ನವದೆಹಲಿ: ಈ ಹಣಕಾಸು ವರ್ಷದಲ್ಲಿ 70 ಲಕ್ಷ ಹೊಸ ಉದ್ಯೋಗ ಸೃಷ್ಟಿಸಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಉದ್ಯಮಶೀಲರಿಗೆ ಹಣಕಾಸು ನೆರವು ನೀಡಲು ಆರಂಭಿಸಿರುವ ಮುದ್ರಾ ಯೋಜನೆಗೆ 3 ಲಕ್ಷ ಕೋಟಿ ರೂ. ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮ(ಎಂಎಸ್‍ಎಂಇ) ಗಳಿಗೆ ಪ್ರೋತ್ಸಾಹ ನೀಡಲು 3794 ಕೋಟಿ ರೂಗಳ ಅನುದಾನ ಬಜೆಟ್ ನಲ್ಲಿ ಸಿಕ್ಕಿದೆ.
Advertisement
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಉದ್ಯೋಗ ಸೃಷ್ಟಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡುತ್ತಾ, ಪಕೋಡಾ ಮಾಡಿ ಮಾರುವುದು ಕೂಡ ಒಂದು ಉದ್ಯೋಗವೇ ಎಂದು ಹೇಳಿದ್ದರು.
Advertisement
Advertisement
ಪ್ರಧಾನಿಯವರ ಈ ಹೇಳಿಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಬೆಂಗಳೂರಿನ ಎಂಎಸ್‍ಸಿ, ಎಂಎ ಹಾಗೂ ಎಂಜಿನೀಯರಿಂಗ್ ವಿದ್ಯಾರ್ಥಿಗಳು ನಗರದ ಬಿಜೆಪಿ ಕಚೇರಿಯೆದುರು ಪಕೋಡ ಮಾಡಿ ಅದನ್ನು 10 ರೂ.ಗೆ ಮಾರುವುದರ ಮೂಲಕ ಪ್ರತಿಭಟನೆ ನಡೆಸಿದ್ದರು.
Advertisement
ಉದ್ಯೋಗ ಕೊಡುತ್ತೇವೆ ಎಂದಿದ್ದ ಪ್ರಧಾನಿ ಮೋದಿ ಪಕೋಡ ಮಾರುವಂತೆ ಹೇಳಿದ್ದರು. ಆದರೆ ಪಕೋಡಾ ಮಾರುವ ಉದ್ಯೋಗ ಸೃಷ್ಟಿ ಮಾಡಿದ್ದು ನರೇಂದ್ರ ಮೋದಿಯಲ್ಲ, ಉದ್ಯೋಗ ಸೃಷ್ಟಿಸಿ ಎಂದರೆ ಪಕೋಡಾ ಮಾರಾಟದ ಉದಾಹರಣೆ ನೀಡಿದ್ದರು.
ಆ ಬಳಿಕ ಆಮ್ ಆದ್ಮಿ ಪಾರ್ಟಿ ವತಿಯಿಂದಲೂ ಕೆಲಸ ಸಿಕ್ಕಿಲ್ವಾ..? ಬಜ್ಜಿ ವಡಾ ಪಕೋಡಾ ಮಾರು 200 ರೂ. ಸಂಪಾದಿಸು, ಅದೇ ನಿನ್ನ ಉದ್ಯೋಗ ಅಂತ ಬೋರ್ಡ್ ಹಾಕೋ ಮೂಲಕ ಮೋದಿ ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಇದನ್ನು ಓದಿ: ಮೋದಿ ವಿರುದ್ಧ ಉದ್ಯೋಗ ಸೃಷ್ಟಿಗಾಗಿ Msc, MA, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ `ಪಕೋಡ’ ಪ್ರತಿಭಟನೆ
https://www.youtube.com/watch?v=LqnbGiE0F3Q