DistrictsKarnatakaLatestMain PostMysuru

ಬಸ್ ನಿಲ್ದಾಣ ತೆರವು ಮಾಡಲ್ಲ, ಗುಂಬಜ್ ಮಾತ್ರ ತೆರವು ಮಾಡ್ತೇನೆ: ಪ್ರತಾಪ್ ಸಿಂಹ

ಮೈಸೂರು: ಎರಡು ದಿನದಲ್ಲಿ ತೆರವು ಮಾಡದೆ ಇದ್ದರೆ ನಾನು ಹೇಳಿದಂತೆ ನಾನೇ ತೆರವು ಮಾಡುತ್ತೇನೆ. ಆಗ ಬಸ್ ಸ್ಟ್ಯಾಂಡ್ ತೆರವು ಮಾಡವುದಿಲ್ಲ. ಬಸ್ ಸ್ಟ್ಯಾಂಡ್ (Bus Stand) ಮೇಲಿನ ಗುಂಬಜ್ ಮಾತ್ರ ತೆರವು ಮಾಡುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ತಿಳಿಸಿದರು.

ಸುದ್ದಿಗಾರರೊಂದಿಗೆ ಬಸ್ ನಿಲ್ದಾಣದ ಮೇಲೆ ಗುಂಬಜ್ ವಿಚಾರವಾಗಿ ಮಾತನಾಡಿದ ಅವರು, ಗುಂಬಜ್ ತೆರವಿಗೆ ನಾನು ನೀಡಿದ ಎರಡು ದಿನದ ಗಡುವು ಮುಗಿದಿದೆ. ಇನ್ನೂ ಎರಡು ದಿನ ಬಾಕಿ ಇದೆ. ಎರಡು ದಿನದಲ್ಲಿ ತೆರವು ಮಾಡದೆ ಇದ್ದರೆ ನಾನು ಹೇಳಿದಂತೆ ನಾನೇ ತೆರವು ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

ನಾನು ಹೇಳಿಕೆ ಕೊಡುವ ಮುನ್ನ ಬರೀ ಗುಂಬಜ್ ಇತ್ತು. ನಂತರ ರಾತ್ರೋರಾತ್ರಿ ಅದರ ಮೇಲೆ ಕಳಸ ಹೇಗೆ ಬಂತು ಎಂದು ಪ್ರಶ್ನಿಸಿದ ಅವರು, ಮೈಸೂರು ಅರಮನೆ ಮೇಲಿನ ಗೋಪುರಕ್ಕೂ ಮಸೀದಿ ಮೇಲಿನ ಗುಂಬಜ್‍ಗೂ ವ್ಯತ್ಯಾಸ ಇಲ್ವಾ? ಅರಮನೆ ಗೋಪುರಕ್ಕೂ ಗುಂಬಜ್‍ಗೂ ಹೋಲಿಕೆ ಮಾಡುವ ಮುನ್ನ ವಾಸ್ತುಶಿಲ್ಪ ಓದಿ ಕೊಳ್ಳಿ. ಅರಮನೆ ಗೋಪುರ ಇಂಡೋ- ಸಾರ್ಸೆನಿಕ್ ವಾಸ್ತುಶಿಲ್ಪದ್ದು, ಬಸ್ ಸ್ಟ್ಯಾಂಡ್ ಮೇಲೆ ಇವರು ಯಾವ ವಾಸ್ತುಶಿಲ್ಪ ಸೃಷ್ಟಿಸುತ್ತಾರೆ ಹೇಳಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಸದ್ಯಕ್ಕಿಲ್ಲ ಹಾಲು, ಮೊಸರು ದರ ಏರಿಕೆ- KMF ದರ ಏರಿಕೆಗೆ ಸಿಎಂ ತಡೆ

ಗುಂಬಜ್ ಕಟ್ಟಿದ್ದು ಪ್ರಶ್ನಿಸದಿದ್ದರೆ ಅರ್ಧ ಚಂದ್ರವನ್ನು ಕಟ್ಟಿ ಬಿಡುತ್ತಿದ್ದರು. ಬಸ್ ಸ್ಟ್ಯಾಂಡ್ ಕಟ್ಟಿದ ಗುತ್ತಿಗೆದಾರ ತನ್ನ ಮೇಲೆ ಬೇಕಾದರೆ ಗುಂಬಜ್, ಮಿನಾರ್ ಕಟ್ಟಿ ಕೊಳ್ಳಲಿ. ಶಾಸಕ ರಾಮದಾಸ್ ಅವರು ಅರಮನೆ ಮಾದರಿಯಲ್ಲಿ 20 ಬಸ್ ಸ್ಟ್ಯಾಂಡ್ ಕಟ್ಟಲಿ. ನಾನು ಗುಂಬಜ್ ಬಗ್ಗೆ ಧ್ವನಿ ಎತ್ತಿದ್ದಕ್ಕೆ ರಾಮದಾಸ್ ಅವರು ಮೌನವಹಿಸಿದ್ದಾರೆ ಎಂದರೆ ಅದರ ಅರ್ಥ ನನ್ನ ಮಾತಿಗೆ ಅವರ ಸಮ್ಮತಿ ಇದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಭಾರತ ಮೂಲದ ಬಾಲಕಿಯ ಅಪಹರಣ – ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ಪ್ರತಿಭಟನೆ

Live Tv

Leave a Reply

Your email address will not be published. Required fields are marked *

Back to top button