ನವದೆಹಲಿ: ಆರಂಭದಲ್ಲೇ ವಿಪಕ್ಷಗಳ ಐಎನ್‍ಡಿಐಎ (INDIA) ಕೂಟ ಅಲುಗಾಡತೊಡಗಿದೆ. ಮೂರನೇ ಸಭೆಗೆ ಮುನ್ನವೇ ಕಾಂಗ್ರೆಸ್ (Congress) ಮತ್ತು ಆಮ್ ಆದ್ಮಿ ಪಕ್ಷದ (AAP) ನಡುವೆ ಬಿರುಕು ಮೂಡಿದೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Lok Sabha Election) ದೆಹಲಿ (Delhi) ಏಳಕ್ಕೆ ಏಳು ಲೋಕಸಭೆ ಕ್ಷೇತ್ರಗಳನ್ನು ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್ ಪ್ಲಾನ್ ಮಾಡಿದೆ. ಚುನಾವಣೆಗೆ ಇನ್ನು ಏಳು ತಿಂಗಳಷ್ಟೇ ಬಾಕಿ ಇದ್ದು, ಏಳು ಸ್ಥಾನಗಳಲ್ಲೂ ಸ್ಪರ್ಧಿಸಲು ತಯಾರಾಗಿ ಎಂದು ಪಕ್ಷದ ಕೆಡಾರ್‌ಗೆ ಹೈಕಮಾಂಡ್ ಸೂಚಿಸಿದೆ. ಈ ಬೆಳವಣಿಗೆ ಸಹಜವಾಗಿಯೇ ಆಮ್ ಆದ್ಮಿ ಪಕ್ಷಕ್ಕೆ ಇರಿಸುಮುರಿಸು ಉಂಟು ಮಾಡಿದೆ. ಹೀಗಾಗಿ ಪಕ್ಷದ ನಾಯಕರು ಗರಂ ಆಗಿದ್ದಾರೆ.
Advertisement
Advertisement
ಕಾಂಗ್ರೆಸ್ ನಾಯಕಿ ಅಲ್ಕಾ ಲಂಬಾ, ಮುಂಬರುವ ಲೋಕಸಭೆ ಚುನಾವಣೆಗೆ ತಯಾರಿ ನಡೆಸುವಂತೆ ನಮಗೆ ತಿಳಿಸಲಾಗಿದೆ. ಎಲ್ಲಾ ಏಳು ಸ್ಥಾನಗಳಲ್ಲೂ ಸ್ಪರ್ಧಿಸಲು ತೀರ್ಮಾನಿಸಲಾಗಿದೆ. ಏಳು ಸ್ಥಾನಗಳಿಗೆ ತಯಾರಿ ನಡೆಸುವಂತೆ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಆರೋಪ ಮಾಡಿ ಓಡಿ ಹೋಗುವ ಬಹಳ ಮಂದಿಯನ್ನು ನೋಡಿದ್ದೇನೆ: ಡಿಕೆ ಸುರೇಶ್
Advertisement
ಕಾಂಗ್ರೆಸ್‍ನವರಿಗೆ ದೆಹಲಿಯಲ್ಲಿ ಮೈತ್ರಿ ಬೇಕಿಲ್ಲ ಅಂದರೆ ನಾವು ಐಎನ್‍ಡಿಐಎ ಕೂಟದ ಜೊತೆ ಹೋಗುವುದು ನಾನ್‍ಸೆನ್ಸ್ ಆಗುತ್ತದೆ. ಇದು ಸಮಯ ವ್ಯರ್ಥ ಅಷ್ಟೇ. ಮುಂದಿನ ಐಎನ್‍ಡಿಐಎ ಸಭೆಗೆ ಹೋಗಬೇಕೋ ಬೇಡವೋ ಎನ್ನುವುದನ್ನು ಶೀಘ್ರ ತೀರ್ಮಾನಿಸುತ್ತೇವೆ ಎಂದು ಆಪ್ ಸಚಿವ ಸೌರಭ್ ಭಾರದ್ವಾಜ್ ಪ್ರತಿಕ್ರಿಯಿಸಿದ್ದಾರೆ.
Advertisement
Web Stories