ದರ್ಗಾ ಕಟ್ಟಡಕ್ಕೆ ಹಾನಿಮಾಡಿದ ಆರೋಪಿಗಳು ಪೊಲೀಸರ ಬಲೆಗೆ!

Public TV
1 Min Read
karawara police theft darga

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಕಣಸಗಿರಿ ಬಂದರವಾಡದಲ್ಲಿರುವ ದರ್ಗಾವನ್ನು ಹಾನಿ ಮಾಡಿದಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಚಿತ್ತಾಕುಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

karawara police theft darga

ಬಂಧಿತರು ಕಾರವಾರ ನಗರದ ಗಿಂಡಿವಾಡ ಕಣಸಗಿರಿ ನಿವಾಸಿ ಮಹೇಂದ್ರ ರಾಣಿ(39), ಸಾವಂತವಾಡಾ, ಮಾಜಾಳಿಯ ವಿನಾಯಕ ಸಾವಂತ(40), ಖುರ್ಸಾವಾಡ ಮುರಳೀಧರ್ ಬಂಧಿತ ಆರೋಪಿಗಳು. ಪ್ರಸ್ತುತ ಪೊಲೀಸರು ಬಂಧಿತರಿಂದ ಕೃತ್ಯಕ್ಕೆ ಬಳಸಿದ 2 ಸುತ್ತಿಗೆ, ಒಂದು ಕಾರ್ ಹಾಗೂ ಒಂದು ಮೋಟಾರ್ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ನ್ಯಾಯಾಲಯ ಆದೇಶಕ್ಕೆ ಧಾರ್ಮಿಕ ಮುಖಂಡರಿಂದ ಬೆಂಬಲ: ರಾಯಚೂರಿನಲ್ಲಿ ಗಲಾಟೆ ಇಲ್ಲ

ಏನಿದು ಘಟನೆ?
ಚಿತ್ತಾಕುಲಾ ಪೊಲೀಸ್ ಠಾಣೆ ವ್ಯಾಪ್ತಿಯ ಕಣಸಗಿರಿ ಬಂದರವಾಡದಲ್ಲಿರುವ ದರ್ಗಾಕ್ಕೆ ಆರೋಪಿಗಳು ಫೆಬ್ರವರಿ 03 2022(ಗುರುವಾರ) ರಂದು ಬೆಳಗ್ಗೆ 11:00 ಗಂಟೆಯ ಒಳಗೆ ದರ್ಗಾಕ್ಕೆ ಪ್ರವೇಶ ಮಾಡಿ ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗುವಂತೆ ಹಸಿರು ಬಾವುಟಕ್ಕೆ ಬೆಂಕಿ ಹಚ್ಚಿ ಭಾಗಶಃ ಸುಟ್ಟು ಹಾಕಿದ್ದರು.

police jeep

ದರ್ಗಾದ ಗೋಡೆಗಳನ್ನು ಕೆಡವಿ ಹಾಗೂ ಕಬ್ಬಿಣದ ಗ್ರಿಲ್ ಮತ್ತು ಗೇಟನ್ನು ಭಾಗಶಃ ಹಾಳು ಮಾಡಿದ್ದು, ದರ್ಗಾದ ಮಜರ್(ಹಿರಿಯರ ಸಮಾಧಿ) ಒಡೆದು ಹಾಕಿ ಅದರ ಮೇಲೆ ಹೊದಿಸಿದ ಹಸಿರು ಗಲೀಪವನ್ನು ತೆಗೆದು ಬಿಸಾಕಿದ್ದರು. ಈ ಕುರಿತು ತನಿಖೆ ಕೈಗೊಂಡ ಪೊಲೀಸರು ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ:  ಉಕ್ರೇನ್‍ನ ಸಮುದ್ರ, ಭೂ-ಆಧಾರಿತ ಪ್ರದೇಶದ ಮೇಲೆ ರಷ್ಯಾ ದಾಳಿ!

Share This Article
Leave a Comment

Leave a Reply

Your email address will not be published. Required fields are marked *