ತೆಲಂಗಾಣದ ಬಸ್ ನಿಲ್ದಾಣದ ಬಳಿ ದೇಸೀ ಬಾಂಬ್ ಸ್ಫೋಟ

Telangana Blast

ಹೈದರಾಬಾದ್: ತೆಲಂಗಾಣದ (Telangana) ಸಿದ್ದಿಪೇಟ್ (Siddipet) ಜಿಲ್ಲೆಯ ಹುಸ್ನಾಬಾದ್ ಆರ್‌ಟಿಸಿ ಬಸ್ ನಿಲ್ದಾಣದಲ್ಲಿ (Bus Stand) ದೇಶೀ ನಿರ್ಮಿತ ಬಾಂಬ್ (Country Made Bomb) ಸ್ಫೋಟಗೊಂಡಿದೆ. ಘಟನೆಯಿಂದಾಗಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ವರದಿಗಳ ಪ್ರಕಾರ ಮಂಗಳವಾರ ಬೆಳಗ್ಗೆ 9:45ರ ವೇಳೆಗೆ ಹಣ್ಣು ಮಾರಾಟಗಾರನೊಬ್ಬ ತನ್ನ ಗಾಡಿಯನ್ನು ತಿಳಿಯದೇ ದೇಸೀ ಬಾಂಬ್ ಮೇಲೆ ಹತ್ತಿಸಿದ್ದಾನೆ. ಇದರಿಂದ ಸ್ಫೋಟ ಸಂಭವಿಸಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಸ್ಫೋಟ ಸಂಭವಿಸಿದ ಮಾಹಿತಿ ಲಭಿಸುತ್ತಲೇ ಹುಸ್ನಾಬಾದ್ ಪೊಲೀಸ್ ಅಧಿಕಾರಿಗಳು ಬಾಂಬ್ ನಿಷ್ಕ್ರಿಯ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿದ್ದಾರೆ. ಸ್ಫೋಟದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ತನಿಖೆಗಾಗಿ ಪರಿಶೀಲಿಸಿದ್ದಾರೆ. ಬಳಿಕ ಪೊಲೀಸರು ಬಸ್ ನಿಲ್ದಾಣದ ಪೊದೆಗಳಲ್ಲಿ 5 ದೇಸೀ ಬಾಂಬ್‌ಗಳನ್ನು ಪತ್ತೆ ಹಚ್ಚಿದ್ದಾರೆ. ಈ ಸ್ಫೋಟಕಗಳನ್ನು ಸಾಮಾನ್ಯವಾಗಿ ಕೃಷಿ ಬೆಳೆಗಾರರು ಕಾಡು ಹಂದಿಗಳ ಉಪಟಳವನ್ನು ಕಡಿಮೆಗೊಳಿಸಲು, ಅವುಗಳನ್ನು ಬೆದರಿಸಲು ಬಳಸುತ್ತಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಶಾಸಕನ ಮೇಲೆ ಹಲ್ಲೆ- ಓಂಕಾರೇಶ್ವರ ದೇವಸ್ಥಾನದಲ್ಲಿ ಪ್ರಮಾಣ ಮಾಡಿದ ಬಿಜೆಪಿ ಟಿಕೆಟ್ ಆಕಾಂಕ್ಷಿ

ಕೃಷಿ ಹೊಲಗಳಲ್ಲಿ ಕಾಡು ಹಂದಿಗಳನ್ನು ಹೆದರಿಸಲು ಈ ಬಾಂಬ್‌ಗಳನ್ನು ಬಳಸಲಾಗುತ್ತದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಯಾರೋ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಇದು ಆಕಸ್ಮಿಕವಾಗಿ ಬಿದ್ದಿರಬಹುದು. ಆದರೂ ನಾವು ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

police jeep 1

ಈ ಬಾಂಬ್‌ಗಳನ್ನು ಇದ್ದಿಲು ಮತ್ತು ಗನ್‌ಪೌಡರ್‌ನಿಂದ ತಯಾರಿಸಲಾಗಿದ್ದು, ಬಿಳಿ ದಾರದಿಂದ ಕಟ್ಟಲಾಗಿದೆ. ಇದನ್ನು ಸ್ಫೋಟಿಸಲು ಪ್ರತ್ಯೇಕ ಟ್ರಿಗರ್ ಬಟನ್ ಇಲ್ಲ. ಆದರೆ ಇದನ್ನು ಒತ್ತಿದಾಗ ಸ್ಫೋಟಗೊಳ್ಳುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನಾಳೆಯಿಂದ ಹಾಲು, ಮೊಸರಿನ ದರ 2 ರೂ. ಏರಿಕೆ

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *