ಬೆಂಗಳೂರು: ಗುಂಬಜ್ ಮಾದರಿಯ ಬಸ್ ನಿಲ್ದಾಣ ವಿಚಾರವಾಗಿ ಬಿಜೆಪಿಯ ಕೆ.ಆರ್.ಕ್ಷೇತ್ರ ಶಾಸಕ ಎಸ್.ಎ.ರಾಮದಾಸ್ (S.A.Ramdas) ಹಾಗೂ ಸಂಸದ ಪ್ರತಾಪ್ ಸಿಂಹ (Pratap Simha) ನಡುವೆ ಮುಸುಕಿನ ಗುದ್ದಾಟ ಮತ್ತೆ ಶುರುವಾಗಿದೆ. ಇದನ್ನು ‘BJPvsBJPʼ ಎಂದು ಟ್ವೀಟ್ ಮಾಡಿ ಕಾಂಗ್ರೆಸ್ (Congress) ಕಾಲೆಳೆದಿದೆ.
Advertisement
ಕಾಂಗ್ರೆಸ್ ಟ್ವೀಟ್‌ನಲ್ಲೇನಿದೆ?
BJPvsBJP ಕಿಚ್ಚು ಎಷ್ಟಿದೆ ಎನ್ನಲು ಮೈಸೂರಿನಲ್ಲಿ ನಡೆಯುತ್ತಿರುವ ಪ್ರತಾಪ್ ಸಿಂಹ vs ರಾಮದಾಸ್ ಕಾಳಗವೇ ಸಾಕ್ಷಿ. ಶಾಸಕರು ಕಟ್ಟಿಸಿದ ಬಸ್ ನಿಲ್ದಾಣವನ್ನು ಸಂಸದ ಒಡೆಯಲು ಹೊರಟಿದ್ದಾರೆ! ಬೇರೆಯವರ ಮನೆಯ ದೋಸೆಯ ತೂತನ್ನು ಹುಡುಕುವ ಬದಲು ಬಿಜೆಪಿಯವರು ತಮ್ಮ ಮನೆಯ ಕಾವಲಿಯ ತೂತನ್ನು ನೋಡಿಕೊಂಡರೆ ಒಳಿತು! ಇದನ್ನೂ ಓದಿ: ಪಾರಂಪರಿಕವಾಗಿ ಗುಂಬಜ್ ನಿರ್ಮಾಣ – ತಜ್ಞರನ್ನು ಕಳಿಸಲು ಸರ್ಕಾರಕ್ಕೆ ರಾಮದಾಸ್ ಪತ್ರ
Advertisement
Advertisement
ಮೈಸೂರಿನಲ್ಲಿ ಗುಂಬಜ್ ಮಾದರಿಯಲ್ಲಿ ಬಸ್ ನಿಲ್ದಾಣವೊಂದನ್ನು ನಿರ್ಮಿಸಲಾಗಿದೆ. ನಾನು ನೀಡಿರುವ ಗಡುವಿನಲ್ಲಿ ಅದನ್ನು ತೆರವುಗೊಳಿಸದಿದ್ದರೆ, ನಾನೇ ತೆರವುಗೊಳಿಸುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದ್ದರು.
Advertisement
ಇದಕ್ಕೆ ಪ್ರತಿಕ್ರಿಯಿಸಿರುವ ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್, ಅದು ಅರಮನೆಯ ಮಾದರಿಯದ್ದು. ಧರ್ಮದ ಆಧಾರದ್ದಲ್ಲ. ಪಾರಂಪರಿಕ ನಗರಿಯ ಮಹತ್ವ ಸಾರಲು ಅರಮನೆ ವಿನ್ಯಾಸದ ಮಾದರಿಯಲ್ಲಿ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಿಸಲಾಗುತ್ತಿದೆ. ಗುಂಬಜ್ ಮಾದರಿಯಲ್ಲಿದೆ ಎಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ಗುತ್ತಿಗೆದಾರ ಮುಸ್ಲಿಂ ಎಂದು ವದಂತಿ ಹಬ್ಬಿಸುತ್ತಿರುವ ಕುರಿತು ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ದೂರು ನೀಡಿದ್ದೇನೆ. ಇದನ್ನು ಧರ್ಮಕ್ಕೆ ಥಳಕು ಹಾಕುವುದು ಸರಿಯಲ್ಲ ಎಂದು ಪ್ರತಾಪ್ ಸಿಂಹ ಹೇಳಿಕೆಗೆ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಬಸ್ ನಿಲ್ದಾಣ ತೆರವು ಮಾಡಲ್ಲ, ಗುಂಬಜ್ ಮಾತ್ರ ತೆರವು ಮಾಡ್ತೇನೆ: ಪ್ರತಾಪ್ ಸಿಂಹ