ಹೈದರಾಬಾದ್: ಕೋವ್ಯಾಕ್ಸಿನ್, ಕೋವಿಶೀಲ್ಡ್ 2 ವಿಧದ ಲಸಿಕೆ ಪಡೆಯುವುದು ಕೊರೊನಾ ಸೋಂಕಿನ ವಿರುದ್ಧ 4 ಪಟ್ಟು ಪರಿಣಾಮಕಾರಿ ಎಂದು ಅಧ್ಯಯನವೊಂದು ತಿಳಿಸಿದೆ.
Advertisement
2 ಲಸಿಕೆಗಳನ್ನು ಪಡೆಯುವುದರಿಂದ ಭಾರೀ ಪ್ರತಿಕಾಯ ಶಕ್ತಿ ವೃದ್ಧಿ ಆಗುತ್ತದೆ. ಹೈದರಾಬಾದ್ ಮೂಲದ ಎಜಿಐ ಆಸ್ಪತ್ರೆ ಮತ್ತು ಏಷ್ಯನ್ ಹೆಲ್ತ್‍ಕೇರ್ ಫೌಂಡೇಶನ್ ಸಂಶೋಧಕರು ನಡೆಸಿದ ಜಂಟಿ ಅಧ್ಯಯನದಲ್ಲಿ ಈ ಅಂಶ ಬಹಿರಂಗವಾಗಿದೆ. ಇದನ್ನೂ ಓದಿ: ಕೊರೊನಾ ಸ್ಫೋಟ ಒಟ್ಟು 2,479 ಪ್ರಕರಣ – ಬೆಂಗ್ಳೂರಲ್ಲಿ 2,053 ಕೇಸ್
Advertisement
Advertisement
ಕೋವಿಡ್ ಲಸಿಕೆ ಪಡೆಯದ, ಸೋಂಕು ಇಲ್ಲದ 330 ಜನರ ಮೇಲೆ ಈ ಪ್ರಯೋಗ ನಡೆಸಲಾಗಿತ್ತು. ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಯ ಒಂದೊಂದು ಡೋಸ್ ಆಗಿ ನೀಡುವುದು ಸುರಕ್ಷಿತವೇ, ಮಿಕ್ಸಿಂಗ್ ಲಸಿಕೆ ಪರಿಣಾಮ ಏನು? ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ಬಗ್ಗೆ ಸಂಶೋಧನೆ ನಡೆಸಲಾಗಿದೆ.
Advertisement
ಒಂದೇ ಲಸಿಕೆಯನ್ನು ಎರಡು-ಡೋಸ್‍ಗೆ ಹೋಲಿಸಿದರೆ ನಾಲ್ಕು ಪಟ್ಟು ಹೆಚ್ಚಾಗಿರುತ್ತದೆ ಎಂದು ನಾವು ಕಂಡುಕೊಂಡಿದ್ದೇವೆ ಎಂದು ಅಧ್ಯಯನದಲ್ಲಿ ತೊಡಗಿರುವ ಸಂಶೋಧಕರಲ್ಲಿ ಒಬ್ಬರಾಗಿರುವ ಡಾ. ರೆಡ್ಡಿ ಹೇಳಿದ್ದಾರೆ.