ಕೊಡಗಿನಲ್ಲಿ ಗಾಳಿಯೊಂದಿಗೆ ಎಡೆಬಿಡದೆ ಸುರಿಯುತ್ತಿದೆ ತುಂತುರು ಮಳೆ

Public TV
1 Min Read
mdk rain atanka collage

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸೋಮವಾರದಿಂದ ಗಾಳಿಯೊಂದಿಗೆ ತುಂತುರು ಮಳೆ ಎಡೆಬಿಡದೆ ಸುರಿಯುತ್ತಿದೆ. ಇಡೀ ಜಿಲ್ಲೆಯ ವಾತಾವರಣ ಮಳೆಗಾಲದ ವಾತಾವರಣಕ್ಕೆ ತಿರುಗಿದೆ.

ಸಂಪೂರ್ಣವಾಗಿ ಮೋಡ ಕವಿದ ಹಾಗೂ ಮಂಜು ಮುಸುಕಿದ ವಾತಾವರಣ ಜಿಲ್ಲೆಯಲ್ಲಿ ಕಂಡುಬರುತ್ತಿದ್ದು ತುಂತುರು ಮಳೆಯಾಗುತ್ತಿದೆ. ಕಳೆದ ಬಾರಿಯೂ ಹೀಗೆ ತುಂತುರು ಹನಿ ಹಾಕಿ ಬಂದು ಧೋ ಎಂದು ಸುರಿದು ಅನಾಹುತಕ್ಕೆ ಕಾರಣವಾಗಿದ್ದ ವರುಣ ಈ ಬಾರಿ ಹಾಗೆ ಮಾಡಬೇಡಪ್ಪಾ ಎಂದು ಜನರು ಪ್ರಾರ್ಥಿಸುತ್ತಿದ್ದಾರೆ.

mdk rain atanka

ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ರೈನ್ ಕೋಟ್, ಕೊಡೆ ಹಿಡಿದು ಶಾಲೆಗೆ ಬರುತ್ತಿದ್ದಾರೆ. ಈಗಾಗಲೇ ಬೆಟ್ಟಗುಡ್ಡಗಳು ಕುಸಿದಿರುವ ಸ್ಥಳದ ಜನರಂತೂ ಎಡೆಬಿಡದೆ ಸುರಿಯುತ್ತಿರುವ ತುಂತುರು ಮಳೆಯಿಂದ ಆತಂಕಕ್ಕೀಡಾಗಿದ್ದಾರೆ. ಜಿಲ್ಲಾಡಳಿತ ಮಳೆಗಾಲ ಎದುರಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೂ ಪ್ರಕೃತಿಯ ಮುಂದೆ ನಾವೇನು ಮಾಡೋಕಾಗಲ್ಲ, ದಯವಿಟ್ಟು ಕೊಡಗಿನ ಜನರ ಮೇಲೆ ಮುನಿಯಬೇಡ ವರುಣದೇವಾ ಎಂದು ಜಿಲ್ಲೆಯ ಜನಸಾಮಾನ್ಯರು ಬೇಡಿಕೊಳ್ಳುತ್ತಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಕಳೆದ ಬಾರಿ ಸಂಭವಿಸಿದ ಭಾರೀ ಮಳೆಯ ಅನಾಹುತಕ್ಕೆ ತತ್ತರಿಸಿರುವ ಜಿಲ್ಲೆಯ ಜನತೆ ಈ ಮಳೆಗಾಲವನ್ನು ಭಯ ಆತಂಕಗಳಿಂದಲೇ ಎದುರಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *