ಕಾಂಗ್ರೆಸ್ ಟಿಕೆಟ್ ಮಿಸ್- ಪುತ್ರನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ತಾಯಿ ಕಾಂತಾದೇವಿ

Public TV
1 Min Read
BELAGAVI ANAND 1

ಬೆಳಗಾವಿ: ಕಾಂಗ್ರೆಸ್ ಟಿಕೆಟ್ (Congress Ticket) ಮಿಸ್ ಆಗಿದ್ದಕ್ಕೆ ಪುತ್ರನನ್ನು ಅಪ್ಪಿಕೊಂಡು ತಾಯಿ ಕಣ್ಣೀರಿಟ್ಟಿರುವ ಘಟನೆ ನಡೆದಿದ್ದು ತಾಯಿ-ಮಗನ ಭಾವುಕ ದೃಶ್ಯ ಮಮ್ಮಲ ಮರಗುವಂತಿದೆ.

BELAGAVI ANAND 2

ಬೆಳಗಾವಿ ಜಿಲ್ಲೆಯ ಸವದತ್ತಿ ವಿಧಾನಸಭೆ ಕ್ಷೇತ್ರ (Savadatti Assembly Constituency) ದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದ ಸೌರಭ್ ಛೋಪ್ರಾ ಬದಲು ಈ ಸಲವೂ ವಿಶ್ವಾಸ ವೈದ್ಯಗೆ ಕಾಂಗ್ರೆಸ್ ಹೈಕಮಾಂಡ್ (Congress HighCommand) ಟಿಕೆಟ್ ನೀಡಿದೆ. ಕಾಂಗ್ರೆಸ್ ಟಿಕೆಟ್ ಮಿಸ್ ಆಗಿದ್ದಕ್ಕೆ ಪುತ್ರ ಸೌರಭ್ ನನ್ನು ಅಪ್ಪಿಕೊಂಡು ತಾಯಿ ಕಾಂತಾದೇವಿ ಕಣ್ಣೀರಿಟ್ಟಿದ್ದಾರೆ. ಪತಿ ದಿ.ಆನಂದ ಛೋಪ್ರಾ ಭಾವಚಿತ್ರ ಎದುರು ಕುಳಿತು ಸೌರಭ್ ಅಪ್ಪಿಕೊಂಡು ಕಾಂತಾದೇವಿ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಗೋಕಾಕ್ ಸಾಹುಕಾರ್‌ಗೆ ಸೈಲೆಂಟಾಗಿ ಪಂಚ್ ಕೊಟ್ಟ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

BELAGAVI ANAND

ಇತ್ತೀಚೆಗೆ ಚುನಾವಣೆ ತಂತ್ರಗಾರ ಪ್ರಶಾಂತ ಕಿಶೋರ ಅವರನ್ನ ಸೌರಭ್ ಛೋಪ್ರಾ ಭೇಟಿಯಾಗಿ ಚರ್ಚೆ ನಡೆಸಿ ಬಂದಿದ್ದರು. ಈಗಾಗಲೇ ಆನಂದ ರಥ ಹೆಸರಿನಲ್ಲಿ ಸವದತ್ತಿ ಕ್ಷೇತ್ರದ ಗ್ರಾಮಗಳಲ್ಲಿ ವಾಸ್ತವ್ಯ ಹೂಡುತ್ತಿರುವ ಸೌರಭ್ ಟಿಕೆಟ್ ಮಿಸ್ ಆಗ್ತಿದ್ದಂತೆಯೇ ಸವದತ್ತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ್ದು, ಆ ಸಭೆಯಲ್ಲೂ ಸೌರಭ ಛೋಪ್ರಾ ಬೆಂಬಲಿಗರೊಬ್ಬರು ಕಣ್ಣೀರಿಟ್ಟಿದ್ದಾರೆ.

Share This Article