– ಮುಂಬೈ ಲೋಕಲ್ ರೈಲು ಸ್ಥಗಿತಕ್ಕೆ ಚಿಂತನೆ
– ಭಾರತ 129 ಮಂದಿಗೆ ಕೊರೊನಾ
ಮುಂಬೈ: ಕೊರೊನಾ ವೈರಸ್‍ನಿಂದಾಗಿ ಇಡೀ ವಿಶ್ವವೇ ತಲ್ಲಣಿಸಿದ್ದು, ಭಾರತದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಜನಸಂದಣಿಯ ಎಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಇದೀಗ ಮಹಾರಾಷ್ಟ್ರದಲ್ಲಿ ಸರ್ಕಾರಿ ಕಚೇರಿಗಳನ್ನೂ ಬಂದ್ ಮಾಡಲಾಗಿದೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 137ಕ್ಕೆ ತಲುಪಿದ್ದು, ಇದರಲ್ಲಿ 40 ಪ್ರಕರಣಗಳು ಮಹಾರಾಷ್ಟ್ರದಲ್ಲೇ ಪತ್ತೆಯಾಗಿವೆ. ಈ ಮೂಲಕ ದೇಶದಲ್ಲೇ ಅತಿ ಹೆಚ್ಚು ಕೊರೊನಾ ಪ್ರಕರಣ ಹೊಂದಿದ ರಾಜ್ಯವಾರುವ ಮಹಾರಾಷ್ಟ್ರ ಸರ್ಕಾರ ಕಟ್ಟೆಚ್ಚರ ವಹಿಸಿದ್ದು, ಸರ್ಕಾರಿ ಕಚೇರಿಗಳಿಗೆ ಏಳು ದಿನಗಳ ಕಾಲ ರಜೆ ಘೋಷಿಸಿ ಆದೇಶಿಸಿದೆ.
Advertisement
Advertisement
ಕೇವಲ ತುರ್ತು ಸೇವೆಗಳನ್ನು ಹೊರತುಪಡಿಸಿ, ಉಳಿದ ಎಲ್ಲ ಸರ್ಕಾರಿ ಕಚೇರಿಗಳನ್ನು ಬಂದ್ ಮಾಡುವಂತೆ ಆದೇಶಿಸಲಾಗಿದೆ. ಅಲ್ಲದೆ ಮುಂಬೈ ಲೋಕಲ್ ಟ್ರೇನ್ ಸಹ ಬಂದ್ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್‍ನಿಂದಾಗಿ ಮೂರನೇ ಸಾವು ಸಂಭವಿಸಿದ ಬೆನ್ನಲ್ಲೇ ಸರ್ಕಾರ ಈ ಕ್ರಮ ಕೈಗೊಂಡಿದೆ. ಅಲ್ಲದೆ ಮೂರು ವರ್ಷದ ಬಾಲಕಿಗೂ ಕೊರೊನಾ ಸೋಂಕು ತಗುಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
Maharashtra: Portals of Shirdi Sai Baba Temple have been closed till further orders, in the wake of #CoronaVirus outbreak. pic.twitter.com/XMdIlioupF
— ANI (@ANI) March 17, 2020
Advertisement
ಈ ಎಲ್ಲ ಕಾರಣಗಳಿಂದಾಗಿ ಮಹಾರಾಷ್ಟ್ರ ಸರ್ಕಾರ ಕಟ್ಟೆಚ್ಚರ ವಹಿಸಿದೆ. ಹೀಗಾಗಿ ಸರ್ಕಾರಿ ಕಚೇರಿಗಳಿಗೆ 7 ದಿನಗಳ ಕಾಲ ರಜೆ ಘೋಷಿಸಿದೆ. ಎಲ್ಲ ರೀತಿಯ ಕ್ರಮ ಕೈಗೊಂಡರೂ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು 40 ಮಂದಿಗೆ ಸೋಂಕು ತಗುಲಿದೆ. ಮಹಾರಾಷ್ಟ್ರದಲ್ಲಿ ಮೃತಪಟ್ಟ ವೃದ್ಧ ಕೊರೊನಾ ಜೊತೆಗೆ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಸದ್ಯ ಕರ್ನಾಟಕ, ದೆಹಲಿ ನಂತರ ಮಹಾರಾಷ್ಟ್ರದಲ್ಲಿ ಕೊರೊನಾಗೆ ವೃದ್ಧರೊಬ್ಬರು ಬಲಿಯಾಗಿದ್ದಾರೆ.
ಭಾರತಕ್ಕೆ ಕಾಲಿಟ್ಟಿರುವ ಕೊರೊನಾ ವೈರಸ್‍ಗೆ ಈವರೆಗೆ 137 ಮಂದಿ ತುತ್ತಾಗಿದ್ದು, 13 ಮಂದಿ ಗುಣಮುಖರಾಗಿದ್ದಾರೆ. ಕರ್ನಾಟದಲ್ಲಿ ಒಟ್ಟು 10 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
Director,Board of Examinations&Evaluation,University of Mumbai: Students,Research Supervisors,External Referees&other concerned stake holders are requested to note that the open defence vivas scheduled or to be scheduled till 31 March are postponed, till further notice. #COVID19 pic.twitter.com/ghlzpaZKxw
— ANI (@ANI) March 17, 2020
ವಿಶ್ವದಾದ್ಯಂತ ಹರಡುತ್ತಿರುವ ಮಹಾಮಾರಿ ಕೊರೊನಾ ವೈರಸ್‍ಗೆ 162 ರಾಷ್ಟ್ರ ಹಾಗೂ ಪ್ರಾಂತ್ಯಗಳು ತುತ್ತಾಗಿವೆ. ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ಈಗ ವಿಶ್ವದೆಲ್ಲೆಡೆ ಹರುಡುತ್ತಿದ್ದು ತನ್ನ ಕರಾಳತೆಯನ್ನು ಪ್ರದರ್ಶಿಸುತ್ತಿದೆ. ಈವರೆಗೆ ಸೋಂಕಿಗೆ 7,171 ಮಂದಿ ಬಲಿಯಾಗಿದ್ದಾರೆ.