– ಕರ್ಫ್ಯೂ ಉಲ್ಲಂಘಿಸಿದ್ದಕ್ಕೆ ಬಿತ್ತು ಕೇಸ್
– ಅಂಗಡಿ ತೆರೆದಿದ್ದಕ್ಕೆ ಮಾಲೀಕರ ಮೇಲೆ ಕ್ರಮ
ನವದೆಹಲಿ: ಲಾಕ್‍ಡೌನ್ ಆದೇಶವಿದ್ದರೂ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ದೆಹಲಿ ಸರ್ಕಾರ ಕಠಿಣ ಕ್ರಮವನ್ನು ಕೈಗೊಂಡಿದೆ.
ಭಾನುವಾರ ಪ್ರಧಾನಿ ಮೋದಿ ಜನತಾ ಕರ್ಫ್ಯೂ ಗೆ ಕರೆ ನೀಡಿದ್ದರು. ಈ ಕರ್ಫ್ಯೂ ಉಲ್ಲಂಘಿಸಿದಕ್ಕೆ ಸುಮಾರು 100 ಪ್ರಕರಣಗಳನ್ನು ದೆಹಲಿ ಪೊಲೀಸರು ದಾಖಲಿಸಿದ್ದಾರೆ. ದೆಹಲಿಯ ಕೆಲ ಅಂಗಡಿ ಮಾಲೀಕರು ಅಂಗಡಿಗಳನ್ನು ತೆರೆದಿದ್ದರು. ಹೀಗಾಗಿ ಅವರ ಮೇಲೂ ಕೇಸ್ ಬಿದ್ದಿದೆ.
Advertisement
Delhi: Barriers placed near Delhi-Kapashera border to check movement of traffic amid complete lockdown in the city in wake of #Coronavirus. pic.twitter.com/eV6sqYybXq
— ANI (@ANI) March 24, 2020
Advertisement
ಒಟ್ಟು 490 ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, 340 ಕಾರುಗಳನ್ನು ಜಪ್ತಿ ಮಾಡಲಾಗಿದೆ. ಭಾನುವಾರ ದೆಹಲಿ ಪೊಲೀಸರು ಬಿಸಿ ಮುಟ್ಟಿಸಿದ ಪರಿಣಾಮ ದೇಶದ ಉಳಿದ ಕಡೆಗೆ ಹೋಲಿಸಿದ್ದಲ್ಲಿ ದೆಹಲಿಯಲ್ಲಿ ಸಂಚಾರ ಕಡಿಮೆಯಿತ್ತು.
Advertisement
ಉತ್ತರ ಪ್ರದೇಶದ ನೋಯ್ಡಾದಲ್ಲಿ ಸೋಮವಾರ ಕರ್ಫ್ಯೂ ಉಲ್ಲಂಘಿಸಿದ್ದಕ್ಕೆ 96 ಎಫ್‍ಐಆರ್ ದಾಖಲಾಗಿದೆ.
Advertisement
96 FIRs (first information reports) were registered and 1995 vehicles were challaned in Noida for violating the lockdown and section 144 in the district, yesterday: Noida Police #COVID19 pic.twitter.com/SIbIpLTGv9
— ANI UP/Uttarakhand (@ANINewsUP) March 24, 2020