ಚಿಕ್ಕಮಗಳೂರು: ತಮ್ಮದೇ ಸರ್ಕಾರ ವಿದ್ಯುತ್ ಫ್ರೀ (Free Electricity) ಕೊಟ್ಟರೂ ಗ್ರಾಮ ಪಂಚಾಯಿತಿ ಸದಸ್ಯೆ ಕರೆಂಟ್ ಕದ್ದು ಸಿಕ್ಕಿಬಿದ್ದಿದ್ದಾರೆ.
ಚಿಕ್ಕಮಗಳೂರು (Chikkamagaluru) ಜಿಲ್ಲೆ ಎನ್.ಆರ್.ಪುರ ತಾಲೂಕಿನ ಕಡಬಗೆರೆಯ ತಮ್ಮ ಮೂರು ಮನೆಗಳಿಗೆ ಪಂಚಾಯ್ತಿ ಸದಸ್ಯೆ ಆಶಾ ನಾರಾಯಣ್ ಅಕ್ರಮ ವಿದ್ಯುತ್ ಸಂಪರ್ಕ ಪಡೆದಿದ್ದರು. ವಿಷಯ ತಿಳಿದು ದಾಳಿ ನಡೆಸಿದ ಮೆಸ್ಕಾಂ ಅಧಿಕಾರಿಗಳು 1 ಲಕ್ಷಕ್ಕೂ ಹೆಚ್ಚು ದಂಡ ವಿಧಿಸಿದ್ದಾರೆ. ಇದನ್ನೂ ಓದಿ: ರಾಜ್ಯಪಾಲರಿಗೆ ನಿಂದನೆ; ಕಾಂಗ್ರೆಸ್ ನಾಯಕರ ವಿರುದ್ಧ ಡಿಜಿಪಿಗೆ ಬಿಜೆಪಿ ದೂರು
ಎನ್.ಆರ್.ಪುರ ತಾಲೂಕಿನ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆಯೂ ಆಗಿರುವ ಆಶಾ ನಾರಾಯಣ್, ಕಡಬಗೆರೆಯಲ್ಲಿ ಮೂರು ಮನೆಗಳಿಗೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದಿದ್ದರು. ವಿಷಯ ತಿಳಿದು ಚಿಕ್ಕಮಗಳೂರು ತಾಲೂಕಿನ ಕಡಬಗೆರೆ ಮನೆ ಮೇಲೆ ಮೆಸ್ಕಾಂ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದರು.
ಮೆಸ್ಕಾಂ ಅಧಿಕಾರಿಗಳ ತಂಡ ಮಂಗಳೂರಿನಿಂದ ಆಗಮಿಸಿತ್ತು. ಕಾಂಗ್ರೆಸ್ ನಾಯಕಿಗೆ 1 ಲಕ್ಷಕ್ಕೂ ಹೆಚ್ಚು ದಂಡ ವಿಧಿಸಿದೆ ಎಂದು ತಿಳಿದುಬಂದಿದೆ. ಅಕ್ರಮ ಗೊತ್ತಿದ್ದರೂ ಪ್ರಭಾವಿ ಎನ್ನುವ ಕಾರಣಕ್ಕೆ ಸ್ಥಳೀಯ ಅಧಿಕಾರಿಗಳು ಸುಮ್ಮನಾಗಿದ್ದರು ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಕವರ್‌ಗೆ ಹೀಲಿಯಂ ಗ್ಯಾಸ್ ತುಂಬಿಸಿಕೊಂಡು ಟೆಕ್ಕಿ ಆತ್ಮಹತ್ಯೆ
ಇದೀಗ ಮಂಗಳೂರು ಅಧಿಕಾರಿಗಳಿಂದಲೇ ವಂಚನೆ ಬೆಳಕಿಗೆ ಬಂದಿದೆ. ಆಶಾ ನಾರಾಯಣ್ ಅವರು ದೇವದಾನ ಗ್ರಾಮ ಪಂಚಾಯಿತಿ ಸದಸ್ಯೆಯೂ ಆಗಿದ್ದಾರೆ.