ನವದೆಹಲಿ: ಈ ಬಾರಿಯ ಬಜೆಟ್ ನಲ್ಲಿ ಗ್ರಾಮೀಣ ಅಭಿವೃದ್ಧಿಗೆ 14.34 ಲಕ್ಷ ಕೋಟಿ ರೂ ಅನುದಾನ ಮೀಸಲಿಟ್ಟಿದ್ದು, 2022ರೊಳಗೆ ಭಾರತದ ರೈತರ ಆದಾಯವನ್ನು ಎರಡು ಪಟ್ಟು ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ.
ಹೈಲೈಟ್ಸ್:
* ಆಪರೇಷನ್ ಗ್ರೀನ್ ಯೋಜನೆಗೆ ಸುಮಾರು 500 ಕೋಟಿ ಮೀಸಲು
* ಸುಮಾರು 10,000 ಕೋಟಿ ರೂ.ಗಳ ವೆಚ್ಚದಲ್ಲಿ ಮೀನುಗಾರಿಕೆ ಮತ್ತು ಪಶುಸಂಗೋಪನೆ ಸಹಾಯ
* ನೀರಾವರಿ ಯೋಜನೆಗೆ 2,600 ಕೋಟಿ ರೂ.
Advertisement
* ಕೃಷಿ ಮಾರುಕಟ್ಟೆ ಅಭಿವೃದ್ಧಿ ಫಂಡ್ ಗೆ 2000 ಕೋಟಿ ರೂ.
* ಗ್ರಾಮೀಣ ಭಾಗದಲ್ಲಿರುವ 20 ಸಾವಿರ ಕೃಷಿ ಉತ್ಪನ್ನ ಮಾರುಕಟ್ಟೆಗಳ ಆಧುನೀಕರಣ. ಎಪಿಎಂಸಿ ಯಲ್ಲಿ ತಂತ್ರಜ್ಞಾನ ಅಳವಡಿಕೆ ಮಾಡುವದರಿಂದ ಸಣ್ಣ ರೈತರು ಸಹ ಉತ್ಪನ್ನಗಳನ್ನು ಆನ್ ಲೈನ್ ಬೆಲೆಯಲ್ಲಿ ಮಾರಟಾ ಮಾಡಬಹುದಾಗಿದೆ.
Advertisement
* ಕೃಷಿ ಉತ್ಪನ್ನಗಳ ರಫ್ತು 100 ಅರಬ್ ಡಾಲರ್‍ಗಳಿಗೆ ಹೆಚ್ಚಿಸುವ ಗುರಿ
* 2,000 ಕೋಟಿ ರೂ. ಅನುದಾನದಿಂದ ಕೃಷಿ ಮಾರುಕಟ್ಟೆ ಮತ್ತು ಸಂರಚನೆ ಮಾಡಲಾಗುವುದು.
* ಮೀನುಗಾರಿಕೆ ಮತ್ತು ಪಶು ಸಂಗೋಪನಾ ಉದ್ಯಮಕ್ಕಾಗಿ 10 ಸಾವಿರ ಕೋಟಿ ರೂ. ಮೀಸಲು.
Advertisement
* ಕೃಷಿ ಸಾಲಕ್ಕಾಗಿ 11 ಲಕ್ಷ ಕೋಟಿ ಮೀಸಲು.
* ಸರ್ಕಾರದಿಂದ ಜೈವಿಕ ಕೃಷಿಗೆ ಪ್ರೋತ್ಸಾಹ.
* ಈರುಳ್ಳಿ, ಆಲೂಗಡ್ಡೆ, ಟೊಮೆಟೋ ಬೆಳೆಗಳಲ್ಲಿ ಹಸಿರು ಕ್ರಾಂತಿ.