CinemaDistrictsKarnatakaLatestMain PostSandalwood

ನಟ ಶಾರುಖ್ ಖಾನ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಿದ ಗುಜರಾತ್ ಹೈಕೋರ್ಟ್

ಯೀಸ್ ಸಿನಿಮಾದ ರಿಲೀಸ್ ವೇಳೆ ಸಂಭವಿಸಿದ ಘಟನೆಗೆ ಸಂಬಂಧ ಪಟ್ಟಂತೆ ಬಾಲಿವುಡ ಖ್ಯಾತ ನಟ ಶಾರುಖ್ ಖಾನ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಗುಜರಾತ್ ಹೈಕೋರ್ಟ್ ರದ್ದುಗೊಳಿಸಿದೆ. 2017ರಲ್ಲಿ ತೆರೆಕಂಡ ರಯೀಸ್ ಸಿನಿಮಾದ ಪ್ರಚಾರದ ವೇಳೆ ಕಾಲ್ತುಳಿತಕ್ಕೆ ಸಿಕ್ಕು ಸಾವನ್ನಪ್ಪಿದ್ದ ಫರ್ಹಾದ್ ಖಾನ್ ಪಠಾಣ್ ಎನ್ನುವವರು ಕುಟುಂಬಸ್ಥರು ಶಾರುಖ್ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದರು.  ಇದನ್ನೂ ಓದಿ : ಹಿಂದಿ ರಾಷ್ಟ್ರ ಭಾಷೆ : ಕರ್ನಾಟಕದಲ್ಲಿ ಅಜಯ್ ದೇವಗನ್ ಸಿನಿಮಾ ರಿಲೀಸ್ ಅಡ್ಡಿ : ಕರವೇಯಿಂದ ಪ್ರತಿಭಟನೆ

2017ರಲ್ಲಿ ತೆರೆಕಂಡ ರಯೀಸ್ ಸಿನಿಮಾದ ವೇಳೆಯ ಪ್ರಚಾರಕ್ಕೆಂದು ಮುಂಬೈನಿಂದ ದೆಹಲಿಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು ಶಾರುಖ್ ಖಾನ್. ಈ ವೇಳೆಯ ಶಾರುಖ್ ಅವರನ್ನು ನೋಡಲು ವಡೋದರ ರೈಲ್ವೆ ಸ್ಟೇಶನ್ ನಲ್ಲಿ ಅಸಂಖ್ಯಾತ ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ಅಭಿಮಾನಿಗಳನ್ನು ಚದುರಿಸಲು ಪೊಲೀಸ್ ರು ಲಾಠಿ ಚಾರ್ಚ್ ಮಾಡಿದ್ದರು. ಆಗ ಫರ್ಹಾದ್ ಖಾನ್ ಪಠಾಣ್ ಎಂಬುವವರು ಹೃದಯಾಘಾತದಿಂದ ನಿಧನರಾಗಿದ್ದರು. ಹಲವರಿಗೆ ಗಾಯಗಳಾಗಿತ್ತು. ಇದನ್ನೂ ಓದಿ :  ವಸಿಷ್ಠ ಸಿಂಹನಿಗೆ ‘Love..ಲಿ’ ಅಂದ ಮಲೆನಾಡ ಬೆಡಗಿ

ಶಾರುಖ್ ಖಾನ್ ಅವರ ಕಾರಣದಿಂದಾಗಿಯೇ ಪಠಾಣ್ ನಿಧನರಾಗಿದ್ದಾರೆ ಎಂದು ಶಾರುಖ್ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಾಗಿತ್ತು. ಶಾರುಖ್ ಪರ ವಕೀಲರು ಇದು ಹೃದಯಾಘಾತದಿಂದ ಆದ ಸಾವು. ಶಾರುಖ್ ಗೂ ಸಾವಿಗೂ ಸಂಬಂಧವಿಲ್ಲ. ಹಾಗಾಗಿ ಪ್ರಕರಣ ರದ್ದು ಮಾಡುವಂತೆ ಗುಜರಾತ್ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ನಿಖಿಲ್ ಎಸ್ ಕರೀಲ್ ಅವರ ಪೀಠವು ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿದೆ. ಇದನ್ನೂ ಓದಿ: ಇಂಟರ್‌ನ್ಯಾಷನಲ್ ಶೆಫ್ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ?

ಆಗಸ್ಟ್ ಕ್ರಾಂತಿ ರಾಜಧಾನಿ ಎಕ್ಸ್ ಪ್ರೆಸ್ ನಲ್ಲಿ ಶಾರುಖ್ ಖಾನ್ ಪ್ರಯಾಣಿಸುವಾಗ ಅಗತ್ಯ ಎಚ್ಚರಿಕೆಯನ್ನು ತಗೆದುಕೊಳ್ಳಲಾಗಿತ್ತು. ವಡೋದರನಲ್ಲಿ ಸಾಕಷ್ಟು ಅಭಿಮಾನಿಗಳು ಜಮಾಯಿಸಿದ್ದರು. ಅವರ ನಿಯಂತ್ರಣಕ್ಕಾಗಿ ಪೊಲೀಸ್ ಹರಸಾಹಸ ಪಡಬೇಕಾಯಿತು. ಈ ಸಮಯದಲ್ಲಿ ಪಠಾಣ್ ಹೃದಯಾಘಾತದಿಂದ ನಿಧನರಾಗಿದ್ದರು.

Leave a Reply

Your email address will not be published.

Back to top button