ಜೊಳ ಹಾಗೂ ಕ್ಯಾಪ್ಸಿಕಮ್‌ನ ಮಿಶ್ರಣದೊಂದಿಗೆ ಮಾಡಲಾಗುವ ಈ ರೆಸಿಪಿ ಗುಜರಾತ್‌ನ ಸಾಂಪ್ರದಾಯಿಕ ಖಾದ್ಯ ಅಲ್ಲದಿದ್ದರೂ ಇದು ಫೇಮಸ್. ಯುವ ಜನರು ಇದನ್ನು ತುಂಬಾ ಇಷ್ಟಪಟ್ಟು ಸವಿಯುತ್ತಾರೆ. ಏಕೆಂದರೆ ಇದಕ್ಕೆ ಹೆಚ್ಚು ಎಣ್ಣೆ ಹಾಗೂ ಮಸಾಲೆಗಳನ್ನು ಸೇರಿಸಲಾಗುವುದಿಲ್ಲ. ಹಾಲಿನೊಂದಿಗೆ ಬೇಯಿಸಿ, ಭಾರತೀಯ ಸ್ಟೈಲ್‌ನ ಒಗ್ಗರಣೆ ನೀಡಿ ಮಾಡಲಾಗುವ ಈ ಟೇಸ್ಟಿ ಮಕೈ ಕ್ಯಾಪ್ಸಿಕಮ್ ಅನ್ನು ಒಮ್ಮೆ ಟ್ರೈ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಬೇಯಿಸಿದ ಸ್ವೀಟ್ ಕಾರ್ನ್ – 2 ಕಪ್
ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಮ್ – 1 ಕಪ್
ತುಪ್ಪ – 1 ಟೀಸ್ಪೂನ್
ಜೀರಿಗೆ – ಅರ್ಧ ಟೀಸ್ಪೂನ್
ಶುಂಠಿ, ಹಸಿರು ಮೆಣಸಿನಕಾಯಿ ಪೇಸ್ಟ್ – 1 ಟೀಸ್ಪೂಮ್
ಮೈದಾ ಹಿಟ್ಟು – 2 ಟೀಸ್ಪೂನ್
ಹಾಲು – 2 ಕಪ್
ಸಕ್ಕರೆ – ಅರ್ಧ ಟೀಸ್ಪೂನ್
ಕರಿ ಮೆಣಸಿನಪುಡಿ – ಕಾಲು ಟೀಸ್ಪೂನ್ ಇದನ್ನೂ ಓದಿ: ಚಪಾತಿ, ರೋಟಿ ಜೊತೆ ಸವಿಯಿರಿ ಪಂಜಾಬಿ ಸ್ಟೈಲ್ ಮಟರ್ ಪನೀರ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ನಾನ್ ಸ್ಟಿಕ್ ಕಡಾಯಿಯಲ್ಲಿ ತುಪ್ಪ ಬಿಸಿ ಮಾಡಿ, ಅದಕ್ಕೆ ಜೀರಿಗೆ ಹಾಗೂ ಶುಂಠಿ, ಹಸಿರು ಮೆಣಸಿನಕಾಯಿ ಪೇಸ್ಟ್ ಸೇರಿಸಿ.
* ಜೀರಿಗೆ ಸಿಡಿದ ಬಳಿಕ ಮೈದಾ ಹಿಟ್ಟನ್ನು ಸೇರಿಸಿ, ಕಡಿಮೆ ಉರಿಯಲ್ಲಿ 2-3 ನಿಮಿಷ ಹುರಿದುಕೊಳ್ಳಿ.
* ಬಳಿಕ ಕಾರ್ನ್ ಹಾಗೂ ಕ್ಯಾಪ್ಸಿಕಮ್ ಸೇರಿಸಿ ಮಧ್ಯಮ ಉರಿಯಲ್ಲಿ 3-4 ನಿಮಿಷ ಬೇಯಿಸಿಕೊಳ್ಳಿ.
* ನಂತರ ಹಾಲು ಸೇರಿಸಿ ಕಡಿಮೆ ಉರಿಯಲ್ಲಿ 4-5 ನಿಮಿಷಗಳ ವರೆಗೆ ಕೈ ಆಡಿಸುತ್ತಾ ಕುದಿಸಿಕೊಳ್ಳಿ.
* ಮಿಶ್ರಣ ದಪ್ಪವಾಗುತ್ತಿದ್ದಂತೆ ಸಕ್ಕರೆ, ಕರಿ ಮೆಣಸಿನಪುಡಿ ಹಾಗೂ ಉಪ್ಪು ಸೇರಿಸಿ ಮಿಕ್ಸ್ ಮಾಡಿ.
* ಇದೀಗ ಕ್ರೀಮಿ ಮಕೈ ಕ್ಯಾಪ್ಸಿಕಮ್ ತಯಾರಾಗಿದ್ದು, ಇದನ್ನು ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: ಕುರುಕಲು ತಿಂಡಿಗೆ ಹಠ ಹಿಡಿಯೋ ಮಕ್ಕಳಿಗಾಗಿ ಮಾಡಿ ರಿಬ್ಬನ್ ಸೇವ್