ಬೆಂಗಳೂರು: ಮಗಳ ಖಾಸಗಿ ವಿಡಿಯೋ ಇಟ್ಟುಕೊಂಡು ದಂಪತಿ ಯುವಕನ ಪೋಷಕರಿಗೆ ಹಣ ನೀಡುವಂತೆ ಬ್ಲಾಕ್‍ಮೇಲ್ ಮಾಡಿ ಅರೆಸ್ಟ್ ಆದ ಘಟನೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದಿದೆ.
ಕವಿತಾ ಹಾಗೂ ಪ್ರಮೋದ್ ಕುಮಾರ್ ಅರೆಸ್ಟ್ ಆಗಿರುವ ದಂಪತಿ. ಯುವತಿ ಡೇಟಿಂಗ್ ಆಪ್ ಮೂಲಕ ಯುವಕನೊಬ್ಬನನ್ನು ಪರಿಚಯ ಮಾಡಿಕೊಂಡಿದ್ದಳು. ಬಳಿಕ ಇಬ್ಬರು ಲಾಡ್ಜ್‌ಗೆ ಹೋಗಿದ್ದರು. ಇದನ್ನು ತಿಳಿದ ಯುವತಿಯ ತಂದೆ-ತಾಯಿ ಅಲ್ಲಿಗೆ ಎಂಟ್ರಿ ಕೊಟ್ಟಿದ್ದಾರೆ. ಬಳಿಕ ದಂಪತಿ ನಿಮ್ಮ ಮಗ ನಮ್ಮ ಮಗಳ ಜೊತೆ ಇರುವ ಖಾಸಗಿ ವಿಡಿಯೋಗಳಿವೆ ಎಂದು ಯುವಕನ ಪೋಷಕರಿಗೆ ಕರೆ ಮಾಡಿ 1 ಕೋಟಿ ಹಣ ನೀಡುವಂತೆ ಬ್ಲಾಕ್ ಮೇಲ್ ಮಾಡಿದ್ದಾರೆ. ಹಣ ನೀಡದಿದ್ದರೆ ಫೋಟೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
Advertisement
Advertisement
ಯುವಕನ ಪೋಷಕರು ಪ್ರಾಧ್ಯಾಪಕರಾಗಿದ್ದು, ದಂಪತಿಯ ಬೆದರಿಕೆಗೆ ಹೆದರಿ ಅವರನ್ನು ಭೇಟಿ ಮಾಡಲು ಹೋಟೆಲ್‍ಗೆ ತೆರಳಿದ್ದರು. ಈ ವೇಳೆ ದಂಪತಿ ನಮ್ಮ ಮಗಳು ಈಗ ಗರ್ಭಿಣಿಯಾಗಿದ್ದಾಳೆ. ಅದಕ್ಕೆ ನಿಮ್ಮ ಪುತ್ರನೇ ಕಾರಣ. ಇದಕ್ಕೆ ಸಾಕ್ಷಿಯಾಗಿ ನಿಮ್ಮ ಮಗ ನಮ್ಮ ಮಗಳ ಜೊತೆ ಲಾಡ್ಜ್ ನಲ್ಲಿ ಇರುವ ವಿಡಿಯೋಗಳಿವೆ. ನಮ್ಮ ಮಗಳಿಗೆ ಆದ ಅನ್ಯಾಯದ ಬಗ್ಗೆ ಮಾಧ್ಯಮಗಳ ಬಳಿಕ ಹೋಗಿ ನ್ಯಾಯ ಕೇಳುತ್ತೇವೆ. ಮಾಧ್ಯಮಗಳ ಬಳಿ ಹೋಗಬಾರದು ಎಂದರೆ ನಮಗೆ 1 ಕೋಟಿ ರೂ. ನೀಡಿ ಸುಮ್ಮನಾಗುತ್ತೆವೆ ಎಂದಿದ್ದಾರೆ.
Advertisement
Advertisement
ಯುವಕನ ಪೋಷಕರು ಮರ್ಯಾದೆಗೆ ಅಂಜಿ ದಂಪತಿಗೆ ಮೊದಲು 22 ಲಕ್ಷ ರೂ. ಚೆಕ್ ನೀಡಿದ್ದಾರೆ. ನಂತರ ಮರುದಿನ ದಂಪತಿ ಮತ್ತೆ ಕರೆ ಮಾಡಿ ಮಗಳಿಗೆ ಗರ್ಭಪಾತ ಮಾಡಿಸಲು ವೈದ್ಯರು 20 ಲಕ್ಷ ರೂ. ಆಗುತ್ತೆ ಎಂದು ಹೇಳಿದ್ದಾರೆ. ಈಗ ನೀವು 20 ಲಕ್ಷ ರೂ. ಕೊಡಿ ಎಂದು ಯುವಕನ ಪೋಷಕರಿಗೆ ಒತ್ತಾಯಿಸಿದ್ದಾರೆ. ಈ ವೇಳೆ ಯುವಕನ ಪೋಷಕರು ಕವಿತಾ ಬ್ಯಾಂಕ್ ಖಾತೆಗೆ ಹಣ ವರ್ಗಾಹಿಸಿದ್ದಾರೆ. ದಂಪತಿ ಮತ್ತೆ ಹಣಕ್ಕೆ ಒತ್ತಾಯ ಮಾಡಿದ ವೇಳೆ ಯುವಕನ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಯುವಕನ ಪೋಷಕರು ತಮ್ಮ ದೂರಿನಲ್ಲಿ ದಂಪತಿ ಬ್ಲಾಕ್‍ಮೇಲ್ ಮಾಡಿ ಐದು ತಿಂಗಳಲ್ಲಿ ಬರೋಬ್ಬರಿ 42 ಲಕ್ಷ ರೂ. ಪಡೆದಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಈ ಬಗ್ಗೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಯುವತಿಯ ಪೋಷಕರನ್ನು ಬಂಧಿಸಿದ್ದಾರೆ.