ಅಬುಧಾಬಿ: 555-ಕ್ಯಾರೆಟ್‌ನ ಪರೂಪದ ಕಪ್ಪು ವಜ್ರವನ್ನು ಮೊದಲ ಬಾರಿಗೆ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ. ಅಪರೂಪದಲ್ಲಿ ಅಪರೂಪದ ವಜ್ರ ಭೂಮಿಯ ವಸ್ತುವೇ ಅಲ್ಲ ಎಂದು ನಂಬಲಾಗಿದೆ.
ಎನಿಗ್ಮಾ ಹೆಸರಿನ ಅಪರೂಪದ ಕಪ್ಪು ಕಾರ್ಬನಾಡೋ ವಜ್ರವನ್ನು ದುಬೈನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಈ ವಜ್ರವನ್ನು ಫೆಬ್ರವರಿಯಲ್ಲಿ ಹರಾಜಿಗೆ ಇಡಲಿದ್ದು, 5 ಮಿಲಿಯನ್ ಡಾಲರ್‌ಗೆ ಮಾರಾಟವಾಗುವ ಸಾಧ್ಯತೆ ಇದೆ. ಇದರ ಮಾರಾಟಕ್ಕೂ ಮೊದಲು ಸೋಮವಾರ ಮೊದಲ ಬಾರಿಗೆ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ. ಇದನ್ನೂ ಓದಿ: ಹಾಂಕಾಂಗ್‌ನಲ್ಲಿ 2000 ಪ್ರಾಣಿಗಳನ್ನು ಕೊಲ್ಲಲು ಆದೇಶ!
Advertisement
Advertisement
2.6 ಶತಕೋಟಿ ವರ್ಷಗಳ ಹಿಂದೆ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದಾಗ ಈ ವಜ್ರ ರಚನೆಯಾಗಿದೆ ಎಂದು ಆಭರಣ ತಜ್ಞ ಸೋಫಿ ಸ್ಟೀವನ್ಸ್ ಅಭಿಪ್ರಾಯಪಟ್ಟಿದ್ದಾರೆ. 555.55-ಕ್ಯಾರೆಟ್ ಹೊಂದಿರುವ ವಜ್ರವನ್ನು ಕತ್ತರಿಸುವುದು ಅತ್ಯಂತ ಕಷ್ಟಕರ. ಆದರೂ ತಜ್ಞರು ಅದನ್ನು 55 ಮುಖದ ಆಭರಣವಾಗಿ ಪರಿವರ್ತಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಮಿನಿ ಕೃತಕ ಚಂದ್ರ – ಚೀನಾದ ಹೊಸ ಪ್ರಯತ್ನ
Advertisement
ವಿಭಿನ್ನವಾದ ಈ ವಜ್ರ ಅತಿ ದೊಡ್ಡ ಕಟ್ ಡೈಮಂಡ್ ಎಂದು ಗಿನ್ನೆಸ್ ವಿಶ್ವ ದಾಖಲೆಯನ್ನೂ ಹೊಂದಿದೆ. ದುಬೈನಲ್ಲಿ ಪ್ರದರ್ಶನದ ಬಳಿಕ ವಜ್ರವನ್ನು ಲಾಸ್ ಏಂಜಲೀಸ್ ಮತ್ತು ಲಂಡನ್‌ಗೆ ಕೊಂಡೊಯ್ಯಲಾಗುತ್ತದೆ. ಫೆಬ್ರವರಿ 3ರಿಂದ ಏಳು ದಿನಗಳ ಕಾಲ ಹರಾಜು ನಡೆಯಲಿದೆ ಎಂದು ವರದಿಗಳು ತಿಳಿಸಿವೆ.