Bengaluru CityDistrictsKarnatakaLatestLeading NewsMain Post

ನಾಳೆಯಿಂದ ಹಾಲು, ಮೊಸರಿನ ದರ 2 ರೂ. ಏರಿಕೆ

ಬೆಂಗಳೂರು: ನಂದಿನಿ ಹಾಲು(Nandini Milk), ಮೊಸರಿನ (Yoghurt) ದರದಲ್ಲಿ 2 ರೂ. ಏರಿಕೆ ಮಾಡಿದ್ದು, ನಾಳೆಯಿಂದ ಅನ್ವಯವಾಗಲಿದೆ ಎಂದು ಕೆಎಂಎಫ್‌ (KMF) ತಿಳಿಸಿದೆ.

ಕೆಎಂಎಫ್ ಸಭೆ ಮುಕ್ತಾಯದ ಬಳಿಕ ಇಂದು ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ಹಾಲು, ಮೊಸರಿನ ದರ ಏರಿಕೆಯ ಕುರಿತು ತಿಳಿಸಿದ್ದಾರೆ. ಈ ದರವನ್ನು ನೇರವಾಗಿ ರೈತರಿಗೆ ನೀಡಲಿದ್ದೇವೆ. ಸೌತ್‌ನಲ್ಲಿ ಮಳೆ ಹೆಚ್ಚಾಗಿ ರೋಗ ಬಂದು ದನ ಸಾಯುತ್ತಿದ್ದವು, ಹಾಗಾಗಿ ಗಮನದಲ್ಲಿಟ್ಟುಕೊಂಡು ಏರಿಕೆ ಮಾಡಿದ್ದೇವೆ. ಕ್ಷೀರ ಭಾಗ್ಯ ಯೋಜನೆಯಿಂದ 10 ಕೋಟಿ ನಷ್ಟವಾಗುತ್ತಿದೆ. ಇದರ ಬಗ್ಗೆ ಮುಖ್ಯಮಂತ್ರಿ ಜೊತೆ ಮಾತನಾಡಿದ್ದೇವೆ. ಅದಷ್ಟು ಬೇಗ ಈ ಬಗ್ಗೆ ನಿರ್ಧಾರ ಮಾಡಿದರೆ ರೈತರಿಗೆ ತಲುಪಿಸಲು ಅನುಕೂಲವಾಗಲಿದೆ. ನಾಳೆ ಬೆಳಗ್ಗೆ 11 ಗಂಟೆ ಮೂಲಕ ಮಾರುಕಟ್ಟೆಗೆ ಬರುವ ಹಾಲಿನ ಪ್ಯಾಕೆಟ್‌ಗಳ ಮೇಲೆ ಹೊಸ ದರ ಪ್ರಿಂಟ್ ಆಗಿ ಬರಲಿದೆ ಎಂದು ತಿಳಿಸಿದರು.

ಹಳೆಯ ದರ – ಹೊಸ‌ ದರ:
ಟೋನ್ಡ್ ಹಾಲಿನ ದರ ಈ ಮೊದಲು 37 ರೂ. ಇತ್ತು, ನಾಳೆಯಿಂದ 39 ರೂ. ಆಗಲಿದೆ. ಹೋಮೋಜಿನೈಸ್ಡ್ ಟೋನ್ಡ್ ಹಾಲಿನ ಹಳೆಯ ದರ 38 ರೂ. ಇದ್ದು, ಹೊಸ ದರ 40 ರೂ.ಆಗಲಿದ್ದು, ಹೋಮೋಜಿನೈಸ್ಡ್ ಹಸುವಿನ ಹಾಲು 42 ರೂ. ಇದ್ದು, 44 ರೂ. ಆಗಲಿದೆ. ಇನ್ನೂ ಸ್ಪೆಷಲ್‌ ಹಾಲು ಹಾಗೂ ಶುಭಂ ಹಾಲಿನ ಹಳೆಯ ದರ 43 ರೂ. ಇದ್ದು, ಹೊಸ ದರ 45 ರೂ. ಆಗಲಿದೆ. ಹೋಮೋಜಿನೈಸ್ಡ್ ಸ್ಟ್ಯಾಂಡರ್ಡೈಸರ್ ಹಾಲಿನ ದರ ಈ ಮೊದಲು 44 ರೂ. ಇದ್ದು, ನಾಳೆಯಿಂದ 46 ಆಗಲಿದೆ. ಸಮೃದ್ಧಿ ಹಾಲಿನ ದರ 48 ರೂ. ಇದ್ದು, ನಾಳೆಯಿಂದ 50 ರೂ. ಆಗಲಿದೆ. ಸಂತೃಪ್ತಿ ಹಾಲಿನ 50 ರೂ. ಇದ್ದು, ನಾಳೆಯಿಂದ 52 ರೂ. ಆಗಲಿದೆ. ಡಬ್ಬಲ್‌ ಟೋನ್ಡ್ ಹಾಲಿನ ದರ 36 ರೂ. ಇದ್ದು, ನಾಳೆಯಿಂದ 38 ರೂ ಆಗಲಿದೆ. ಜೊತೆಗೆ ಮೊಸರು ಪ್ರತಿ ಕೆಜಿಗೆ ಈಗ 45 ರೂ. ಇದ್ದು ನಾಳೆಯಿಂದ 47 ರೂ. ಆಗಲಿದೆ. ಇದನ್ನೂ ಓದಿ: ವಿರೋಧಪಕ್ಷ ಮತಕ್ಕೋಸ್ಕರ ಭಯೋತ್ಪಾದನೆಗೆ ಸಪೋರ್ಟ್ ಮಾಡ್ತಿದೆ: ಪ್ರಮೋದ್ ಮುತಾಲಿಕ್

ಸೋಮವಾರ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬೆಲೆ ಏರಿಕೆ ವಿಚಾರ ಚರ್ಚೆಗೆ ಬಂದಿತ್ತು. ಮೊನ್ನೆ ನಂದಿನಿ ಹಾಲಿನ ಬೆಲೆ ಹೆಚ್ಚಳವನ್ನು ತಡೆದಿದ್ದ ಮುಖ್ಯಮಂತ್ರಿ ಬೊಮ್ಮಾಯಿ, ಗ್ರಾಹಕರಿಗೆ ಹೊರೆ ಆಗದ ರೀತಿ, ರೈತರಿಗೂ ತೊಂದರೆ ಆಗದ ರೀತಿಯಲ್ಲಿ ಇನ್ನೆರಡು ದಿನದಲ್ಲಿ ಒಂದು ನಿರ್ಧಾರ ತೆಗೆದುಕೊಳ್ಳುವಂತೆ ಕೆಎಂಎಫ್‍ಗೆ ಸೂಚನೆ ನೀಡಿದ್ದರು. ಹಿಂದೆ ನಿರ್ಧರಿಸಿದ್ದ ದರ ಹೆಚ್ಚಳ ಬೇಡ. ಕಡಿಮೆ ಮಾಡಿ ಎಂದು ಕೆಎಂಎಫ್‍ಗೆ ನಿರ್ದೇಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಬೆಲೆ ಏರಿಕೆ ಆಗಿದೆ. ಇದನ್ನೂ ಓದಿ: ನಂದಿನಿ ಹಾಲಿನ ದರ ಏರಿಕೆ ಬಹುತೇಕ ಖಚಿತ – ಸಿಎಂ ಸಭೆಯಲ್ಲಿ ಏನಾಯ್ತು?

Live Tv

Leave a Reply

Your email address will not be published. Required fields are marked *

Back to top button