ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಭೇಟಿ ಮಾಡಲು ಬರುವವರಿಗೆ ಮತ್ತು ಸಿಎಂ ನಿವಾಸದಲ್ಲಿ ಕೆಲಸ ಮಾಡವ ಸಿಬ್ಬಂದಿಗೆ ಕೆಲ ಮಾರ್ಗ ಸೂಚಿಗಳನ್ನ ಹೊರಡಿಸಲಾಗಿದೆ. ಸಿಎಂ ಭೇಟಿ ಮಾಡಬೇಕಾದರೆ ಅಥವಾ ಅವರ ಮನೆ ಪ್ರವೇಶಿಸಬೇಕಾದರೆ ಕೆಲವೊಂದು ನಿಯಮಗಳನ್ನ ಪಾಲಿಸಲೇ ಬೇಕಾಗಿದೆ.
Advertisement
ನಿಯಮಗಳೇನು?:
* ಯಾವುದೇ ವ್ಯಕ್ತಿ, ರಾಜಕೀಯ ವ್ಯಕ್ತಿ, ಪಕ್ಷದ ಕಾರ್ಯಕರ್ತರಿಗೆ ಶೀತ, ಜ್ವರ ಕೆಮ್ಮು ಮತ್ತು ಉಸಿರಾಟದ ತೊಂದರೆ ಇದ್ದರೆ ಅವರಿಗೆ ಸಿಎಂ ಭೇಟಿ ಮಾಡಲು ಅವಕಾಶ ಇಲ್ಲ. ಈ ಮೇಲಿನ ಯಾವುದೇ ಲಕ್ಷಣಗಳು ಸಿಎಂ ಮನೆಯಲ್ಲಿ ಕಾರ್ಯ ನಿರ್ವಹಿಸುತ್ತಿವ ಸಿಬ್ಬಂದಿಗೆ ಕಂಡುಬಂದಲ್ಲಿ ಅವರನ್ನು ಕೂಡಲೇ ರಜೆ ಮೇಲೆ ಕಳುಹಿಸಿ, ಆ ಜಾಗಕ್ಕೆ ಬೇರೆಯವರನ್ನು ನಿಯೋಜಿಸಲಾಗುತ್ತದೆ.
Advertisement
* ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಪ್ರವೇಶ ದ್ವಾರ ಮತ್ತು ಜನ ಸಂದಣೆ ಇರುವ ಕಡೆ ಇರಿಸುವುದು. ಮನೆ ಒಳಗೆ ಹೋಗುವ ಪ್ರತಿಯೊಬ್ಬರೂ ತಮ್ಮ ಕೈಗಳನ್ನು ಹ್ಯಾಂಡ್ ಸ್ಯಾನಿಟೈಸರ್ ನಿಂದ ಸ್ವಚ್ಛ ಮಾಡಿ ಬಳಿಕ ಒಳಗೆ ಹೋಗಬೇಕು.
Advertisement
Advertisement
* ಮನೆ ಒಳಗೆ ಹೆಚ್ಚು ಜನ ಸಂದಣಿ ಆಗದಂತೆ ನೋಡಿಕೊಳ್ಳುವುದು. ಭೇಟಿ ಅನಿವಾರ್ಯ ಆದಲ್ಲಿ ಒಬ್ಬಬ್ಬರಿಗೆ ಮಾತ್ರ ಅವಕಾಶ ಮಾಡಿ ಕೊಡುವುದು.
* ಮನೆ ಫ್ಲೋರ್ ಗಳನ್ನು ಆಗಾಗ ಡಿಟರ್ಜೆಂಟ್ ನಿಂದ ಸ್ವಚ್ಛ ಗೊಳಿಸುವುದು. ಮನೆ ಪೀಠೋಪಕರಣಗಳನ್ನು ಕೂಡ ಸೋಡಿಯಂ ಹೈಪೊಕ್ಲರೈಡ್ ನಿಂದ ಆಗಾಗ ಸ್ವಚ್ಛಗೊಳಿಸುವುದು.
* ಯಾವುದೇ ವಿದೇಶದ ಡೆಲಿಗೆಟ್ಸ್ ಗಳು ಬಂದರೂ ಅವರು ಮಾಸ್ಕ್ ಧರಿಸಿದ ನಂತರವೇ ಸಿಎಂ ಭೇಟಿಗೆ ಅವಕಾಶ ನೀಡಲಾಗುವುದು. ಹೀಗೆ ಕೊರೊನಾ ಎಫೆಕ್ಟ್ ನಿಂದಾಗಿ ಸಿಎಂ ಭೇಟಿಗೆ ಮಾರ್ಗಸೂಚಿಗಳನ್ನ ನಿಗದಿಪಡಿಸಲಾಗಿದೆ.