ನವದೆಹಲಿ: ಪಾಪದ ಕೊಡ ನಮ್ಮದಾ ನಿಮ್ಮದಾ? ಎಂದು ಪ್ರಶ್ನಿಸುವ ಮೂಲಕ ಸಚಿವ ಆರ್.ಅಶೋಕ್ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಿರುಗೇಟು ಕೊಟ್ಟರು.
ವಿಧಾನ ಪರಿಷತ್ ಮತ್ತು ರಾಜ್ಯಸಭೆಗೆ ಟಿಕೆಟ್ ಹಂಚಿಕೆ ವಿಚಾರ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಉಸ್ತುವಾರಿ ಸಚಿವ ರಣದೀಪ್ ಸುರ್ಜೆವಾಲ ಜೊತೆಗೆ ಸಭೆ ಮಾಡಿದ್ದಾರೆ. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹ ಇದ್ದರು. ಆದರೆ ಕಾಂಗ್ರೆಸ್ ನಾಯಕರು ಸೋನಿಯಾಗಾಂಧಿ ಅವರನ್ನು ಈ ವೇಳೆ ಭೇಟಿ ಮಾಡಿಲ್ಲ. ಈ ಹಿನ್ನೆಲೆ ಸೋನಿಯಾಗಾಂಧಿ ಅವರ ಅನುಮತಿ ಬಳಿಕ ಅಧಿಕೃತವಾಗಿ ಅಭ್ಯರ್ಥಿ ಪ್ರಕಟಣೆ ಮಾಡಲಾಗುವುದು ಎಂದು ಮಾಧ್ಯಮಗಳಿಗೆ ಸಿದ್ದರಾಮಯ್ಯ ಮಾಹಿತಿ ನೀಡಿದರು. ಇದನ್ನೂ ಓದಿ: ಬೆಣ್ಣೆ ಹಳ್ಳದಲ್ಲಿ ಪ್ರವಾಹ – ನಾಲ್ವರು ಕಾರ್ಮಿಕರನ್ನ ರಕ್ಷಿಸಿದ ಅಗ್ನಿಶಾಮಕ ದಳ
Advertisement
Advertisement
ವಿಧಾನ ಪರಿಷತ್ ಟಿಕೆಟ್ ಹಂಚಿಕೆ ಬಗ್ಗೆ ಚರ್ಚೆಯಾಗಿದೆ. ಯಾರಿಗೆ ಟಿಕೆಟ್ ನೀಡಬೇಕು ಎಂಬುದರ ಬಗ್ಗೆ ಚರ್ಚೆ ಆಗಿದೆ ಎಂದು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಎಲ್ಲರ ಬಗ್ಗೆಯೂ ಸುದೀರ್ಘ ಸಮಾಲೋಚನೆ ನಡೆಸಲಾಗಿದೆ. ಮುಂದೆ ಈ ಕುರಿತು ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದರು.
Advertisement
Advertisement
ಬೆಂಗಳೂರಿನಲ್ಲಿ ಪ್ರವಾಹ ಕಾಂಗ್ರೆಸ್ ಪಾಪದ ಕೊಡ ಎಂಬ ಆರ್.ಅಶೋಕ್ ಹೇಳಿಕೆ ಕುರಿತು ಮಾತನಾಡಿದ ಅವರು, ಅಶೋಕ್ ನೀನೇನು ಮಾಡಿದ್ದೀಯ ಹೇಳಪ್ಪ. ನೀನು ಮೇಯರ್ ಆಗಿದ್ದೆ, ಸಚಿವನಾಗಿದ್ದೆ. ನೀನು ಏನು ಕೆಲಸ ಮಾಡಿದ್ದೀಯ. ನಮ್ಮನ್ನು ಪ್ರಶ್ನೆ ಮಾಡುವ ಮೊದಲು ನೀನು ಮಾಡಿರುವ ಕೆಲಸದ ಬಗ್ಗೆ ಹೇಳು ಎಂದು ಕಿಡಿಕಾರಿದರು.
ನಾನು ಬೆಂಗಳೂರು ಅಭಿವೃದ್ಧಿಗೆ 1,217 ಕೋಟಿ ಅನುದಾನ ನೀಡಿದ್ದೇನೆ. 50%ರಷ್ಟು ಕಾಲುವೆಗೆ ತಡೆಗೋಡೆ ನಿರ್ಮಿಸಿದ್ದೆ. ನೀವು ಎಷ್ಟು ಕೆಲಸ ಮಾಡಿದ್ದೀರಿ. ಪಾಪದ ಕೊಡ ನಮ್ಮದಾ ನಿಮ್ಮದಾ? ಎಂದು ಆಕ್ರೋಶ ಹೊರಹಾಕಿದರು.
ಮೂರು ವರ್ಷದಿಂದ ನಿಮ್ಮ ಸರ್ಕಾರ ಅಡಳಿತದಲ್ಲಿದೆ. ಪಾಪಾದ ಕೊಡ ಅಂತಾ ಜಾರಿಕೊಳ್ಳಬೇಡ. ನಮ್ಮ ಮೇಲೆ ಆರೋಪ ಮಾಡುವುದಕ್ಕು ಮುನ್ನ ನಿನ್ನ ಸಾಧನೆ ಹೇಳು ಎಂದು ಸವಾಲು ಹಾಕಿದರು. ಇದನ್ನೂ ಓದಿ: ತಮಿಳು ಹೆಸರಾಂತ ನಟ ಧನುಷ್ ತಮ್ಮ ಮಗ ಎಂದ ದಂಪತಿಗೆ ನೋಟಿಸ್
ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿಲ್ಲ. ಉಸ್ತುವಾರಿ ರಣದೀಪ್ ಸುರ್ಜೆವಾಲ ಜೊತೆಗೆ ಮಾತ್ರ ಚರ್ಚೆ ಮಾಡಿದೆ. ರಾಜ್ಯಸಭೆ ಬಗ್ಗೆ ನಾವು ಚರ್ಚೆ ಮಾಡಿಲ್ಲ. ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಎರಡನೇ ಅಭ್ಯರ್ಥಿ ವಿಚಾರವಾಗಿ ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆಯೂ ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದು ವಿವರಿಸಿದರು.