ಗಾಂಧಿನಗರ: ಗೋವಿನ ಮೂತ್ರದಿಂದ ಕ್ಯಾನ್ಸರ್ ಗುಣಪಡಿಸಬಹುದು ಎಂದು ಗುಜರಾತಿನ ಸಂಶೋಧಕರು ಹೇಳಿದ್ದಾರೆ.
ಜುನಾಘಡ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ವಿಜ್ಞಾನಿಗಳು ಒಂದು ವರ್ಷದಿಂದ ಪ್ರಯೋಗ ನಡೆಸಿ ಈಗ ಯಶಸ್ವಿಯಾಗಿದ್ದಾರೆ. ಸಂಶೋಧನೆಯ ಮೊದಲ ಪ್ರಯತ್ನದಲ್ಲಿಯೇ ಗೋವಿನ ಮೂತ್ರವನ್ನು ಬಳಸಿ ಕ್ಯಾನ್ಸರ್ ಜೀವಕೋಶಗಳನ್ನು ಕೊಲ್ಲಬಹುದು ಎಂಬ ಪ್ರಯತ್ನದಲ್ಲಿ ಯಶಸ್ಸು ಕಂಡುಕೊಂಡಿದ್ದಾರೆ.
Advertisement
ಗೋ ಮೂತ್ರದಿಂದ ಬಾಯಿ, ಗರ್ಭಕೋಶ, ಶ್ವಾಸಕೋಶ, ಮೂತ್ರಪಿಂಡ, ಚರ್ಮ, ಸ್ತನ ಕ್ಯಾನ್ಸರ್ ಗಳನ್ನು ಕೂಡ ಗುಣಪಡಿಸಬಹುದೆಂದು ತಿಳಿಸಿದ್ದಾರೆ.
Advertisement
ಸಹಾಯಕ ಪ್ರಾಧ್ಯಾಪಕರಾದ ಶಾರದಾ ಭಟ್, ರುಕಮ್ ಸಿನ್ಹ ತೋಮರ್, ಹಾಗೂ ಸಂಶೋಧನಾ ವಿದ್ಯಾರ್ಥಿ ಕವಿತಾ ಜೋಶಿ ಯವರನ್ನು ಒಳಗೊಡ ಈ ಸಂಶೋಧನಾ ತಂಡ, ಒಂದು ವರ್ಷದ ಪ್ರಯೋಗದ ಫಲವಾಗಿ ಕ್ಯಾನ್ಸರ್ ನ್ನು ಗೋ ಮೂತ್ರದಿಂದ ಗುಣಪಡಿಸಬಹುದು ಎಂದು ಸಾಬೀತುಪಡಿಸಿದೆ.
Advertisement
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾರದಾ ಭಟ್ ಬಾಟಲಿಯಲ್ಲಿ ಸಂಗ್ರಹಿಸಲಾದ ಕ್ಯಾನ್ಸರ್ ಕೋಶಗಳ ಮೇಲೆ ನಾವು ನೇರ ಪ್ರಯೋಗ ಮಾಡಿದ್ದೇವೆ. ನಿರ್ಧಿಷ್ಟ ಸಂಖ್ಯೆಯ ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಬೇಕಾದ ಗೋ ಮೂತ್ರದ ಪ್ರಮಾಣವನ್ನು ಎಷ್ಟಿರಬೇಕೆಂಬುದನ್ನು ಅಪಾಯಕಾರಿಯಾದ ಸಂಶೋಧನೆಯ ಮೂಲಕ ಕಂಡುಕೊಂಡಿದ್ದೇವೆ ಎಂದು ಹೇಳಿದರು. ಇದನ್ನು ಓದಿ: ಆನ್‍ಲೈನ್ ನಲ್ಲಿ ನಿಮಗೆ ಬೇಕಾದ ತಳಿಯ ಹಸುಗಳನ್ನು ಖರೀದಿಸಿ!- ಏನಿದರ ವಿಶೇಷತೆ?
ಮುಂದಿನ ಹಂತದಲ್ಲಿ ಇದನ್ನು ಇಲಿಗಳ ಮೇಲೆ ಪ್ರಯೋಗ ಮಾಡಲಾಗುತ್ತದೆ. ಅದು ಯಶಸ್ಸು ಕಂಡನಂತರ ವಿವಿಧ ರೀತಿಯ ಕ್ಯಾನ್ಸರ್ ವಿಧಗಳಿಗೆ ಮಾತ್ರೆಗಳನ್ನು ತಯಾರಿಸಲಾಗುವುದು ಎಂದರು.
ಈ ಕುರಿತು ಮಾತನಾಡಿದ ತೋಮರ್, ಕ್ಯಾನ್ಸರ್ ಚಿಕಿತ್ಸೆಗೆ ನೀಡುವ ಕೆಮೊಥೆರಪಿಯಿಂದ ಶರೀರದಲ್ಲಿನ ಕ್ಯಾನ್ಸರ್ ಜೀವಕೋಶಗಳೊಂದಿಗೆ ಇನ್ನುಳಿದ ಜೀವಕೋಶಗಳನ್ನೂ ಸಹ ಅದು ಕೊಲ್ಲುತ್ತದೆ. ಆದರೆ ಗೋ ಮೂತ್ರ ಕೇವಲ ಕ್ಯಾನ್ಸರ್ ಪೀಡಿತ ಕೋಶಗಳನ್ನು ಮಾತ್ರ ಕೊಲ್ಲುತ್ತದೆ ಎಂದು ಹೇಳಿದರು.