ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟವ್ ಪ್ರಕರಣಗಳ ಸಂಖ್ಯೆ ಭಾರೀ ಏರಿಕೆ ಕಂಡಿದೆ. ಇಂದು ಒಟ್ಟು 2,479 ಹೊಸ ಕೇಸ್ ದಾಖಲಾಗಿದ್ದು, 4 ಮರಣ ಪ್ರಕರಣ ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಕೊರೊನಾ ಸ್ಫೋಟ ಮುಂದುವರಿದಿದ್ದು, ನಿನ್ನೆ 1,041 ಇದ್ದ ಕೇಸ್ ಇಂದು ಬರೋಬ್ಬರಿ 2,053ಕ್ಕೆ ಏರಿಕೆ ಕಂಡು ಮೂರನೇ ಅಲೆಯ ಆತಂಕ ಹೆಚ್ಚಿಸಿದೆ.
Advertisement
ಈ ಮೂಲಕ ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.2.59ಕ್ಕೆ ಏರಿಕೆ ಕಂಡಿದೆ. ಆದರೆ ಇಂದು ಯಾವುದೇ ಓಮಿಕ್ರಾನ್ ಪ್ರಕರಣ ಕಂಡು ಬಂದಿಲ್ಲ. ಇಂದು ಒಟ್ಟು 95,391 ಜನರಿಗೆ ಟೆಸ್ಟ್ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡುವ ಮೂಲಕ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: 35 ರೂ. ಬೆಲೆ ಬಾಳುವ ಕೋವಿಡ್ ಆಂಟಿವೈರಲ್ ಡ್ರಗ್ ಮುಂದಿನ ವಾರ ಮಾರುಕಟ್ಟೆಗೆ
Advertisement
Data shows us that cases are doubling every 2-3 days in Karnataka!
While the Government is working on containment measures for the new wave, appeal to everyone to strictly follow 3Ms:
????Mask up
????Maintain social distance
????Maintain hand hygiene#COVID19 #Omicron #Karnataka pic.twitter.com/uaMEYQH9wz
— Dr Sudhakar K (@mla_sudhakar) January 4, 2022
Advertisement
ರಾಜ್ಯದಲ್ಲಿ ಸತತ ಮೂರು ದಿನಗಳಿಂದ 1 ಸಾವಿರಕ್ಕೂ ಹೆಚ್ಚು ಕೇಸ್ ದಾಖಲಾಗಿತ್ತು. ಇಂದು ಆ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡಿದ್ದು, 2 ಸಾವಿರಕ್ಕೂ ಅಧಿಕ ಕೇಸ್ ಪತ್ತೆಯಾಗಿರುವುದು ಸಾಕಷ್ಟು ಆತಂಕ ಮೂಡಿಸಿದೆ. ಅಲ್ಲದೆ ರಾಜ್ಯ ಸರ್ಕಾರ ಇದೀಗ ಕಠಿಣ ನಿಯಮಗಳ ಮೂಲಕ ಈ ಏರಿಕೆಯತ್ತ ಮುಖಮಾಡಿರುವ ಕೊರೊನಾ ಪ್ರಕರಣಗಳನ್ನು ನಿಯಂತ್ರಣ ಮಾಡಲು ಮುಂದಾಗುತ್ತಿದೆ. ಸರ್ಕಾರ ಯಾವ ರೀತಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಇದನ್ನೂ ಓದಿ: ಒಂದೇ ದಿನದಲ್ಲಿ 100 ವೈದ್ಯರಿಗೆ ಕೋವಿಡ್ ಪಾಸಿಟಿವ್!
Advertisement