ಲಂಡನ್: ಚೀನಾ ಮತ್ತು ಭಾರತದ ಕೋವ್ಯಾಕ್ಸಿನ್ ಲಸಿಕೆಗೆ ಇಂಗ್ಲೆಂಡ್ (ಯುಕೆ) ಅನುಮೋದನೆ ನೀಡಿದೆ. ಇದರಿಂದ ಕೋವ್ಯಾಕ್ಸಿನ್ ಲಸಿಕೆ ಪಡೆದ ವಿದ್ಯಾರ್ಥಿಗಳು, ಪ್ರವಾಸಿಗರು ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳಬಹುದಾಗಿದೆ.
Advertisement
ಚೀನಾದ ಸಿನೋಫಾರ್ಮ್ ಹಾಗೂ ಭಾರತದ ಭಾರತ್ ಬಯೋಟೆಕ್‌ನ ಲಸಿಕೆಗಳನ್ನು ಇಂಗ್ಲೆಂಡ್ ಅನುಮೋದನೆಯ ಪಟ್ಟಿಗೆ ಸೇರಿಸಿದೆ ಎಂದು ಸಾರಿಗೆ, ಆರೋಗ್ಯ ಇಲಾಖೆ ಮತ್ತು ಸಾಮಾಜಿಕ ಕಾಳಜಿ ಇಲಾಖೆಯು ಹೊರಡಿಸಿರುವ ನೋಟಿಸ್‌ನಿಂದ ತಿಳಿದುಬಂದಿದೆ. ಇದನ್ನೂ ಓದಿ: ಆಂಧ್ರಪ್ರದೇಶಕ್ಕೆ ಅಮರಾವತಿ ರಾಜಧಾನಿ: ಜಗನ್ ಮೋಹನ್ ರೆಡ್ಡಿ
Advertisement
ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮೋದನೆ ಪಡೆದ ಭಾರತದ ಕೋವ್ಯಾಕ್ಸಿನ್ ಸೇರಿದಂತೆ ಏಳು ಕೋವಿಡ್ ಲಸಿಕೆಗಳಿಗೆ ಯುಕೆ ಅನುಮತಿಸಿದೆ. ಆ ಮೂಲಕ ಆಸ್ಟ್ರೇಲಿಯಾ ಮಾದರಿಯನ್ನು ಅನುಸರಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮೋದನೆ ಪಡೆದ ಲಸಿಕೆಗಳನ್ನು ಪಡೆದವರ ಪ್ರಯಾಣಕ್ಕೆ ಅಮೆರಿಕ ಈಚೆಗಷ್ಟೇ ಅನುಮತಿ ಕಲ್ಪಿಸಿದೆ. ಇದನ್ನೂ ಓದಿ: ಕೃಷಿ ಕಾನೂನು ವಾಪಸ್ ಬೆನ್ನಲ್ಲೇ ಪಂಜಾಬ್‌ನಲ್ಲಿ ಕ್ಯಾಪ್ಟನ್ ಜೊತೆಗೆ ಬಿಜೆಪಿ ಮೈತ್ರಿ
Advertisement
Advertisement
ಯುಕೆಗೆ ಪ್ರಯಾಣಿಸುವವರು ಅನುಮೋದಿತ ಕೋವಿಡ್ ಲಸಿಕೆಯ ಎರಡು ಡೋಸ್‌ಗಳನ್ನು ಪಡೆದಿರಬೇಕು. ಒಂದು ಡೋಸ್ ಮಾತ್ರ ಪಡೆದಿದ್ದರೆ ಅಂತಹವರು ಯುಕೆಗೆ ಪ್ರಯಾಣ ಬೆಳೆಸುವಾಗ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು. ಜೊತೆಗೆ ಇಂಗ್ಲೆಂಡ್ ಗಡಿ ಪ್ರವೇಶಿಸಿದ ನಂತರ 10 ದಿನಗಳು ಕ್ವಾರಂಟೈನ್‌ಗೆ ಒಳಗಾಗಬೇಕು.