ಅಮೃತಹಳ್ಳಿಯ ದಾಸರಹಳ್ಳಿಯಲ್ಲಿ ಜೋಡಿ ಕೊಲೆ – ಮಲತಂದೆಯಿಂದಲೇ ಇಬ್ಬರು ಹೆಣ್ಣು ಮಕ್ಕಳ ಹತ್ಯೆ!

Public TV
1 Min Read
Amruthahalli

ಬೆಂಗಳೂರು: ಮಲತಂದೆಯಿಂದಲೇ ಇಬ್ಬರು ಹೆಣ್ಣುಮಕ್ಕಳ ದಾರುಣ ಕೊಲೆಯಾಗಿರುವ ಘಟನೆ ಬೆಂಗಳೂರಿನ (Bengaluru) ಅಮೃತಹಳ್ಳಿ ದಾಸರಹಳ್ಳಿಯಲ್ಲಿ (Amruthahalli Dasarahalli) ನಡೆದಿದ್ದು, ಸ್ಥಳೀಯರನ್ನು ಬೆಚ್ಚಿಬೀಳುವಂತೆ ಮಾಡಿದೆ.

ದಾಸರಹಳ್ಳಿಯ ಕಾವೇರಿ ಬಡಾವಣೆಯಲ್ಲಿ ನೆಲೆಸಿರುವ ಉತ್ತರ ಭಾರತ (North India) ಮೂಲದ ಮಹಿಳೆಯ ಮನೆಯಲ್ಲಿ ಘಟನೆ ನಡೆದಿದೆ. ಸ್ವತಃ ಮಲತಂದೆಯೇ ಸುಮಾರು 14 ಹಾಗೂ 16 ವರ್ಷದ ಹೆಣ್ಣು ಮಕ್ಕಳನ್ನು ಕೊಚ್ಚಿ ಕೊಲೆ ಮಾಡಿ, ಎಸ್ಕೇಪ್‌ ಆಗಿದ್ದಾನೆ. ಸುಮಿತ್‌ ಕೊಲೆ ಮಾಡಿ ಎಸ್ಕೇಪ್‌ ಆಗಿರುವ ಮಲತಂದೆ. ಸೃಷ್ಠಿ (14) ಮತ್ತು ಸೋನಿಯಾ(16) ಕೊಲೆಯಾದ ಅಪ್ರಾಪ್ತ ಮಕ್ಕಳು ಪೊಲೀಸ್‌ ಮೂಲಗಳು ತಿಳಿಸಿವೆ.

Amruthahalli 2

ಸದ್ಯ ಸ್ಥಳಕ್ಕೆ ಅಮೃತಹಳ್ಳಿ ಪೊಲೀಸರು, ಈಶಾನ್ಯ ವಿಭಾಗ ಡಿಸಿಪಿ ಸಜೀತ್, ಡಾಗ್ ಸ್ಕ್ವಾಡ್, ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಹಾಗೂ ಸೊಕೊ ಟೀಂ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಇಬ್ಬರು ಹೆಣ್ಣುಮಕ್ಕಳ ಜೋಡಿ ಜೊಲೆ ಏರಿಯಾ ಜನರನ್ನ ಭಯಭೀತಗೊಳಿಸಿದೆ.

ಪ್ರಕರಣದ ಕುರಿತು ಮಾಹಿತಿ ನೀಡಿದ ಈಶಾನ್ಯ ವಿಭಾಗ ಡಿಸಿಪಿ ಸುಜೀತ್, ಶನಿವಾರ ಮಧ್ಯಾಹ್ನ 3:30ರ ಸುಮಾರಿಗೆ ಈ ಘಟನೆ ನಡೆದಿದೆ. ಇಬ್ಬರು ಅಪ್ರಾಪ್ತ ಮಕ್ಕಳನ್ನು ಮಲತಂದೆಯೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ತಾಯಿ ಅನಿತಾ ದೂರು ಕೊಟ್ಟಿದ್ದಾರೆ. ಅಮೃತಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ತಾಯಿ ಅನಿತಾ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಮಲ ತಂದೆ ಸುಮಿತ್ ಪುಡ್ ಡಿಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದ ಎಂದು ತಿಳಿಸಿದ್ದಾರೆ.

ಅಲ್ಲದೇ ಆರೋಪಿ ಯಾವ ಕಾರಣಕ್ಕೆ ಮಕ್ಕಳನ್ನ ಕೊಲೆ ಮಾಡಿದ್ದಾನೆ ಅನ್ನೋದು ತಿಳಿದುಬಂದಿಲ್ಲ. ಸದ್ಯ ಆರೋಪಿ ತಲೆಮರಿಸಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ.

Share This Article