ಕೊಪ್ಪಳ: ಲೋಕಾಯುಕ್ತ ದಾಳಿ ವೇಳೆ 10 ಕೋಟಿ ರೂ. ಭ್ರಷ್ಟಾಚಾರ ಬಯಲಿಗೆ ಬಂದ ಹಿನ್ನೆಲೆ ಕೊಪ್ಪಳ (Koppal) ನಗರಸಭೆಯ ಜೆಇ (Junior Engineer) ಸೋಮಲಿಂಗಪ್ಪ ಅವರನ್ನು ಅಮಾನತು ಮಾಡಲಾಗಿದೆ.
2023-24 ಹಾಗೂ 24-25ನೇ ಸಾಲಿನಲ್ಲಿ ಕೆಲ ಕಾಮಗಾರಿಗಳಲ್ಲಿ ಸುಳ್ಳು ಬಿಲ್ ಹಾಕಿದ್ದು, ಒಟ್ಟು 366 ಕಾಮಗಾರಿಗಳಲ್ಲಿ 10 ಕೋಟಿ ರೂ. ಭ್ರಷ್ಟಾಚಾರ ಮಾಡಿದ್ದಾರೆ. ಈ ಹಿಂದೆ ಲೋಕಾಯುಕ್ತ ದಾಳಿ ನಡೆಸಿದಾಗ ವಿಚಾರ ಬಯಲಿಗೆ ಬಂದಿದೆ. ಇದನ್ನೂ ಓದಿ:ಒಂದು ಸಿಲಿಂಡರ್ ಕೊಟ್ರೆ ತಿಂಗಳ ಪೂರ್ತಿ ಬಿರಿಯಾನಿ ಫ್ರೀ
ಸದ್ಯ ಪೌರಾಡಳಿತ ಇಲಾಖೆ ನಿರ್ದೇಶಕರು ಕೊಪ್ಪಳ ನಗರಸಭೆಯ ಜೆಇ ಸೋಮಲಿಂಗಪ್ಪ ಅವರನ್ನು ಅಮಾನತು ಮಾಡಿ, ಆದೇಶ ಹೊರಡಿಸಿದ್ದಾರೆ.

