ಮೈಸೂರು: ಕೊರೊನಾ ವೈರಸ್ ಎಫೆಕ್ಟ್ ಅರಮನೆ ನಗರಿಯಲ್ಲಿ ತರಕಾರಿ ಮೇಲೆ ಬಿದ್ದಿದೆ. ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟವಾಗದೆ ಎಲ್ಲಾ ತರಕಾರಿ ಬೆಲೆ ಸಂಪೂರ್ಣವಾಗಿ ಕುಸಿದಿದೆ.
ಕೇರಳದಲ್ಲಿ ಕೊರೊನಾದಿಂದ ಮೈಸೂರಿನ ತರಕಾರಿ ವ್ಯಾಪಾರದ ಮೇಲೆ ಭಾರಿ ಹೊಡೆತ ಬಿದ್ದಿದೆ. ಮೈಸೂರು ಎಪಿಎಂಸಿಯಿಂದ ನೇರವಾಗಿ ಕೇರಳಕ್ಕೆ ತರಕಾರಿ ಮಾರಾಟವಾಗುತ್ತಿತ್ತು. ಶೇಕಡಾ ಶೇ. 80 ತರಕಾರಿಗಳನ್ನ ಕೇರಳದ ವ್ಯಾಪಾರಿಗಳೇ ತೆಗೆದುಕೊಳ್ಳುತ್ತಿದ್ದರು. ಇದನ್ನೂ ಓದಿ: ನಾನ್ ವೆಜ್ ಪ್ರಿಯರಿಗೆ ಕೊರೊನಾ ಶಾಕ್- ಚಿಕನ್ ರೇಟ್ ಡೌನ್, ಮಟನ್, ಫಿಶ್ ರೇಟ್ ಹೈಕ್?
Advertisement
Advertisement
ಕಳೆದೊಂದು ತಿಂಗಳಿಂದ ಕೇರಳದಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿದೆ. ಇದರಿಂದ ಮೈಸೂರಿನತ್ತ ತರಕಾರಿ ತೆಗೆದುಕೊಳ್ಳಲು ಕೇರಳಿಗರು ಬರುತ್ತಿಲ್ಲ. ಕೇರಳಿಗರು ಇಲ್ಲದೆ ತರಕಾರಿ ಬೆಲೆಗಳು ಕುಸಿದು ವ್ಯಾಪಾರಸ್ಥರು ಮತ್ತು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
Advertisement
ಮೈಸೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಇಂದಿನ ತರಕಾರಿ ಬೆಲೆ ಹೀಗಿದೆ:
ಒಂದು ಸೌತೆಕಾಯಿಗೆ 6 ರೂ., ಸುನಾಮಿ ಕಾಯಿಗೆ 4 ರೂ., ಕೆ.ಜಿ ಗುಂಡು ಬದನೆ ಕೇವಲ 5 ರೂ. ಆಗಿದೆ. ಇನ್ನೂ ಕುಂಬಳಕಾಯಿ 3 ರೂ. ಕೆ.ಜಿ. ಹೀರೆಕಾಯಿ 8 ರೂ., ಕೆ.ಜಿ. ಬಿನಿಸ್ 10 ರೂ. ಆಗಿದೆ. ಒಂದು ಕೆ.ಜಿ ಮೆಣಸಿನಕಾಯಿ 10 ರೂ. ತೊಂಡೆಕಾಯಿ 7 ರೂ., ಮತ್ತು ಕೆ.ಜಿ. ಟಮೋಟ 5 ರೂ. ಆಗಿದೆ.