ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ (Congress Government) ಗ್ಯಾರಂಟಿ ಯೋಜನೆಗಳ (Guarantee Scheme) ಫಲಾನುಭವಿಗಳಾಗಲು ರಾಜ್ಯದ ಜನ ಮುಗಿಬಿದ್ದಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಬಿಪಿಎಲ್ ಕಾರ್ಡ್ (BPL Card) ಹೊಂದಿರುವುದು ಕಡ್ಡಾಯವಾದ ಕಾರಣ ಮಹಿಳೆಯರೆಲ್ಲಾ ರೇಷನ್ ಕಾರ್ಡ್ ಮಾಡಿಸಲು ಸೈಬರ್ ಸೆಂಟರ್, ಬೆಂಗಳೂರು ಒನ್‍ಗಳಿಗೆ ಎಡತಾಕುತ್ತಿದ್ದಾರೆ.
ಒಂದೇ ಪಡಿತರ ಚೀಟಿಯಲ್ಲಿ ಅತ್ತೆ, ಸೊಸೆ ಹೆಸರು ಇದ್ದವರು ನಾವು ಪ್ರತ್ಯೇಕವಾಗಿ ವಾಸವಾಗಿದ್ದೇವೆ. ಈಗ ಇಬ್ಬರ ಹೆಸರಲ್ಲೂ ಪ್ರತ್ಯೇಕ ರೇಷನ್ ಕಾರ್ಡ್ ಮಾಡಿಸಲು ಮುಂದಾಗಿದ್ದಾರೆ. ಆದರೆ ಬೆಂಗಳೂರು ಒನ್ ಸಿಬ್ಬಂದಿ ಅರ್ಜಿ ಸ್ವೀಕರಿಸಲು ಯಾವುದೇ ಆದೇಶ ಬಂದಿಲ್ಲ ಎಂದು ತಿಳಿಸಿ ಹೇಳುತ್ತಿದ್ದಾರೆ.
ಜನರು ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ಕಾತರರಾಗಿದ್ದಾರೆ. ಬೆಂಗಳೂರು ಒನ್ ಸೆಂಟರ್‌ಗಳತ್ತ ಮಾಹಿತಿ ಕೇಳಿಕೊಂಡು ಮಹಿಳೆಯರು ಬರುತ್ತಿದ್ದಾರೆ. ಆದರೆ ರಾಜಾಜಿನಗರ ಬೆಂಗಳೂರು ಒನ್ ಸೆಂಟರ್‌ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸ್ವೀಕರಿಸುತ್ತಿಲ್ಲ ಎಂಬ ಪೋಸ್ಟರ್ ಅಂಟಿಸಲಾಗಿದೆ. ಜೂನ್ 15 ರಿಂದ ಜುಲೈ 15 ರ ತನಕ ಅರ್ಜಿ ಹಾಕಲು ಅವಕಾಶವಿದೆ ಎಂದು ಸರ್ಕಾರ ಹೇಳಿದೆ.