ರಾಮನಗರ: ಇತ್ತೀಚಿನ ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (H.D.Kumaraswamy) ಅವರು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಅನಿಸುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಮರಸಪ್ಪ ರವಿ ಲೇವಡಿ ಮಾಡಿದ್ದಾರೆ.
ಅಧಿಕಾರಕ್ಕಾಗಿ ಹಪಹಪಿಸಿ ಸೋತು ಸುಣ್ಣವಾಗಿರುವ ಕುಮಾರಸ್ವಾಮಿ ಅವರು ತಮ್ಮ ಪಕ್ಷದಿಂದ ಹೊರ ಹೋಗುವ ಮಂದಿಯನ್ನು ಹಿಡಿದಿಟ್ಟುಕೊಳ್ಳಲಾಗದೇ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅತ್ಯಂತ ಬಹುಮತದಿಂದ ಸರ್ಕಾರವನ್ನು ಅಧಿಕಾರಕ್ಕೆ ತಂದ ಸಂಘಟನಾ ಚತುರ ಡಿ.ಕೆ.ಶಿವಕುಮಾರ್ ಬಗ್ಗೆ ಅಸೂಹೆಯಿಂದ ದಿನಕ್ಕೊಂದು ಸುಳ್ಳಿನ ಕಂತೆ ಪೋಣಿಸುತ್ತಾ ವಿಕೃತಿ ಮೆರೆಯುತ್ತಿದ್ದಾರೆ. ಇದೊಂಥರ ‘ಸೋತ ವ್ಯಕ್ತಿಯ ಸುಳ್ಳಿನ ಗೀತೆ’ಯಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಸುಮ್ಮನಿರೋಕೆ ನಾವು ಬಳೆ ತೊಟ್ಟಿಲ್ಲ: ಮಂಜುನಾಥ್ ಆಕ್ರೋಶ
Advertisement
Advertisement
ಪೆನ್‌ಡ್ರೈವನಲ್ಲಿ ದಾಖಲೆ ಇದೆ ಎಂದು ಹೇಳಿ, ಅದನ್ನು ಸದನದಲ್ಲಿ ಪ್ರದರ್ಶನ ಮಾಡುತ್ತೇನೆಂದು ಶಪಥ ಮಾಡಿದ ಹೆಚ್ಡಿಕೆ ಅದನ್ನು ಪ್ರದರ್ಶಿಸಲಾಗದೆ ಮುಖಭಂಗಕ್ಕೀಡಾಗಿದ್ದಾರೆ. ಆ ಪೆನ್‌ಡ್ರೈವ್ ಕಳೆದು ಹೋಗಿದೆಯೋ ಅಥವಾ ಯಾರ ಬಳಿಯಾದರು ಅಡವಿಟ್ಟಿದ್ದಾರೋ ಎಂದು ಪ್ರಶ್ನೀಸಿರುವ ಮರಸಪ್ಪ ರವಿ, ಮೊದಲು ಪೆನ್‌ಡ್ರೈವ್ ಕಥೆ ಏನಾಯಿತು ಎಂದು ಸಾರ್ವಜನಿಕವಾಗಿ ಹೇಳಲಿ ಎಂದು ಸವಾಲು ಹಾಕಿದ್ದಾರೆ.
Advertisement
ದೀಪಾವಳಿಯಂದು ತಮ್ಮ ಮನೆಗೆ ವಿದ್ಯುತ್ ದೀಪಗಳ ಶೃಂಗಾರ ಮಾಡಲು ವಿದ್ಯುತ್ ಕಳುವು ಮಾಡಿ ದಂಡ ಕಟ್ಟಿದ ಮಾಜಿ ಮುಖ್ಯಮಂತ್ರಿಗಳು ರಾಜ್ಯದ ಜನತೆಯ ಮುಂದೆ ವಿದ್ಯುತ್ ಕಳ್ಳನೆಂದು ಬೆತ್ತಲಾಗಿ, ಮುಖ ಉಳಿಸಿಕೊಳ್ಳಲು ಲೂಲು ಮಾಲ್ ಬಗ್ಗೆ ಪ್ರಸ್ತಾಪಿಸಿದರು. ಇದಕ್ಕೆ ಡಿ.ಕೆ.ಶಿವಕುಮಾರ್ ಅವರು, ಇದರ ಬಗ್ಗೆ ಪ್ರತಿಯೊಂದು ಪೈಸೆಯನ್ನು ಲೆಕ್ಕ ಕೊಡುತ್ತೇನೆ. ಬೇಕಿದ್ದರೆ ಸದನದಲ್ಲಿ ಪ್ರಸ್ತಾಪಿಸಲಿ ಎಂದು ಜವಾಬಿಗೆ ತಣ್ಣಗಾದ ಹೆಚ್ಡಿಕೆ ಈಗ ನೀಲಿಚಿತ್ರ ಪ್ರದರ್ಶನದ ಬಾಣ ಬಿಟ್ಟಿದ್ದಾರೆ. ಇದು ಅವರ ಕುತ್ಸಿತ ಮನಸ್ಸಿನ ಪರಮಾವಧಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮೋದಿ ಸರ್ಕಾರ ಕೊಟ್ಟ ಅನುದಾನದಲ್ಲಿ ರಾಜ್ಯದಲ್ಲಿ ಕೆಲಸ ಆಗ್ತಿದೆ: ಕಟೀಲ್
Advertisement
ಡಿ.ಕೆ. ಶಿವಕುಮಾರ್ ಅವರು ಚಿತ್ರ ಪ್ರದರ್ಶಕರು ಹೌದು. ಅವರು ಗ್ರಾಮೀಣ ಪ್ರದೇಶದಲ್ಲಿ ಸಿನಿಮಾ ಟೆಂಟುಗಳನ್ನು ತೆರೆದು ಹಳ್ಳಿಗಾಡಿನ ಜನತೆಗೆ ಉತ್ತಮ ಸದಾಭಿರುಚಿಯ ಚಿತ್ರಗಳನ್ನು ನೋಡಲು ಅನುವು ಮಾಡಿಕೊಟ್ಟಿದ್ದಾರೆ. ಆದರೆ ಎಂದಿಗೂ ನೀಲಿಚಿತ್ರಗಳನ್ನು ಪ್ರದರ್ಶನ ಮಾಡಿ ಹಣ ಮಾಡಿಲ್ಲ. ಹೆಚ್ಡಿಕೆ ಈ ಬಗ್ಗೆ ಸೂಕ್ತ ದಾಖಲೆ ನೀಡಲಿ ಎಂದಿದ್ದಾರೆ.
ಹಿಂದಿನ ಮುಖಭಂಗ ಸ್ಮರಿಸಿಕೊಳ್ಳಲಿ
ಈಗಾಗಲೇ ನೀಲಿಚಿತ್ರ ಪ್ರದರ್ಶನ ಕುರಿತು ಡಿಸಿಎಂ ಶಿವಕುಮಾರ್ ಅವರು ದಾಖಲೆ ಸಮೇತ ಬಹಿರಂಗ ಚರ್ಚೆಗೆ ಕುಮಾರಸ್ವಾಮಿ ಅವರನ್ನು ಆಹ್ವಾನಿಸಿದ್ದಾರೆ. ಟ್ವೆಂಟಿ 20 ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಅಧಿಕಾರದ ಮದದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಅವರ ತಾಯಿಯ ಬಗ್ಗೆ ಲಘುವಾಗಿ ಮಾತನಾಡಿ, ಸಾತನೂರಿನಲ್ಲಿ ಡಿಕೆಶಿ ತಮ್ಮ ತಾಯಿ ಜೊತೆಗೂಡಿ ನಡೆಸಿದ ಬೃಹತ್ ಬಹಿರಂಗ ಸಭೆಯಲ್ಲಿ ಡಿಕೆಶಿ ತಾಯಿಯವರ ಕಾಲಿಗೆ ಬಿದ್ದು ತಪ್ಪಾಯಿತೆಂದು ಹತ್ತಾರು ಬಾರಿ ಕ್ಷಮೆ ಕೇಳಿ ತಲೆ ತಗ್ಗಿಸಿಕೊಂಡು ಹೋಗಿದ್ದನ್ನ ರಾಜ್ಯದ ಜನತೆ ಮರೆತಿಲ್ಲ. ಬೇಕಿದ್ದರೇ ಆ ದಿನದ ಪೋಲಿಸ್ ಕಡತ, ದೃಶ್ಯ ಹಾಗೂ ಮುದ್ರಣ ಮಾಧ್ಯಮದ ವರದಿ ತರಿಸಿಕೊಂಡು ನೋಡಿ. ತಮ್ಮ ನಾಲಿಗೆ ಹೇಗೇಗೆ ಒರಳುತ್ತದೆ ಎನ್ನುವುದನ್ನ ಮತ್ತೊಮ್ಮೆ ಮಗದೊಮ್ಮೆ ಸ್ಮರಿಸಿಕೊಳ್ಳಲಿ ಎಂದು ಮರಸಪ್ಪ ರವಿ ಹಳೆಯ ನೆನಪೊಂದನ್ನ ಕುಮಾರಸ್ವಾಮಿಯವರಿಗೆ ನೆನಪಿಸಿದ್ದಾರೆ. ಇದನ್ನೂ ಓದಿ: ವಿಜಯೇಂದ್ರ ಪಾಪ ಇನ್ನೂ ಮಗು: ಚಲುವರಾಯಸ್ವಾಮಿ
ಹತಾಶೆಯ ಭಾವದಲ್ಲಿ ಯಾರನ್ನ ಮೆಚ್ಚಿಸಲು ಇಂತಹ ಸುಳ್ಳುಗಳನ್ನ ದಿನಕ್ಕೊಂದರಂತೆ ಡಿ.ಕೆ.ಶಿವಕುಮಾರ್ ಅವರ ಮೇಲೆ ಪೋಣಿಸುತ್ತೀದ್ದೀರಿ? ಹಾಸನದಿಂದ ಬಂದು ರಾಮನಗರದಲ್ಲಿ ರಾಜಕೀಯ ಜೀವನ ಕಟ್ಟಿಕೊಂಡ ನೀವು ಇಲ್ಲಿನ ಜನಕ್ಕೆ, ಮಣ್ಣಿಗೆ ಋಣಿಯಾಗಿರಿ, ಅಧಿಕ್ಕಾರಕ್ಕಾಗಿ ‘ಸಮಯದ ಬೊಂಬೆ ನಾಟಕ’ ನಿಲ್ಲಿಸಿದರೆ ತಮ್ಮ ಘನತೆಗೆ ಗೌರವ ಸಿಗುತ್ತದೆ. ಇಲ್ಲವಾದಲ್ಲಿ ಸಾತನೂರಿನಲ್ಲಿ ತಲೆ ತಗ್ಗಿಸಿದಂತೆ ರಾಜ್ಯದ ಜನರ ಮುಂದೆ ತಲೆ ತಗ್ಗಿಸಬೇಕಾಗುತ್ತದೆ ಎಂದು ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ಅಧಿಕ್ಕಾರಕ್ಕಾಗಿ ಒಮ್ಮೆ ಬಿಜೆಪಿ, ಒಮ್ಮೆ ಕಾಂಗ್ರೆಸ್ ಈಗ ಮತ್ತೊಮ್ಮೆ ಬಿಜೆಪಿ ಇಂತಹ ಸಮಯದ ಬೊಂಬೆ ಆಟ ನಿಲ್ಲಿಸಿ, ನಿಮ್ಮ ಪಕ್ಷದ ಉಚ್ಚಾಟಿತ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಮಾಡಿರುವ ಆರೋಪಕ್ಕೆ ಸೂಕ್ತ ಉತ್ತರ ಕೊಟ್ಟು, ನಂತರ ಡಿ.ಕೆ. ಶಿವಕುಮಾರ್ ಬಗ್ಗೆ ಮಾತನಾಡಿ ಎಂದು ಮರಸಪ್ಪ ರವಿ ಸಲಹೆ ನೀಡಿದ್ದಾರೆ.