ಹುಬ್ಬಳ್ಳಿ: ಕಂಪನಿ ಪಾಲುದಾರನಿಗೇ ವಂಚಿಸಿ 27 ಲಕ್ಷ ರೂಪಾಯಿ ಮೌಲ್ಯದ ಅಡುಗೆ ಎಣ್ಣೆಯ ಲಾರಿಯೊಂದಿಗೆ ಪರಾರಿಯಾಗಿದ್ದ ಆರೋಪಿಯನ್ನು ಗೋಕುಲ ರೋಡ್ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
Advertisement
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭದ್ರೆಯ ಕಾಲನಿ ಮೂಲದ ಬೆಂಗಳೂರು ನಿವಾಸಿ ಮಹ್ಮದ್ ರಿಜ್ವಾನ್ ಆಶ್ರಫ್ ಬಂಧಿತ ಆರೋಪಿ. ಮಹ್ಮದ್ ಅನಾರ ಅವರು ಸಹೋದರ ಮಹ್ಮದ್ ಜುಬೇರ, ಮಹ್ಮದ್ ಇಸ್ಮಾಯಿಲ್ ಹಾಗೂ ಮಹ್ಮದ್ ರಿಜ್ವಾನ್ ಜೊತೆ ಸೇರಿ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಟಾವರ್ ಸ್ಟಾರ್ ಕಾಂಕ್ರಾಕ್ಟಿಂಗ್ ಟ್ರೇಡಿಂಗ್ ಆ್ಯಂಡ್ ಮ್ಯಾನು ಫ್ಯಾಕ್ಟರಿಂಗ್ ಎಂಬ ಕಂಪನಿ ಹೆಸರಲ್ಲಿ ಅಡುಗೆ ಎಣ್ಣೆ ಟ್ರೇಡಿಂಗ್ ಕಂಪನಿ ಆರಂಭಿಸಿದ್ದರು. ಇದನ್ನೂ ಓದಿ: ಇದೇ ಧೋನಿಯ ಕೊನೆಯ ಐಪಿಎಲ್?
Advertisement
ಗ್ರಾಹಕರೊಬ್ಬರಿಗೆ ಅಡುಗೆ ಎಣ್ಣೆ ಪೂರೈಸಲೆಂದು ಹುಬ್ಬಳ್ಳಿಯ ಚನ್ನಬಸವೇಶ್ವರ ಆಯಿಲ್ ಮಿಲ್ ಜೊತೆ ಮಾತುಕತೆ ನಡೆಸಿದ್ದರು. ಇದಕ್ಕಾಗಿ 27 ಲಕ್ಷ ರೂಪಾಯಿ ಪಾವತಿಸಿದ್ದರು. 30 ಟನ್ ಎಣ್ಣೆಯನ್ನು ಉಡುಪಿಯ ಗ್ರಾಹಕರಿಗೆ ತಲುಪಿಸುವಂತೆ ಪಾಲುದಾರರಾದ ಮಹ್ಮದ್ ರಿಜ್ವಾನ್ ಹಾಗೂ ಮಹ್ಮದ್ ಇಸ್ಮಾಯಿಲ್‍ಗೆ ತಿಳಿಸಿದ್ದರು. ಆದರೆ ಅವರು ಉಡುಪಿಯ ಗ್ರಾಹಕರಿಗೆ ತಲುಪಿಸದೆ ಪರಾರಿಯಾಗಿದ್ದರು.
Advertisement
Advertisement
ಈ ಕುರಿತು ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್‍ಸ್ಪೆಕ್ಟರ್ ಜೆ.ಎಂ.ಕಾಲಿಮಿರ್ಚಿ ನೇತೃತ್ವದ ತಂಡ ಅರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.