ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ವಿಭಿನ್ನ ರೀತಿಯ ಪ್ರಯೋಗಾತ್ಮಕ ಚಿತ್ರಗಳು ಮೂಡಿಬಂದು ಸಿನಿಪ್ರಿಯರಿಂದ ಮೆಚ್ಚುಗೆ ಗಳಿಸ್ತಿವೆ. ಇದೀಗ ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್ ಚೇಸ್ ಸಿನಿಮಾ ಕೂಡ ಆ ಸಿನಿಮಾಗಳ ಸಾಲಿಗೆ ಸೇರಿದೆ. ಕಳೆದ ವಾರ ತೆರೆಕಂಡ ಈ ಸಿನಿಮಾ ಸದ್ಯ ಪ್ರೇಕ್ಷಕರ ಮೆಚ್ಚುಗೆ ಗಳಿಸಿ, ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣ್ತಿದೆ.
ಒಂದು ಸಿನಿಮಾ ಯಶಸ್ವಿಯಾಗ್ಬೇಕು ಅಂದ್ರೆ ಮನೋರಂಜನೆ ಜೊತೆಗೆ ಒಂದೊಳ್ಳೆ ಕಂಟೆಂಟ್ ಕೂಡ ಬಹಳ ಮುಖ್ಯ. ಅದನ್ನರಿತ ನಿರ್ದೇಶಕ ವಿಲೋಕ್ ಶೆಟ್ಟಿ ಪ್ರಸ್ತುತ ಸಮಾಜದಲ್ಲಿ ನಡೆಯುವ ಅಪರಾಧಿ ಕೃತ್ಯದ ಬಗ್ಗೆ ಎಫೆಕ್ಟೀವ್ ಆಗಿ ಸಿನಿಮಾ ಮಾಡಿ ಆ ಮೂಲಕ ಜನರಿಗೆ ಸಂದೇಶ ನೀಡಿದ್ದಾರೆ. ತಮ್ಮ ಈ ಪ್ರಯತ್ನದಲ್ಲಿ ಗೆಲುವನ್ನೂ ಕಂಡಿದ್ದಾರೆ. ಚಾರ್ಲಿ ಚಿತ್ರದ ಬಗ್ಗೆ ಮೂಡಿಕೊಂಡಿದ್ದ ಥರದ ಕ್ರೇಜ್ ಇದೀಗ ಚೇಸ್ ಅನ್ನು ಸುತ್ತುವರೆದಿದೆ!
ಸಿನಿಮಾದ ಕಥೆ, ನಿರೂಪಣೆ ಮಾಡಿರುವ ಶೈಲಿ, ಅಚ್ಚುಕಟ್ಟಾದ ಸ್ಕ್ರೀನ್ ಪ್ಲೇ, ನೋಡುಗರನ್ನ ಸೀಟಿನ ತುದಿಗೆ ಕೂರಿಸುವಂತಹ ಥ್ರಿಲ್ಲಿಂಗ್ ದೃಶ್ಯಗಳು, ಕಲಾವಿದರ ಅದ್ಭುತ ಅಭಿನಯದ ಕಾರಣ ಚೇಸ್ ಸಿನಿಮಾ ಸೂಪರ್ ಹಿಟ್ ಆಗಿದೆ. ನಟಿ ರಾಧಿಕಾ ನಾರಾಯಣ್ ಅವರ ವಿಭಿನ್ನ ಶೇಡ್ಸ್ ಇರುವ ಪಾತ್ರ, ಅರ್ಜುನ್ ಯೋಗಿ, ಶೀತಲ್ ಶೆಟ್ಟಿ ಅವರ ಪಾತ್ರಗಳು ನೋಡುಗರ ಮನಸ್ಸನ್ನು ಆವರಿಸಿವೆ. ಕ್ರೈಂ, ಥ್ರಿಲ್ಲರ್ ಜಾನರ್ ಸಿನಿಮಾ ಆದರೂ ಚೇಸ್ ಸಿನಿಮಾ ಪ್ರೇಕ್ಷರಿಂದ ಮೆಚ್ಚುಗೆ ಪಡೆದು ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ಕ್ರೇಜ್ ಕ್ರಿಯೇಟ್ ಮಾಡಿದೆ. ಈ ಸಿನಿಮಾ ಬಗ್ಗೆಯೇ ಎಲ್ಲರೂ ಮಾತನಾಡುವಂತೆ ಮಾಡಿದೆ.
ಅಂದಹಾಗೆ ಈ ಸಿನಿಮಾದಲ್ಲಿ ಸುಶಾಂತ್ ಪೂಜಾರಿ, ರಾಜೇಶ್ ನಟರಂಗ, ಅರವಿಂದ್ ರಾವ್, ಪ್ರಮೋದ್ ಶೆಟ್ಟಿ, ಅರವಿಂದ್ ಬೋಳಾರ್, ಶ್ವೇತಾ ಸಂಜೀವುಲು, ರೆಹಮಾನ್ ಹಾಸನ್, ವೀಣಾ ಸುಂದರ್, ಸುಧಾ ಬೆಳವಾಡಿ, ಉಷಾ ಭಂಡಾರಿ, ಸುಂದರ್, ಸತೀಶ್ ಸಿದ್ಧಾರ್ಥ, ಮಾಧ್ಯಮಿಕ, ಪ್ರಿಯಾ ಶಟಮರ್ಶನ್ ಮುಂತಾದ ಕಲಾವಿದರೂ ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ಕಾರ್ತಿಕ್ ಆಚಾರ್ಯ ಸಂಗೀತ ಸಂಯೋಜಿಸಿದ್ದಾರೆ. ಅನಂತರಾಜ್ ಅರಸ್ ಛಾಯಾಗ್ರಹಣ ಮಾಡಿದ್ದಾರೆ. ಇದನ್ನೂ ಓದಿ: `ಪುಷ್ಪ 2’ನಲ್ಲಿ ಅಲ್ಲು ಅರ್ಜುನ್‌ಗೆ ಟಕ್ಕರ್ ಕೊಡಲಿದ್ದಾರೆ ಈ ಬಾಲಿವುಡ್ ಸ್ಟಾರ್
ಸಿಂಪ್ಲಿ ಫನ್ ಮೀಡಿಯಾ ನೆಟ್ ವರ್ಕ್ ಪ್ರೈವೇಟ್ ಲಿಮಿಟೆಡ್ ಬ್ಯಾನರ್ ಅಡಿಯಲ್ಲಿ ಮನೋಹರ್ ಸುವರ್ಣ ಚೇಸ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಿನಿಮಾ ನಿರ್ಮಾಣದಲ್ಲಿ ಪ್ರಶಾಂತ್ ಶೆಟ್ಟಿ, ಮತ್ತು ಪ್ರದೀಪ್ ಶೆಟ್ಟಿ ಕೂಡ ಸಾಥ್ ನೀಡಿದ್ದಾರೆ. ಶಿವ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಒಟ್ಟಾರೆ ಚೇಸ್ ಸಿನಿಮಾ ಸದ್ಯ ರಾಜ್ಯಾದ್ಯಂತ ಯಶಸ್ವಿಯಾಗಿ ಹೌಸ್ ಫುಲ್ ಪ್ರದರ್ಶನ ಕಾಣ್ತಿದ್ದು, ಚಿತ್ರತಂಡದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಂತಾಗಿದೆ. ಮುಂದಿನ ದಿನಗಳಲ್ಲಿ ಈ ಚಿತ್ರ ಏನೆಲ್ಲಾ ದಾಖಲೆಗಳನ್ನು ಬರೆಯಲಿದ್ಯೋ ನೋಡ್ಬೇಕು.