ಬೆಂಗಳೂರು: ಚುನಾವಣಾ ದೃಷ್ಟಿಯಿಂದ ಮಂಡಿಸಿರುವ ಬಜೆಟ್‍ನಲ್ಲಿ 2019 ವರ್ಷಕ್ಕೆ ವಿಶೇಷವಾದ ಕೊಡುಗೆಗಳೇನೂ ಇಲ್ಲ. 2022 ವರ್ಷಕ್ಕೆ ಲಾಭ ಪಡೆಯುವ ಕೊಡುಗೆಗಳು ಇದೆ ಅಂತ ಲೋಕಸಭೆ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
2018ರ ಕೇಂದ್ರ ಬಜೆಟ್ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆರಿಗೆ ಹೊರತು ಪಡಿಸಿ ಇದು ವರ್ಷದ ಬಜೆಟ್ ಅಲ್ಲ. ನಾಲ್ಕು ವರ್ಷದಿಂದ ಹೇಳಿದ ಕೆಲಸ ಮಾಡಿಲ್ಲ. ಒಂದು ವರ್ಷದಲ್ಲಿ ಏನು ಮಾಡಲು ಸಾಧ್ಯ ಅಂತ ಪ್ರಶ್ನಿಸಿದ್ರು. ಇದನ್ನೂ ಓದಿ: ಬೆಂಗ್ಳೂರು ಕನಸು-ನನಸು: ಸಬ್ ಅರ್ಬನ್ ರೈಲು ಹಳಿ ನಿರ್ಮಾಣಕ್ಕೆ ಸೈ ಎಂದ ಕೇಂದ್ರ
Advertisement
Advertisement
ಕೊನೆ ಬಜೆಟ್ ನಲ್ಲಿ ಸಾಕಷ್ಟು ಭರವಸೆಗಳನ್ನು ನೀಡಿದ್ದು, ಆದ್ರೆ ಭರವಸೆಗಳು ಸರಿಯಾಗಿಲ್ಲ. ರೈತರ ಆದಾಯ ದ್ವಿಗುಣ ಮಾಡುವ ಭರವಸೆ ಸುಳ್ಳಾಗಿದೆ. ಪ್ರಾಥಮಿಕ ಶಿಕ್ಷಣಕ್ಕೆ ಸರಿಯಾದ ಅನುದಾನ ನೀಡಿಲ್ಲ. ಕೇವಲ ಉನ್ನತ ಶಿಕ್ಷಣಕ್ಕಾಗಿ ಹಣ ಮೀಸಲಿದೆ. ಈ ಲಾಭ ಕೇವಲ ಉನ್ನತ ವರ್ಗದ ಮಕ್ಕಳಿಗೆ ಸಿಗಲಿದೆ. ಉತ್ತಮ ಪ್ರಾಥಮಿಕ ಶಿಕ್ಷಣ ಬಡ ಜನರಿಗೆ ಸಿಗಬೇಕಿತ್ತು ಅಂದ್ರು. ಇದನ್ನೂ ಓದಿ: ಕೇಂದ್ರ ಬಜೆಟ್: ಯಾವುದು ಇಳಿಕೆ? ಯಾವುದು ಏರಿಕೆ? ಇಲ್ಲಿದೆ ಪೂರ್ಣ ಮಾಹಿತಿ!
Advertisement
ಕಾರ್ಪೋ ರೇಟ್ ಪರ ಇಲ್ಲ ಎನ್ನುವ ಕೇಂದ್ರ ಸರ್ಕಾರ ಕಾರ್ಪೋ ರೇಟ್ ತೆರಿಗೆ ಕಡಿತ ಉದ್ಯಮಿಗಳಿಗೆ ಲಾಭ ಮಾಡುತ್ತಿದೆ. ಕೋಟಿ ಉದ್ಯೋಗ ನೀಡುವ ಭರವಸೆ ಹುಸಿಯಾಗಿದೆ. ಸರ್ಕಾರ ತನ್ನ ಟಾರ್ಗೆಟ್ ರೀಚ್ ಆಗಿಲ್ಲ. ಆರೋಗ್ಯ ವಿಮೆ ಬಗ್ಗೆ ಸಂಪೂರ್ಣ ಚಿತ್ರಣ ನೀಡಿಲ್ಲ. ರೈಲ್ವೆ ಬಜೆಟ್ ಕೇಳುವವರೇ ಇಲ್ಲದಂತಾಗಿದೆ ಅಂತ ಹೇಳಿದ್ರು. ಇದನ್ನೂ ಓದಿ: ಮೋದಿ ಉದ್ಯೋಗ ಸೃಷ್ಟಿ ನೀತಿಯನ್ನು ಟೀಕಿಸಿದವರಿಗೆ ಬಜೆಟ್‍ನಲ್ಲಿ ಜೇಟ್ಲಿ ಉತ್ತರಿಸಿದ್ದು ಹೀಗೆ
Advertisement
ಯಾದಗಿರಿ ರೈಲ್ವೆ ಪ್ಯಾಕ್ಟರಿ ಅಭಿವೃದ್ಧಿ ಹಣ ನೀಡಿಲ್ಲ. ಸಾಮಾನ್ಯ ಬಜೆಟ್ ಜೊತೆಗೆ ರೈಲ್ವೆ ಬಜೆಟ್ ಸೇರಿಸಿ ಸಾಮಾನ್ಯ ಜನರಿಗೆ ಅನ್ಯಾಯ ಮಾಡಿದೆ ಅಂತ ಅವರು ತಿಳಿಸಿದ್ರು. ಇದನ್ನೂ ಓದಿ: ಕೇಂದ್ರ ಬಜೆಟ್: ಗ್ರಾಮೀಣ ಪ್ರದೇಶಕ್ಕೆ ಸಿಕ್ಕಿದ್ದು ಏನು?