DistrictsKarnatakaLatestMain PostUttara Kannada

ಕೋವಿಡ್ ಬಂದರೂ ಕಾಲೇಜಿಗೆ ಹಾಜರಾದ ಪ್ರಾಧ್ಯಾಪಕ – 13 ಮಂದಿ ವಿದ್ಯಾರ್ಥಿಗಳಿಗೆ ಸೋಂಕು

ಕಾರವಾರ: ಕೋವಿಡ್ ಪಾಸಿಟಿವ್ ಇದ್ದರೂ ಅದನ್ನು ಮುಚ್ಚಿಟ್ಟು ಪದವಿ ಕಾಲೇಜಿನಲ್ಲಿ ಪಾಠ ಮಾಡಿದ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕನಿಂದಾಗಿ 13 ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಗೋಖುಲೆ ಸೆಂಟಿನರಿ ಪದವಿ ಕಾಲೇಜಿನಲ್ಲಿ ನಡೆದಿದೆ.

ಕೆಲವು ದಿನದ ಹಿಂದೆ ಖಾಸಗಿ ಕಾರ್ಯಕ್ರಮಕ್ಕಾಗಿ ಮಹಾರಾಷ್ಟ್ರಕ್ಕೆ ತೆರಳಿದ್ದ ಪ್ರಾಧ್ಯಾಪಕನಿಗೆ ಕೋವಿಡ್ ಪಾಸಿಟಿವ್ ವರದಿಯಾಗಿತ್ತು. ಪಾಸಿಟಿವ್ ಬಂದಿದ್ದರಿಂದ ಹೋಮ್ ಐಸೋಲೇಷನ್‍ಗೆ ಸೂಚಿಸಲಾಗಿತ್ತು. ಆದರೆ ರಜೆ ಹಾಕಿದರೆ ಗಳಿಕೆ ರಜೆ ವ್ಯರ್ಥವಾಗುತ್ತದೆ ಎನ್ನುವ ಕಾರಣದಿಂದ ರಜೆ ಹಾಕದೆ ಉಪನ್ಯಾಸಕ ಕಾಲೇಜಿಗೆ ಹಾಜರಾಗಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ. ಇದರಿಂದ 13 ವಿದ್ಯಾರ್ಥಿಗಳಿಗೆ ಪಾಸಿಟಿವ್ ವರದಿಯಾಗಿದೆ.

ಸದ್ಯ ಕಾಲೇಜಿನಲ್ಲಿ ಕೋವಿಡ್ ಸೋಂಕಿತ ಪ್ರಾಧ್ಯಾಪಕ ಹಾಗೂ ವಿದ್ಯಾರ್ಥಿಗಳ ಸಂಪರ್ಕಕ್ಕೆ ಬಂದ 320 ವಿದ್ಯಾರ್ಥಿಗಳನ್ನು ಆರೋಗ್ಯ ಇಲಾಖೆ ಇಂದು ಕೊವಿಡ್ ತಪಾಸಣೆ ನಡೆಸಿದೆ.

ಕಾಲೇಜಿಗೆ ಗೈರಾದ ವಿದ್ಯಾರ್ಥಿಗಳು: ಗೋಖುಲೆ ಸೆಂಟಿನರಿ ಪದವಿ ಕಾಲೇಜಿನಲ್ಲಿ ಹಾಗೂ ಕೆಲವು ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿ ಕೋವಿಡ್ ಪಾಸಿಟಿವ್ ವರದಿ ಬರುತ್ತಿದ್ದಂತೆ ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಇದರಿಂದ ವಿದ್ಯಾರ್ಥಿಗಳು ಕಾಲೇಜುಗಳಿಗೆ ಗೈರಾಗಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಜ.31ರ ವರೆಗೆ ಟಫ್ ರೂಲ್ಸ್ ಜಾರಿ

ವಿದ್ಯಾರ್ಥಿಗಳಲ್ಲಿ ಶೀತ, ಜ್ವರ: ಅಂಕೋಲಾದ ಕಾಲೇಜುಗಳಲ್ಲಿ ಹಲವು ಮಕ್ಕಳಲ್ಲಿ ಶೀತ, ಜ್ವರ ಕಾಣಿಸಿಕೊಂಡಿದೆ. ಆದರೆ ಹಲವು ಮಕ್ಕಳು ಕೋವಿಡ್ ತಪಾಸಣೆಗೆ ಹಿಂಜರಿಯುತ್ತಿದ್ದು, ಮನೆಯಲ್ಲೇ ಚಿಕಿತ್ಸೆ ಪಡೆಯುತಿದ್ದಾರೆ. ಇನ್ನು ಹಲವು ವಿದ್ಯಾರ್ಥಿಗಳು ಕೋವಿಡ್ ಲಕ್ಷಣವಿದ್ದರೂ, ತರಗತಿಗೆ ಹಾಜುರಾಗುತ್ತಿದ್ದಾರೆ. ಇದರಿಂದಾಗಿ ಮತ್ತಷ್ಟು ಸೋಂಕು ಹೆಚ್ಚಾಗುವ ಭೀತಿ ಆವರಿಸಿದೆ. ಇದನ್ನೂ ಓದಿ: ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಯ್ತು ಅಪರೂಪದ ಕಪ್ಪು ವಜ್ರ

Leave a Reply

Your email address will not be published.

Back to top button