ಮಂಡ್ಯ: ಕೋವಿಡ್-19 ವ್ಯಾಕ್ಸಿನ್ ಹಾಕಿಸಿಕೊಂಡಿದ್ದೇವೆ ನಮಗೆ ಕೊರೊನಾ ಬರುವುದಿಲ್ಲ ಎಂದು ಕೊರೊನಾ ನಿಯಮಗಳನ್ನು ಗಾಳಿಗೆ ತೂರಬೇಡಿ, ಮೂರನೇ ಅಲೆ ಯಾವ ಸಮಯದಲ್ಲಿ ಆದರು ಬರಬಹುದು ಎಂದು ಮಂಡ್ಯ ಡಿಎಚ್‍ಓ ಧನಂಜಯ್ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಜನರು ಕೊರೊನಾ ಮೊದಲನೇ, ಎರಡನೇ ಅಲೆ ಆಯ್ತು ಮೂರನೇ ಅಲೆ ಬರುವುದಿಲ್ಲ ಬಂದರು ನಾವು ವ್ಯಾಕ್ಸಿನ್ ಹಾಕಿಸಿಕೊಂಡಿದ್ದೇವೆ ನಮಗೆ ಬರುವುದಿಲ್ಲ ಎಂದು ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಬೇಜವಾಬ್ದಾರಿಯಿಂದ ವರ್ತನೆ ಮಾಡುತ್ತಿದ್ದಾರೆ. ವ್ಯಾಕ್ಸಿನ್ ಹಾಕಿಸಿಕೊಂಡರೆ ಕೊರೊನಾ ಬರುವುದಿಲ್ಲ ಎಂದು ತಿಳಿಯುವುದು ತಪ್ಪು ತಿಳುವಳಿಕೆ, ಲಸಿಕೆ ಪಡೆದರು ಸಹ ಕೊರೊನಾ ಬರುತ್ತದೆ. ವ್ಯಾಕ್ಸಿನ್ ನೀಡಿರುವುದು ಕೊರೊನಾದ ತೀವ್ರತೆ ಕಡಿಮೆಯಾಗಲಿ ಎಂದು, ಕೊರೊನಾ ಬರುವುದಿಲ್ಲ ಎಂದಲ್ಲ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಬಡ ರೈತನ ಸಂಕಷ್ಟಕ್ಕೆ ಮಿಡಿದ ಜ್ಯೋತಿಷಿ ಹೃದಯ- ಎತ್ತುಗಳ ಕೊಡುಗೆ
Advertisement
Advertisement
ಈಗಾಗಲೇ ವಿದೇಶಗಳಲ್ಲಿ ಕೊರೊನಾದ ಮೂರನೇ ಅಲೆಯ ತೀವ್ರತೆ ಹೆಚ್ಚಾಗಿದೆ, ನಮ್ಮಲ್ಲೂ ಯಾವಾಗ ಬೇಕಾದರೂ ಮೂರನೇ ಅಲೆ ಕಾಣಿಕೊಳ್ಳಬಹುದು. ಹೀಗಾಗಿ ದೇಶದಲ್ಲಿ ವ್ಯಾಕ್ಸಿನ್ ನೀಡುವುದನ್ನು ಹೆಚ್ಚಿಸಲಾಗಿದೆ. ಜನರು ಸಹ ಲಸಿಕೆ ತೆಗೆದುಕೊಂಡ ನಂತರವೂ ಕೊರೊನಾ ನಿಯಮಗಳನ್ನು ಪಾಲಿಸಬೇಕು. ಅನಗತ್ಯವಾಗಿ ಗುಂಪು ಸೇರಿಸಿಕೊಂಡು ಕಾರ್ಯಕ್ರಮಗಳನ್ನು ಮಾಡುವುದು ಬೇಡಾ, ಒಂದು ವೇಳೆ ಹಾಗೆ ಮಾಡಿದಲ್ಲಿ ಸಾವು-ನೋವುಗಳ ಪ್ರಮಾಣ ಹೆಚ್ಚುತ್ತವೆ. ವಿಶ್ವ ಸಂಸ್ಥೆ ಕೊರೊನಾ ಸಾಂಕ್ರಾಮಿಕ ರೋಗ ಅಲ್ಲ ಎಂದು ಹೇಳುವವರೆಗೂ ಎಚ್ಚರಿಕೆಯಿಂದ ಇರಬೇಕು ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಬೆಲೆ ಏರಿಕೆ ಅನಿವಾರ್ಯ, ಖಜಾನೆ ತುಂಬಲು ಬೆಲೆ ಹೆಚ್ಚಳ ಮಾಡಲೇಬೇಕಾಗುತ್ತೆ: ಎಚ್‍ಡಿಕೆ
Advertisement