ಕರ್ನಾಟಕದ ಬೆಂಗಳೂರು ಸೇರಿದಂತೆ ಹಲವು ಕಡೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಮಾಸ್ಕ್, ಅಂತರ ಕಾಪಾಡಿಕೊಳ್ಳುವುದನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಈಗಾಗಲೇ ಸರಕಾರ ಆದೇಶ ಹೊರಡಿಸಿದೆ. ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನಲ್ಲಿ ಆತಂಕ ಮನೆ ಮಾಡಿದೆ. ಇದನ್ನೂ ಓದಿ : ನಟ ಶಾರುಖ್ ಖಾನ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಿದ ಗುಜರಾತ್ ಹೈಕೋರ್ಟ್
Advertisement
ಕೋವಿಡ್ ಕಾರಣದಿಂದಾಗಿ ಎರಡು ವರ್ಷಗಳ ಕಾಲ ಚಿತ್ರೋದ್ಯಮ ಪಡಬಾರದ ಕಷ್ಟಪಟ್ಟಿದೆ. ಈಗಾಗಲೇ ಬಿಡುಗಡೆಗಾಗಿ ಐನೂರಕ್ಕೂ ಹೆಚ್ಚು ಚಿತ್ರಗಳು ರೆಡಿ ಇವೆ. ಮತ್ತಷ್ಟು ಚಿತ್ರಗಳು ತಯಾರಾಗುತ್ತಿವೆ. ಈ ಸಂದರ್ಭದಲ್ಲಿ ಪ್ರಕರಣಗಳು ಹೆಚ್ಚಾಗಿ ಮತ್ತೆ ಲಾಕ್ ಡೌನ್, ಸೆಮಿ ಲಾಕ್ ಡೌನ್ ರೀತಿಯ ರೂಲ್ಸ್ ಜಾರಿಯಾದರೆ ಏನು ಮಾಡುವುದು ಅನ್ನುವ ಆತಂಕ ಚಿತ್ರ ತಯಾರಕರದ್ದು.
Advertisement
Advertisement
ಸುದೀಪ್ ನಟನೆಯ ವಿಕ್ರಾಂತ್ ರೋಣ, ಶರಣ್ ನಟನೆಯ ಅವತಾರ ಪುರುಷ, ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ 777, ಜಗ್ಗೇಶ್ ನಟನೆಯ ತೋತಾಪುರಿ, ರಿಷಭ್ ನಟನೆಯ ಕಾಂತಾರ, ಸತೀಶ್ ನೀನಾಸಂ ನಟನೆಯ ಪೆಟ್ರೊಮ್ಯಾಕ್ಸ್ ಹೀಗೆ ಸಾಕಷ್ಟು ಭಾರಿ ಬಜೆಟ್ ಚಿತ್ರಗಳು ರಿಲೀಸ್ಗೆ ಸಿದ್ಧವಾಗಿದೆ. ಈ ಹೊತ್ತಿನಲ್ಲಿ ಚಿತ್ರಮಂದಿರಗಳಿಗೆ ಟಫ್ ರೂಲ್ಸ್ ಜಾರಿಯಾದರೆ ಏನು ಮಾಡುವುದು ಎನ್ನುವ ಆತಂಕ ನಿರ್ಮಾಪಕರದ್ದು. ಇದನ್ನೂ ಓದಿ : ಹಿಂದಿ ರಾಷ್ಟ್ರ ಭಾಷೆ : ಕರ್ನಾಟಕದಲ್ಲಿ ಅಜಯ್ ದೇವಗನ್ ಸಿನಿಮಾ ರಿಲೀಸ್ ಅಡ್ಡಿ : ಕರವೇಯಿಂದ ಪ್ರತಿಭಟನೆ
Advertisement
ಶೇ.50 ರಷ್ಟು ಆಸನ ಮಿತಿ ಕೊಟ್ಟಾಗ ನಿರ್ಮಾಪಕರು ಸಾಕಷ್ಟು ಹಾನಿಯನ್ನು ಕಂಡಿದ್ದಾರೆ. ಅದನ್ನು ತೆರೆವುಗೊಳಿಸಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಕೆಜಿಎಫ್ 2 ಸಿನಿಮಾದಿಂದಾಗಿ ಕನ್ನಡ ಚಿತ್ರೋದ್ಯಮದ ಮಾರುಕಟ್ಟೆ ಹಿಗ್ಗಿದೆ. ಈ ಹೊತ್ತಿನಲ್ಲಿ ಕೋವಿಡ್ ಚಿತ್ರೋದ್ಯಮಕ್ಕೆ ಕಾಡದಿರಲಿ ಎನ್ನುವುದು ನಿರ್ಮಾಪಕರ ಪ್ರಾರ್ಥನೆಯಾಗಿದೆ.