ್ಣ ಘಟನೆ ಎಂದು ಪರಮೇಶ್ವರ್ ಹೇಳಿದ್ದಾರೆ. ಎನ್‌ಐಎಗೆ ತನಿಖೆ ವಹಿಸಿದರೆ ಸತ್ಯ ಹೊರಗೆ ಬರಲಿದೆ ಎಂದು ಆಗ್ರಹಿಸಿದರು. ಇದನ್ನೂ ಓದಿ: ಮೆಟ್ರೋ ಟ್ರ‍್ಯಾಕ್‌ಗೆ ಹಾರಿ ಆತ್ಮಹತ್ಯೆಗೆ ಯತ್ನ – ಪ್ರಾಣಾಪಾಯದಿಂದ ಯುವಕ ಪಾರು